ಅಣ್ಣನ ಅಂತ್ಯಕ್ರಿಯೆ ಮುಗಿಸಿ ಹೋದವ ಬೆಂಗಳೂರಲ್ಲಿ ಶವವಾದ
ಕುಂದಾಪುರ, ನವೆಂಬರ್, 20 : ಅನಾರೋಗ್ಯಪೀಡಿತನಾಗಿ ಮರಣ ಹೊಂದಿದ ಅಣ್ಣನ ಅಂತ್ಯಕ್ರಿಯೆ ಮುಗಿಸಿ ವಾಪಸ್ಸು ಬೆಂಗಳೂರಿಗೆ ತೆರಳುತಿದ್ದ ತಮ್ಮನ ಕಾರು ಪಲ್ಟಿಯಾದ ಪರಿಣಾಮ ತಮ್ಮನು ಮೃತಪಟ್ಟ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಗುಡ್ಡೆ ಮಾರನ ಹಳ್ಳಿ ಸಮೀಪ ನಡೆದಿದೆ.
ಕುಂದಾಪುರ ತಾಲೂಕಿನ ಹೆಮ್ಮಾಡಿಯ ಪತಿಬೆಟ್ಟು ಒಳಗಿನ ಮನೆ ನಿವಾಸಿ ರಘುಪತಿ ಪೂಜಾರಿ (42) ಅಪಘಾತದಲ್ಲಿ ಸಾವಿಗೀಡಾದ ವ್ಯಕ್ತಿ . ಈತ ಬೆಂಗಳೂರಿನಲ್ಲಿ ಬನ್ನೇರುಘಟ್ಟ ರಸ್ತೆಯ ಹುಳಿಮಾವು ಎಂಬಲ್ಲಿ ಬೀಡಾ ಅಂಗಡಿ ನಡೆಸುತಿದ್ದನು.[ಉಡುಪಿ : ಮಹಿಳೆ ಪ್ರಾಣ ತೆಗೆದ ಮೀನಿನ ಲಾರಿ]

ಮೂರು ದಿನಗಳ ಹಿಂದೆ ರಘುಪತಿ ಪೂಜಾರಿಯ ಸಹೋದರ ಶೀನ ಪೂಜಾರಿ (45) ಎಂಬವರು ದೀರ್ಘಕಾಲದ ಅಸೌಖ್ಯದಿಂದ ಹೆಮ್ಮಾಡಿಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಗೆಂದು ತಮ್ಮ ಸ್ಯಾಂಟ್ರೋ ಕಾರಿನಲ್ಲಿ ಚಾಲಕ ಗುರುಸ್ವಾಮಿ ಎಂಬಾತನೊಂದಿಗೆ ಪತ್ನಿ ಶಾರದಾ ಹಾಗೂ ಇಬ್ಬರು ಮಕ್ಕಳೊಂದಿಗೆ ಆಗಮಿಸಿದ್ದರು .
ಅಣ್ಣನ ಅಂತ್ಯಕ್ರಿಯೆ ಮುಗಿಸಿ ಬುಧವಾರ ಸಂಜೆ ವಾಪಸ್ಸು ಬೆಂಗಳೂರಿಗೆ ಹೊರಟಿದ್ದರು. ಗುರುವಾರ ಮುಂಜಾನೆ ಸುಮಾರು 3.30ಕ್ಕೆ ಮಾಗಡಿಯ ಗುಡ್ಡೆ ಮಾರನಹಳ್ಳಿ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿದೆ. ಅಪಘಾತದಲ್ಲಿ ರಘುಪತಿ ತಲೆಗೆ ಗಂಭೀರ ಗಾಯಗಳಾಗಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಆದರೆ ಅವರ ಪತ್ನಿ ಶಾರದಾ ಹಾಗೂ ಇಬ್ಬರು ಮಕ್ಕಳು ಹಾಗೂ ಗುರುಸ್ವಾಮಿ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.[ಬೇಡದ ವಿಷಯದಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ]
ದುಃಖದಲ್ಲಿ ಮುಳುಗಿದ ಕುಟುಂಬ ಮೂರೇ ದಿನದಲ್ಲಿ ಸಹೋದರರಿಬ್ಬರು ತೀರಿಕೊಂಡ ಪರಿಣಾಮ ರಘುಪತಿ ಕುಟುಂಬ ಈಗ ದುಃಖಸಾಗರದಲ್ಲಿ ಮುಳುಗಿದೆ. ಮನೆಯ ಎರಡು ಕಣ್ಣುಗಳಂತಿದ್ದ ಶೀನ ಪೂಜಾರಿ ಹಾಗೂ ರಘುಪತಿ ಪೂಜಾರಿ ನಿಧನದಿಂದ ಕುಟುಂಬ ದಿಕ್ಕು ತೋಚದಂತಾಗಿದ್ದು, ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.












Click it and Unblock the Notifications