ಟಿಪ್ಪು ದಾಳಿಯಿಂದ ರಕ್ಷಿಸಿದ ಹಿಂದೂ ಕುಟುಂಬಗಳಿಗೆ ಕ್ರೈಸ್ತರ ಗೌರವ

ಮಂಗಳೂರು, ನವೆಂಬರ್ 28: ಟಿಪ್ಪು ಸುಲ್ತಾನ್ ನಿಂದ ದಾಳಿಗೊಳಗಾದ ಸಂದರ್ಭದಲ್ಲಿ ತಮ್ಮನ್ನು ರಕ್ಷಿಸಿದ ಮೂರು ಹಿಂದೂ ಕುಟುಂಬಗಳಿಗೆ ಕೈಸ್ತ ಬಾಂಧವರು ಪ್ರತೀ ವರ್ಷ ಗೌರವ ಸಲ್ಲಿಸುವ ಸಂಪ್ರದಾಯ ಕಿನ್ನಿಗೋಳಿ ಸಮೀಪದ ದಾಮಸ್ಕಟ್ಟೆಯಲ್ಲಿ ನಡೆಯುತ್ತಿದೆ .

ಮಂಗಳೂರು ಹೊರವಲಯದ ಕಿನ್ನಿಗೋಳಿ ಸಮೀಪದ ದಾಮಸ್ಕಟ್ಟೆ ಕಿರಂ ರೆಮದಿ ಅಮ್ಮನವರ ಚರ್ಚ್ ನಲ್ಲಿ ಬುಧವಾರ ನಡೆದ ವಾರ್ಷಿಕೋತ್ಸವ ಸಮಾರಂಭ ನಡೆಯಿತು. ಟಿಪ್ಪು ಸುಲ್ತಾನ್ ಸೈನ್ಯದ ದಾಳಿ ಸಂದರ್ಭದಲ್ಲಿ ಕಿರಂ ಚರ್ಚ್ ಹಾಗೂ ಕ್ರೈಸ್ತ ಕುಟುಂಬಗಳಿಗೆ ರಕ್ಷಣೆ ನೀಡಿದ ಬಂಟ ಸಮುದಾಯದ ಕುಟಂಬ ಸದಸ್ಯರಿಗೆ ಗೌರವ ಸಲ್ಲಿಸಲಾಯಿತು.

Kiram church honor Hindus families who saved them when Tipu Sultan attacked

ಈ ಬಾರಿ ಪರಿಸರ ಜಾಗೃತಿಯನ್ನು ಮೂಡಿಸುವ ಸಲುವಾಗಿ ಬಾಳೆಗೊನೆ, ವೀಳ್ಯದೆಲೆ ಜೊತೆ ಮೂರು ಗಿಡಗಳನ್ನು ನೀಡಲಾಯಿತು. ಐಕಳಬಾವದ ಜಯಪಾಲ ಶೆಟ್ಟಿ, ತಾಳಿಪಾಡಿಗುತ್ತುವಿನ ದಿನೇಶ್ ಶೆಟ್ಟಿ, ಸುಕುಮಾರ್ ಶೆಟ್ಟಿ ಹಾಗೂ ಏಳಿಂಜೆ ಅಂಗಡಿಗುತ್ತು ಗುತ್ತಿನಾರ್ ಬಾಲಕೃಷ್ಣ ಶೆಟ್ಟಿ, ಶಂಭು ಶೆಟ್ಟಿ ಗೌರವ ಸ್ವೀಕರಿಸಿದರು.

Kiram church honor Hindus families who saved them when Tipu Sultan attacked

ಮಂಗಳೂರು ಕ್ಯಾಥೋಲಿಕ್ ಧರ್ಮ ಪ್ರಾಂತ್ಯದ ಧಮಾಧ್ಯಕ್ಷರಾದ ಬಿಷಪ್ ರೆ. ಡಾ. ಪೀಟರ್ ಪೌಲ್ ಸಲ್ಡಾನಾ ಮುಂದಾಳತ್ವದಲ್ಲಿ ದಾಮಸ್ಕಟ್ಟೆ ಕಿರೆಂ ಚರ್ಚ್ ಧರ್ಮಗುರು ಫಾ. ವಿಕ್ಟರ್ ಡಿಮೆಲ್ಲೊ, ಕಿರಂ ಚರ್ಚ್ ಸಹಾಯಕ ಧರ್ಮಗುರು ರೆ.ಫಾ. ಜಯಪ್ರಕಾಶ್, ಉಪಾಧ್ಯಕ್ಷ ಬರ್ಟನ್ ಸಿಕ್ವೇರಾ, ಕಾರ್ಯದರ್ಶಿ ಅನಿತಾ ಡಿಸೋಜ, ಸಂತಾನ್ ಡಿಸೋಜ ಮತ್ತಿತರರು ಸಂಪ್ರದಾಯದಂತೆ ಗೌರವ ಸಲ್ಲಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+