'ಕುಮಾರಸ್ವಾಮಿ ಹೇಳಿಕೆ ಸಿಎಂ ಹುದ್ದೆಯ ಘನತೆಗೆ ತಕ್ಕುದಲ್ಲ'

ಉಡುಪಿ, ಮಾರ್ಚ್ 19: ಉಡುಪಿ ಜನರಿಗೆ ತಿಳುವಳಿಕೆ ಕಡಿಮೆ ಎಂದು ಹೇಳಿಕೆ ನೀಡಿರುವ ಸಿಎಂ ಎಚ್ ಡಿ ಕುಮಾರಸ್ವಾಮಿ ವಿರುದ್ಧ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಗರಂ ಆಗಿದ್ದಾರೆ.

ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಹೇಳಿಕೆ ಮುಖ್ಯಮಂತ್ರಿ ಹುದ್ದೆಯ ಘನತೆಗೆ ತಕ್ಕುದಲ್ಲ. ಆವತ್ತು ಬಜೆಟ್ ನಲ್ಲಿ ಕರಾವಳಿ ಗೆ ಅನ್ಯಾಯ ಮಾಡಿದ್ರಿ. ವಿಧಾನ ಸೌಧದ ಎದುರು ಕರಾವಳಿ ಶಾಸಕರು ಧರಣಿ ಕೂತದ್ದು ಮರೆತ್ರಾ? ಕರಾವಳಿಗೆ ನಿಮ್ಮ ಕೊಡುಗೆ ಏನು ? ಅಂತ ಮೊದಲು ಹೇಳಿ ಎಂದು ಪ್ರಶ್ನಿಸಿದರು.

ಉಡುಪಿ ಜನ ನಿಮ್ಮ ವಿರುದ್ಧ ತಿರುಗಿ ಬಿದ್ದಿದ್ದಾರೆ. ನಿಮಗೆ ಮತ ಹಾಕಿಲ್ಲ ಅಂತ ಕರಾವಳಿ ಜನರ ಅವಹೇಳನ ಮಾಡ್ತೀರಾ? ಹೇಳಿಕೆ ವಾಪಾಸು ಪಡೆದು ಕ್ಷಮೆ ಕೇಳಿ ಎಂದು ಒತ್ತಾಯಿಸಿದ ಶ್ರೀನಿವಾಸ್ ಪೂಜಾರಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದೇಶದಲ್ಲೇ ಉಡುಪಿ ಮುಂಚೂಣಿಯಲ್ಲಿದೆ. ಆದರೆ ಕರಾವಳಿಯ ಅಭಿವೃದ್ಧಿಗೆ ದೇವೇಗೌಡರ ಕುಟುಂಬ ಕಾರಣ ಅಲ್ಲ.

Kota Srinivas poojari slamms CM HD Kumaraswamy

ರೇವಣ್ಣ ಲೋಕೋಪಯೋಗಿ ಇಲಾಖೆಯಿಂದ ಕರಾವಳಿಗೆ ಏನು‌ ಕೊಟ್ಟಿದ್ದೀರಿ? ನಿಮ್ಮ ಕುಟುಂಬ ರಾಜಕಾರಣಕ್ಕೆ ಕರಾವಳಿಗರು ಬೆಲೆ ನೀಡಲ್ಲ. ನಿಮ್ಮ ಪಕ್ಷಕ್ಕೆ ವಿದ್ಯಾವಂತ ಜನರು ವೋಟ್ ಹಾಕಲ್ಲ. ಇಲ್ಲಿಯ ಜನ ಮುಂದಿನ ಚುನಾವಣೆಯಲ್ಲಿ ಜಿಡಿಎಸ್ ಅಭ್ಯರ್ಥಿಗೆ ತಕ್ಕಪಾಠ ಕಲಿಸ್ತಾರೆ. ನಿಮ್ಮ ಮಾತಿನಿಂದ ಬಿಜೆಪಿಗೆ ಬಹುಮತ ಬರಲು ಅನುಕೂಲವಾಗಿದೆ ಎಂದು ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಲೋಕ್ ಪಾಲ್ ಮಸೂದೆ ಬಗ್ಗೆ ಪ್ರತಿಕ್ರಿಯಿಸಿದ ಶ್ರೀನಿವಾಸ್ ಪೂಜಾರಿ, ಲೋಕ್ ಪಾಲ್ ಮಸೂದೆ ಭಾರತ ದೇಶದ ಜನರ ಕನಸು. ಅದಕ್ಕಾಗಿ ಅಣ್ಣಾ ಹಜಾರೆ ಧರಣಿ ಕುಳಿತು ದೊಡ್ಡ ಹೋರಾಟ ಕೊಟ್ಟಿದ್ದರು. ಆ ಮಸೂದೆಗೆ 5 ವರ್ಷದಿಂದ 7 ಮೀಟಿಂಗ್ ಆಗಿದೆ. ಮಲ್ಲಿಕಾರ್ಜುನ ಖರ್ಗೆ ವಿಪಕ್ಷ ನಾಯಕ ಅಲ್ಲದಿದ್ದರೂ ಸಭೆಗೆ ಆಹ್ವಾನಿಸಲಾಗಿತ್ತು. ಕಾಂಗ್ರೆಸ್‌ ಸಂಸದೀಯ ನಾಯಕನ ನೆಲೆಯಲ್ಲಿ ಖರ್ಗೆಗೆ ಮೋದಿ ಆಹ್ವಾನ ನೀಡಿದ್ದರು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+