ಮಂಗಳೂರಲ್ಲಿ ರೋಗಿ ಸಾವು, ವೈದ್ಯರನ್ನು ಜಾಡಿಸಿದ ಸಂಬಂಧಿಕರು

ಉಳ್ಳಾಲ(ಮಂಗಳೂರು), ಆಗಸ್ಟ್, 18 : 'ವೈದ್ಯರೇ ಜೀವ ಉಳಿಸಿ' ಎಂದು ಬರುವ ರೋಗಿಗಳ ಜೀವಗಳಿಗೆ ವೈದ್ಯರೇ ಯಮಪಾಶ ಬೀಸುತ್ತಿದ್ದಾರಾ? ಆಸ್ಪತ್ರೆಗಳು ಸ್ಮಶಾನ ಆಗುತ್ತಿದೆಯಾ? ಇಲ್ಲಿದೆ ಒಂದು ರಿಪೋರ್ಟ್...

ಕೊಟೆಕ್ಕಾರು ಬೀರಿ ನಿವಾಸಿ ಮಹಮ್ಮದ್‌ ಫೈಜಲ್ (23) ಸೋಮವಾರ ರಾತ್ರಿ ದೇರಳ ಕಟ್ಟೆ ಯೇನಪೊಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಇದರಿಂದ ರೊಚ್ಚಿಗೆದ್ದ ಈತನ ಸಂಬಂಧಿಕರು ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಆಸ್ಪತ್ರೆ ಎದುರು ವೈದ್ಯರ ವಿರುದ್ಧ ಘೋಷಣೆ ಕೂಗಿದ್ದಾರೆ.[ಪಲ್ಲವಿಯ ದುರಂತ ಕಥೆಗೆ ಕಂಬನಿ ಮಿಡಿದ ನಮ್ಮ ಓದುಗರು]

Kidney Failure: Patient is died, Mangaluru people have taken protest against doctors

ಫೈಜಲ್ ಅವರು ವರ್ಷದ ಹಿಂದೆ ಉದ್ಯೋಗದ ನಿಮಿತ್ತ ಗಲ್ಫ್ ರಾಷ್ಟ್ರಕ್ಕೆ ತೆರಳಿದ್ದರು. ಅಲ್ಲಿ ಕಿಡ್ನಿ ವೈಫಲ್ಯದಿಂದ ಅನಾರೋಗ್ಯಕ್ಕೆ ಈಡಾಗಿದ್ದರು. ಚಿಕಿತ್ಸೆಗಾಗಿ ಊರಿಗೆ ವಾಪಸಾದ ಅವರನ್ನು ದೇರಳಕಟ್ಟೆ ಆಸ್ಪತ್ರೆಗೆ ಕೆಲವು ದಿನಗಳ ಹಿಂದೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫ‌ಲಕಾರಿಯಾಗದೆ ಕೊನೆಯುಸಿರೆಳೆದಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಸೋಮವಾರ ಮಧ್ಯಾಹ್ನ ಡಯಾಲಿಸಿಸ್ ಗಾಗಿ ವೈದ್ಯರು ರಕ್ತ ಒದಗಿಸಲು ತಿಳಿಸಿದ್ದರು. ಅದರಂತೆ ರಕ್ತವನ್ನು ಸರಿಯಾದ ಅವಧಿಗೆ ಒದಗಿಸಲಾಗಿತ್ತು. ವೈದ್ಯರು ನಿಗಾ ವಹಿಸದೆ ಅವರ ಆಲಸ್ಯ, ಕಡೆಗಣನೆಯಿಂದಲೇ ಈ ಕೃತ್ಯ ಸಂಭವಿಸಿದೆ ಎಂದು ಸಂಬಂಧಿಕರು ದೂರಿದ್ದಾರೆ.

ಪರಿಸ್ಥಿತಿ ಹತೋಟಿಗೆ ತರಲು ಆಸ್ಪತ್ರೆಗೆ ಆಗಮಿಸಿದ ಉಳ್ಳಾಲ ಪೊಲೀಸರ ಎದುರು 'ವೈದ್ಯರು ನಾವು ನೀಡಿದ ರಕ್ತವನ್ನು ಒದಗಿಸಿದ್ದಲ್ಲಿ ಫೈಜಲ್ ಸಾವನ್ನಪ್ಪುವ ಪ್ರಸಂಗವೇ ಬರುತ್ತಿರಲಿಲ್ಲ' ಎಂದು ಸಂಬಂಧಿಕರು, ಸ್ನೇಹಿತರು ಆರೋಪಿಸಿದ್ದು, ವೈದ್ಯರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸುವಂತೆ ಒತ್ತಾಯ ಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+