ಮಂಗಳೂರು ಚಲೋ ಈಗ ಟ್ವಿಟ್ಟರಲ್ಲಿ ನಂ.1 ಟ್ರೆಂಡಿಂಗ್
ಬೆಂಗಳೂರು, ಸೆ.04: ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ಮಂಗಳೂರು ಚಲೋ ಪ್ರತಿಭಟನಾ ಬೈಕ್ ಜಾಥಾ ಇಡೀ ಭಾರತದಲ್ಲಿ ದೊಡ್ಡ ಅಲೆ ಎಬ್ಬಿಸುತ್ತಿದೆ. ಈ ಸಮಯಕ್ಕೆ ಟ್ವಿಟ್ಟರಲ್ಲಿ ನಂ.1 ಟ್ರೆಂಡಿಂಗ್ ತಲುಪಿದೆ. ಬಹುತೇಕ ಟ್ವೀಟ್ ಗಳು ಕರ್ನಾಟಕ ಸರ್ಕಾರದ ವಿರುದ್ಧವೇ ಇದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಏನಿದು ಬೈಕ್ ಜಾಥಾ? ಯಾಕೆ ವಿರೋಧ? ಮುಂದೆ ಓದಿ...
ಕರ್ನಾಟಕದಲ್ಲಿ ಹಿಂದೂ ಪರ ಸಂಘಟನೆಗಳ ಮುಖಂಡರ ಸರಣಿ ಹತ್ಯೆಗಳು ನಡೆದಿದ್ದು, 12ಕ್ಕೂ ಅಧಿಕ ಕಾರ್ಯಕರ್ತರನ್ನು ಕಾಂಗ್ರೆಸ್ ಸರ್ಕಾರ ಬಲಿ ಪಡೆದಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ನ್ಯಾಯಕ್ಕಾಗಿ ಆಗ್ರಹಿಸಿ ಮಂಗಳೂರು ಚಲೋ ಹೆಸರಿನಲ್ಲಿ ಬೈಕ್ rally ಹಮ್ಮಿಕೊಳ್ಳಲಾಗಿದೆ.
ಇತ್ತೀಚೆಗೆ ನಡೆದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಹತ್ಯೆ ಹಾಗೂ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಂಟಾದ ಪ್ರಕ್ಷುಬ್ದ ಪರಿಸ್ಥಿತಿಯನ್ನು ಖಂಡಿಸಿ ಈ ಜಾಥಾವನ್ನು ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದೆ. ಆದರೆ, ಕಾನೂನು ಮತ್ತು ಸುವ್ಯವಸ್ಥೆ, ಶಾಂತಿ ಕಾಪಾಡುವ ನಿಟ್ಟಿನಲ್ಲಿ ಈ ಜಾಥಾಕ್ಕೆ ಮಂಗಳೂರು ಪೊಲೀಸರು ಅನುಮತಿ ನೀಡಿಲ್ಲ.

ಬಿಜೆಪಿಯಿಂದ ಬೈಕ್ ಜಾಥಾ ಏಕೆ?
ಬೈಕ್ ಜಾಥಾ ಏಕೆ?:
* ದೇಶದ್ರೋಹಿ ಸಂಘಟನೆಗಳಾದ PFI, KFD, SDFI ಯನ್ನು ರಾಜ್ಯದಲ್ಲಿ ನಿಷೇಧಿಸಬೇಕು.
* ಹಿಂದೂಗಳ ಮೇಲಾಗಿರುವ ಎಲ್ಲಾ ಹತ್ಯೆ ಹಾಗೂ ಹಲ್ಲೆ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಬೇಕು.
* ಕೋಮು ಹಿಂಸೆಗೆ ಕುಮ್ಮಕ್ಕು ನೀಡುತ್ತಿರುವ ಸಚಿವ ರಮಾನಾಥ ರೈಯನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ, ಹಿಂದೂ ಕಾರ್ಯಕರ್ತರ ಕಗ್ಗೊಲೆ ಖಂಡಿಸಿ, ಬೈಕ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ಪ್ರಕಟಿಸಿದೆ.
|
ಸಿಟಿ ರವಿ ಅವರಿಂದ ನಿರಂತರ ಟ್ವೀಟ್
ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ಬೈಕ್ ಜಾಥಾಗೆ ಸಿಗುತ್ತಿರುವ ಬೆಂಬಲ, ಗುಪ್ತಚರ ವರದಿ ನೋಡಿ ಕಾಂಗ್ರೆಸ್ ಸರ್ಕಾರ ಕಂಗಾಲಾಗಿದೆ. ಯುದ್ಧಕ್ಕೆ ಮುನ್ನವೇ ಸೋಲೋಪ್ಪಿಕೊಂಡಿದೆ ಎಂದು ಬಿಜೆಪಿ ಮುಖಂಡ ಸಿ.ಟಿ ರವಿ ಟ್ವೀಟ್ ಮಾಡಿದ್ದಾರೆ.
|
ಮಂಗಳೂರು ಚಲೋ ಟ್ರೆಂಡಿಂಗ್
ರಾಜ್ಯದ ವಿವಿಧೆಡೆಗಳಿಂದ ಮಂಗಳೂರಿನ ಕಡೆಗೆ ತೆರಳಬೇಕಿದ್ದ ಮಂಗಳೂರು ಚಲೋ ಬೈಕ್ ಜಾಥಾಗೆ ಮಂಗಳೂರು ಪೊಲೀಸರು ನಿರ್ಬಂಧ ಹೇರುತ್ತಿದ್ದಂತೆ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಲು ಆರಂಭವಾಯಿತು. ಕರ್ನಾಟಕ ಸರ್ಕಾರದ ವಿರುದ್ಧ ಹಿಂದೂ ಪರ ಸಂಘಟನೆ, ಬಿಜೆಪಿ ಪರ ಸಾರ್ವಜನಿಕರು, ಮುಖಂಡರು ಟ್ವೀಟ್ ಮಾಡತೊಡಗಿದರು.
|
ವಿವಿಧೆಡೆಗಳಲ್ಲಿ ಅನುಮತಿ ನಿರಾಕರಣೆ
ಈ ಮಂಗಳೂರು ಚಲೋ ಸಮಾವೇಶಕ್ಕೆ ಹುಬ್ಬಳ್ಳಿ, ಶಿವಮೊಗ್ಗ, ಮೈಸೂರು, ಬೆಂಗಳೂರು, ಚಿಕ್ಕಮಗಳೂರಿನಿಂದ ಬೈಕ್ ಜಾಥಾ ಸೆಪ್ಟೆಂಬರ್ 5 ಹಾಗೂ 6 ರಂದು ಹೊರಡಲಿದ್ದು, ಸೆಪ್ಟೆಂಬರ್ 7 ರಂದು ಮಂಗಳೂರು ತಲುಪಿ ಬೃಹತ್ ಸಮಾವೇಶ ನಡೆಸಲು ಬಿಜೆಪಿ ನಿರ್ಧರಿಸಿದೆ. ಆದರೆ, ಜಾಥಾಕ್ಕೆ ಹೊರಡುವ ಬೈಕ್ ಸವಾರರಿಗೆ ಮೇಲ್ಕಂಡ ಜಿಲ್ಲೆಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಆಯಾ ಜಿಲ್ಲೆಗಳ ಪೊಲೀಸ್ ವರಿಷ್ಠರು ಹೇಳಿದ್ದಾರೆ.
|
ಅಶ್ವಥ ನಾರಾಯಣರಿಂದ ಟ್ವೀಟ್
ಆಡಳಿತ ಯಂತ್ರವನ್ನು ಸಂಪೂರ್ಣವಾಗಿ ದುರುಪಯೋಗ ಪಡಿಸಿಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರದ ಅಡೆ ತಡೆಗಳಿಗೆ ನಾವು ಹೆದರುವುದಿಲ್ಲ. ಬೈಕ್ ಜಾಥಾ ನಡೆಸುತ್ತೇವೆ ಎಂದು ಬಿಜೆಪಿ ಮುಖಂಡ ಅಶ್ವಥನಾರಾಯಣ ಅವರು ಘೋಷಿಸಿದ್ದಾರೆ.
|
ಪಿಎಫ್ ಐ ನಿಷೇಧಕ್ಕೆ ಆಗ್ರಹ
ಪಿಎಫ್ ಐ ಹಾಗೂ ಎಸ್ ಡಿ ಪಿಐಗಳು ಉಗ್ರ ಸಂಘಟನೆಗಳಾಗಿದ್ದು, ಸಾವಿರಾರು ಕೇಸುಗಳನ್ನು ಎದುರಿಸುತ್ತಿದ್ದರೂ ಸರ್ಕಾರ ಇನ್ನೂ ನಿಷೇಧ ಹೇರಿಲ್ಲ ವೇಕೆ? ಎಂದು ಬಿಜೆಪಿ ಪ್ರಶ್ನಿಸಿದೆ.
|
ದಕ್ಷಿಣ ಕನ್ನಡದ ಅಶಾಂತ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿ ಆರ್ ಪಿ ಸಿ ಸೆಕ್ಷನ್ 144 ಹಾಕಿದ್ದಲ್ಲದೆ, ಆತಂಕದಲ್ಲಿ ಜನತೆ ಬದುಕುವಂತೆ ಮಾಡಿದ ಕಾಂಗ್ರೆಸ್ ಸರ್ಕಾರದ ನಡೆ ನಿರೀಕ್ಷಿತವಾಗಿದೆ. ಆದರೆ, ಬಿಜೆಪಿ ಇಂಥ ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.











Click it and Unblock the Notifications