ಮಂಗಳೂರು: ಕೆಟಿಎಂ ಏರ್ಪಡಿಸಿದ್ದ ಆರೇಂಜ್ ಡೇ ಸಮಾರಂಭ ಯಶಸ್ವಿ

ಮಂಗಳೂರು, ಸೆಪ್ಟೆಂಬರ್, 28 : ಯುರೋಪಿಯನ್ ರೇಸಿಂಗ್ ನಲ್ಲಿ ಖ್ಯಾತಿ ಪಡೆದ ಕೆಟಿಎಂ (Kraftfahrzeuge Trunkenpolz Mattighofen) ಕಂಪನಿ ಮಂಗಳೂರಿನ ಬೈಕ್ ಪ್ರಿಯರಿಗಾಗಿ ಆರೇಂಜ್ ಡೇ ಕಾರ್ಯಕ್ರಮವನ್ನು ನಗರದ ಹಂಪನಕಟ್ಟೆಯಲ್ಲಿ ಏರ್ಪಡಿಸಿತ್ತು. ಕೆಟಿಎಂ ಮಾಲೀಕರು, ನುರಿತ ತಜ್ಞರು ಬೈಕ್ ಸವಾರಿಗೆ ಆರ್ ಸಿಎಸ್ ನ ಶಕ್ತಿಯುತ ಪ್ರದರ್ಶನ ಮತ್ತು ರೇಸ್ ಪಥದ ಮಹತ್ವವನ್ನು ತಿಳಿಸಲಾಯಿತು.

ನಗರದಲ್ಲಿ ನಡೆದ ಈ ಸಮಾರಂಭದಲ್ಲಿ ಕೋರ್ ರೇಸಿಂಗ್ ಸ್ಪರ್ಧೆಗೆ ತಕ್ಕಂತೆ ವಿನ್ಯಾಸಗೊಳಿದ ದ್ವಿಚಕ್ರವಾಹನ ಹಾಗೂ ಕೆಟಿಎಂ ಪವರ್ ನ ಉಡುಗೆ ತೊಡುಗೆ, ಉಪಹಾರ ಪ್ರದರ್ಶನಕ್ಕಿಡಲಾಗಿತ್ತು. ಇದರಲ್ಲಿ 200ಕ್ಕೂ ಅಧಿಕ ಡ್ಯೂಕ್ ಗ್ರಾಹಕರು, 200 ಆರ್ ಸಿ ಬೈಕ್ ದಾರರು ಇದರಲ್ಲಿ ಪಾಲ್ಗೊಂಡಿದ್ದರು.[ಮಂಗಳೂರು : ಶೀಘ್ರದಲ್ಲೇ ರಸ್ತೆ, ಫುಟ್ಪಾತ್ ಅಭಿವೃದ್ಧಿ]

KTM organized Orange Day programme in Mangaluru

ಕೆಟಿಎಂ ಭಾರತದ ಮುಖ್ಯಸ್ಥ ಅಮಿತ ನಂದಿ ಮಾತನಾಡಿ, 'ಕೆಟಿಎಂ ಬ್ರ್ಯಾಂಡ್ ಬೈಕ್ ತನ್ನದೇ ಆದ ವಿಶಿಷ್ಟ ಗುಣಲಕ್ಷಣಗಳಿಂದಾಗಿ ಬೈಕ್ ಸವಾರರ ಮನಗೆದ್ದಿದೆ. ಕೆಟಿಎಂ ಬೈಕ್ ಖರಿದೀಸಿರುವ ಬಹುಮಂದಿ ರೇಸ್ ನಲ್ಲಿ ಪಾಲ್ಗೊಂಡು ಬಹಳಷ್ಟು ರೋಮಾಂಚನ ಅನುಭವಿಸಿದ್ದಾರೆ. ಇಂತಹ ಕಾರ್ಯಕ್ರಮಗಳನ್ನು ರಾಜ್ಯದ ಪ್ರತಿ ನಗರಗಳಲ್ಲೂ ಹಮ್ಮಿಕೊಳ್ಳಲು ಚಿಂತನೆ ನಡೆಸಲಾಗಿದೆ' ಎಂದು ಹೇಳಿದರು

ಭಾರತದ ಅಹಮದಾಬಾದ್, ದೆಹಲಿ, ಪುಣೆ, ಕೊಲ್ಕತ್ತಾ, ಬೆಂಗಳೂರು, ಚೆನ್ನೈ, ಮುಂಬೈ, ಕೊಚ್ಚಿ ಇನ್ನು ಕಡೆ ಆರೇಂಜ್ ಡೇ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೆಟಿಎಂ ಬ್ರ್ಯಾಂಡ್ ನ ಒಂದು ಅವಿಭಾಜ್ಯ ಅಂಗ ರೇಸಿಂಗ್. ಇದರಿಂದ 14 ಪ್ರತಿಷ್ಠಿತ ಡಾಕರ್ ರ್ಯಾಲಿ ಪ್ರಶಸ್ತಿಗಳು, ವಿವಿಧ ಭಾಗಗಳಲ್ಲಿ 250ಕ್ಕೂ ಹೆಚ್ಚು ವಿಶ್ವಚಾಂಪಿಯನ್ ಶಿಪ್ ಪ್ರಶಸ್ತಿ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+