Get Updates
Get notified of breaking news, exclusive insights, and must-see stories!

ಸೆಪ್ಟೆಂಬರ್ 23 ರಂದು ಕೊಂಕಣ ರೈಲ್ವೆ ಸಂಚಾರದಲ್ಲಿ ವ್ಯತ್ಯಯ

ಮಂಗಳೂರು, ಸೆಪ್ಟೆಂಬರ್. 21: ಕರಾವಳಿಯ ರೈಲು ಪ್ರಯಾಣಿಕರಿಗೆ ಸೆಪ್ಟೆಂಬರ್ 23 ರಂದು ಭಾನುವಾರ ಸಮಸ್ಯೆ ಎದುರಾಗಲಿದೆ. ಯಾಕೆಂದರೆ ಅಂದು ಕೊಂಕಣ ರೈಲ್ವೆ ಮಾರ್ಗದಲ್ಲಿ ಕಾರವಾರ ಹಾಗೂ ತೋಕೂರು ನಡುವೆ ಕೆಲ ಇಂಜಿನಿಯರಿಂಗ್ ಹಾಗೂ ವಿದ್ಯುದ್ದೀಕರಣದ ಕಾಮಗಾರಿಗಳು ನಡೆಯಲಿವೆ.

ಈ ಹಿನ್ನೆಲೆಯಲ್ಲಿ ಅಂದು ಈ ಮಾರ್ಗದಲ್ಲಿ ಸಂಚರಿಸುವ ಒಂದು ರೈಲಿನ ಸಂಚಾರವನ್ನು ರದ್ದುಗೊಳಿಸಲಾಗಿದ್ದು ಇನ್ನಿತರ ಪ್ರಮುಖ ರೈಲುಗಳ ಸಂಚಾರ ಸಮಯದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ.

ಕರಾವಳಿಯ ಪ್ರಯಾಣಿಕರು ಸಹಕರಿಸುವಂತೆ ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ಮಂಗಳೂರು ಸೆಂಟ್ರಲ್-ಮಡಗಾಂವ್- ಮಂಗಳೂರು ಸೆಂಟ್ರಲ್ ನಡುವೆ ಸಂಚರಿಸುವ ರೈಲು ನಂ.22636-22635 ಇಂಟರ್ ಸಿಟಿ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಸೆ.23ರಂದು ರದ್ದುಪಡಿಸಲಾಗಿದೆ.

Konkan Railway route timing changed for September 23

ರೈಲು ನಂ. 12620 ಮಂಗಳೂರು ಸೆಂಟ್ರಲ್-ಕುರ್ಲಾ ಟರ್ಮಿನಸ್ ಮತ್ಸಗಂಧ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ನಿಂದ 2ಗಂಟೆ 45 ನಿಮಿಷ ತಡವಾಗಿ ಅಂದರೆ ಅಪರಾಹ್ನ 3:15ಕ್ಕೆ ಹೊರಡಲಿದೆ. ಅದಲ್ಲದೇ ರೈಲು ನಂ.56641 ಮಡಗಾಂವ್- ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲು ಅಂಕೋಲ ರೈಲ್ವೆ ನಿಲ್ದಾಣದಲ್ಲಿ 1 ಗಂಟೆ ನಿಲ್ಲಲಿದೆ.

ರೈಲು ನಂ. 12617 ಎರ್ನಾಕುಲಂ-ನಿಜಾಮುದ್ದೀನ್ 'ಮಂಗಳಾ ಲಕ್ಷದ್ವೀಪ' ಎಕ್ಸ್‌ಪ್ರೆಸ್ ತೊಕೂರಿನಲ್ಲಿ 20 ನಿಮಿಷ ನಿಲ್ಲಲಿದೆ. ರೈಲು ನಂ.22634 ನಿಜಾಮುದ್ದೀನ್- ತ್ರಿವೆಂಡ್ರಂ ಎಕ್ಸ್‌ಪ್ರೆಸ್ ಕುಂದಾಪುರ ರೈಲು ನಿಲ್ದಾಣದಲ್ಲಿ 45 ನಿಮಿಷ ನಿಲ್ಲಲಿದೆ.

ರೈಲು ನಂ.02198 ಜಬಲ್ ಪುರ-ಕೊಯಮತ್ತೂರು ವಿಶೇಷ ರೈಲು ಅಂಕೋಲ ರೈಲು ನಿಲ್ದಾಣದಲ್ಲಿ 1 ಗಂಟೆ 10 ನಿಮಿಷ ನಿಲ್ಲಲಿದೆ ಎಂದು ಕೊಂಕಣ್ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+