ಈ ದೇವರ ಮೀನುಗಳಿಗೆ ಆಹಾರ ಹಾಕಿದರೆ ಚರ್ಮ ರೋಗ ಮಾಯ!
ಮಂಗಳೂರು, ನವೆಂಬರ್ 07; ಈ ಪ್ರಕೃತಿ ಹಲವು ವಿಸ್ಮಯಗಳನ್ನು ಸೃಷ್ಠಿ ಮಾಡುತ್ತದೆ. ವೈದ್ಯ ಲೋಕಕ್ಕೂ ಅಚ್ಚರಿಯಾಗುವಂತಹ ವಿಚಾರಗಳು ಈ ಪ್ರಕೃತಿಯಲ್ಲಿ ಅಡಗಿದೆ. ಆಧುನಿಕ ಕಾಲದಲ್ಲಿ ಪವಾಡಗಳಿಗೆ ಮನ್ನಣೆಯಿಲ್ಲದಿದ್ದರೂ, ಜನರ ನಂಬಿಕೆಯಿಂದ ಮತ್ತು ಆಚರಣೆಯಿಂದ ಆ ವಿಸ್ಮಯಗಳು ಇಂದಿಗೂ ಅದೇ ಕುತೂಹಲತೆಯನ್ನು ಉಳಿಸಿಕೊಂಡಿದೆ.
ಇದೇ ರೀತಿ ದಕ್ಷಿಣ ಜಿಲ್ಲೆಯ ಸುಳ್ಯ ತಾಲೂಕಿನ ದೇವಾಲಯದಲ್ಲಿ ಇಂದಿಗೂ ಅಚ್ಚರಿ ಮೂಡಿಸುವಂತಹ ಘಟನೆಗಳು ನಡೆಯುತ್ತಿದೆ. ಸುಳ್ಯದ ತೋಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಹಳ್ಳದಲ್ಲಿರುವ ದೇವರ ಮೀನುಗಳಿಗೆ ಆಹಾರ ಹಾಕಿದರೆ ಸಾಕು ಮೈ ಮೇಲಿದ್ದ ಚರ್ಮ ರೋಗಗಳೆಲ್ಲಾ ಶಮನವಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
ದೇವಾಲಯ ತೆರವು ವಿವಾದ, ನಂಜನಗೂಡು ತಹಶೀಲ್ದಾರ್ ವರ್ಗಾವಣೆ
ಸುಳ್ಯದ ಪುರಾತನ ಕ್ಷೇತ್ರವಾದ ತೋಡಿಕಾನ ಮಲ್ಲಿಕಾರ್ಜುನ ಕ್ಷೇತ್ರದ ಪಕ್ಕದಲ್ಲೇ ಹರಿಯುವಂತಹ ಹಳ್ಳವೊಂದರಲ್ಲಿ ಸಾವಿರಾರು ಸಂಖ್ಯೆಯ ಮೀನುಗಳಿದ್ದು, ಈ ಮೀನುಗಳಿಗೆ ಅಕ್ಕಿ ಹಾಗೂ ಹೊದಲು ಹಾಕಿ ಪ್ರಾರ್ಥನೆ ಮಾಡಿಕೊಂಡಲ್ಲಿ ಎಲ್ಲಾ ರೀತಿಯ ಚರ್ಮರೋಗಗಳು ಮಾಯವಾಗುತ್ತದೆ ಎನ್ನುವ ನಂಬಿಕೆ ಇಲ್ಲಿನ ಭಕ್ತರದ್ದಾಗಿದೆ.
ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿ; ಸ್ಪಷ್ಟನೆ ಕೊಟ್ಟ ಸಚಿವರು
ಈ ನಂಬಿಕೆಯ ಹಿನ್ನಲೆಯಾಗಿ ಇಲ್ಲಿ ಪೌರಾಣಿಕ ಕಥೆಯೊಂದಿದೆ. ಕಣ್ವ ಮಹರ್ಷಿಯು ತೋಡಿಕಾನ ಕ್ಷೇತ್ರದಲ್ಲಿ ಶಿವಲಿಂಗವನ್ನು ಸ್ಥಾಪಿಸಿದರು ಎನ್ನುವ ಐತಿಹ್ಯವಿದೆ. ಕಣ್ವ ಮಹರ್ಷಿಗಳು ತೋಡಿಕಾನದ ಕಾನನದ ನಡುವೆಯೇ ತಮ್ಮ ತಪಸ್ಸನ್ನು ಮಾಡುತ್ತಿದ್ದ ಸಮಯದಲ್ಲಿ ಕ್ಷೇತ್ರದ ಪಕ್ಕದಲ್ಲೇ ಇರುವ ದೇವರಗುಂಡಿ ಎನ್ನುವ ಜಲಪಾತದಿಂದ ಶಿವಲಿಂಗವನ್ನು ತೋಡಿಕಾನ ಕ್ಷೇತ್ರಕ್ಕೆ ತರಲು ನಿರ್ಧರಿಸುತ್ತಾರೆ.
ಕಟೀಲು, ಪೊಳಲಿ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಬ್ಯಾನರ್ ಅಳವಡಿಕೆ
ಈ ಸಂದರ್ಭದಲ್ಲಿ ಕಣ್ವ ಮಹರ್ಷಿಗಳು ಶಿವನನ್ನು ಪ್ರಾರ್ಥಿಸಿದಾಗ ಶಿವ ಮಹರ್ಷಿಯ ಮುಂದೆ ಪ್ರತ್ಯಕ್ಷನಾಗುತ್ತಾನೆ. ಶಿವನ ಜೊತೆಗೆ ವಿಷ್ಣುವೂ ಮತ್ಸರೂಪದಲ್ಲಿ ಬಂದು ಮಹರ್ಷಿಯ ಇಚ್ಛೆಯಂತೆ ದೇವರಗುಂಡಿಯಲ್ಲಿ ಮುಳುಗಿ ಜಲಮಾರ್ಗವಾಗಿ ತೋಡಿಕಾನ ಕ್ಷೇತ್ರ ತಲುಪುತ್ತಾರೆ. ಶಿವನು ಮತ್ಸ್ಯ ವಾಹನನಾಗಿ ಕ್ಷೇತ್ರಕ್ಕೆ ಬಂದು ನೆಲೆ ನಿಲ್ಲುತ್ತಾನೆ.
ಕಣ್ವ ಮಹರ್ಷಿಗಳು ವಿಷ್ಣುವನ್ನು ಪ್ರಾರ್ಥಿಸಿ ಶಿವನ ಜೊತೆಗೆ ವಿಷ್ಣುವೂ ಕ್ಷೇತ್ರದಲ್ಲಿ ಸಾನಿಧ್ಯ ಪಡೆಯಬೇಕೆಂದು ಇಚ್ಚಿಸುತ್ತಾರೆ. ಈ ಕಾರಣಕ್ಕಾಗಿ ವಿಷ್ಣುವು ಮತ್ಸರೂಪದಲ್ಲಿ ಇಂದಿಗೂ ಈ ದೇವರಗುಂಡಿ ತೊರೆಯಲ್ಲಿ ನೆಲೆಸಿದ್ದಾನೆ ಎನ್ನುವುದು ಕ್ಷೇತ್ರ ಪುರಾಣವಾಗಿದೆ.

ಈ ಕಾರಣಕ್ಕಾಗಿಯೇ ಈ ತೊರೆಯಲ್ಲಿ ಲಕ್ಷಾಂತರ ಸಂಖ್ಯೆಯ ಮೀನುಗಳಿದ್ದು, ಈ ಎಲ್ಲಾ ಮೀನುಗಳು ತೋಡಿಕಾನ ಕ್ಷೇತ್ರದ ಪಕ್ಕದಲ್ಲೇ ನೆಲೆ ನಿಂತಿವೆ. ದೇಹಕ್ಕೆ ಕಾಡುವ ಚರ್ಮರೋಗಾಧಿಗಳ ನಿವಾರಣೆಗೆ ಇಲ್ಲಿಗೆ ಬಂದು ಪ್ರಾರ್ಥಿಸಿಕೊಂಡಲ್ಲಿ ಸಮಸ್ಯೆಗಳು ಬಗೆಹರಿಯುತ್ತವೆ ಎನ್ನುವುದು ಇಲ್ಲಿನ ನಂಬಿಕೆಯಾಗಿದೆ. ಮೀನುಗಳ ಬಳಿ ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಲ್ಲಿ ಹಾಗೂ ಹರಕೆ ರೂಪದಲ್ಲಿ ಅಕ್ಕಿ ಹಾಗೂ ಹೊದಲು ಹಾಕುತ್ತೇನೆಂದು ಪ್ರಾರ್ಥಿಸಿಕೊಂಡಲ್ಲಿ ಚರ್ಮರೋಗ ನಿವಾರಣೆಯಾಗುತ್ತದೆ ಎನ್ನುವುದಕ್ಕೆ ಹಲವು ನಿದರ್ಶನಗಳೂ ಇಲ್ಲಿವೆ.
ಕೇವಲ ಹಿಂದೂ ಭಕ್ತಾಧಿಗಳಲ್ಲದೆ ಈ ಮೀನುಗಳಿಗೆ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಧರ್ಮದವರೂ ಬಂದು ಹರಕೆ ರೂಪದಲ್ಲಿ ಅಕ್ಕಿ ಹಾಗೂ ಹೊದಲು ಹಾಕುತ್ತಿದ್ದಾರೆ. ಅಲ್ಲದೆ ತೋಡಿಕಾನ ದೇವಸ್ಥಾನದಲ್ಲಿ ಬೆಳಗ್ಗಿನ ಪೂಜೆಯ ಬಳಿಕ ಅನ್ನ ಪ್ರಸಾದವನ್ನು ಮೊದಲು ಈ ಮೀನುಗಳಿಗೆ ಹಾಕುವ ಸಂಪ್ರದಾಯವನ್ನು ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ.
ಹರಕೆ ತೀರಿಸಿಕೊಳ್ಳಲು ದೇವರಗುಂಡಿ ತೊರೆಯ ಬಳಿ ಬರುವ ಭಕ್ತಾಧಿಗಳ ಕಾಲಿಗೆ ಕಚಗುಳಿಯಿಡುವ ಈ ಮೀನುಗಳು ಭಕ್ತರ ಮನಸ್ಸಿಗೆ ಮುದವನ್ನೂ ನೀಡುತ್ತದೆ. ದೇವರ ಮೀನುಗಳೆಂದೇ ಕರೆಯಲ್ಪಡುವ ಈ ಮೀನುಗಳನ್ನು ಹಿಡಿಯುವುದಾಗಲೀ, ಕೊಲ್ಲುವುದಾಗಲೀ ನಿಷಿದ್ಧವಾಗಿದೆ.
ಮೀನುಗಳಿಗೆ ಹರಕೆ ಹೊತ್ತರೆ ಚರ್ಮರೋಗ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಭಕ್ತರದ್ದಾಗಿದೆ. ಈ ದೇವಾಲಯವು ಕರ್ನಾಟಕದ ಮುಜರಾಯಿ ಇಲಾಖೆಯ 'ಎ' ಶ್ರೇಣಿಯ ದೇವಾಲಯಗಳ ಪಟ್ಟಿಗೆ ಸೇರಿದೆ. ಸಾವಿರಾರು ಭಕ್ತರು ಈ ದೇವಾಲಯಕ್ಕೆ ಆಗಮಿಸುತ್ತಾರೆ.