ಕಟೀಲು ದುರ್ಗಾ ಪರಮೇಶ್ವರಿ ಅವಹೇಳನ, ಫೇಸ್ ಬುಕ್ ನಲ್ಲಿ ಕಿಡಿ

Recommended Video

      ಮಂಗಳೂರು: ಕಟೀಲು ದುರ್ಗಾ ಪರಮೇಶ್ವರಿಗೆ ಮತ್ತೆ ಅವಮಾನ | Oneindia Kannada

      ಮಂಗಳೂರು, ನವೆಂಬರ್ 02 : ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಿಗೆ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಅವಹೇಳನ ಮಾಡಲಾಗಿದೆ.

      ಜಬ್ಬಾರ್ ಮಂಗಳೂರು ಎನ್ನುವ ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿ ಶ್ರೀ ರಾಮ, ಸೀತೆ, ಕಟೀಲು ದುರ್ಗಾಪರಮೇಶ್ವರಿ, ಸ್ವಾಮಿ ಕೊರಗಜ್ಜ ಸೇರಿದಂತೆ ಎಲ್ಲಾ ಹಿಂದೂ ದೇವಿ-ದೇವರುಗಳ ವಿರುದ್ಧ ಅತ್ಯಂತ ಕೀಳುಮಟ್ಟದ ಅಸಹ್ಯಕರ ಭಾಷೆ ಬಳಸಿ ಪೋಸ್ಟ್ ಗಳನ್ನು ಹಾಕಲಾಗಿದೆ.

      Katilu Durgaparameshwari Devi has been abused in the facebook

      ಈ ಹಿನ್ನೆಲೆಯಲ್ಲಿ ಈ ಫೇಸ್‌ಬುಕ್‌ ಖಾತೆಯ ವಿರುದ್ಧ ಹಾಗು ಅದನ್ನು ನಿರ್ವಹಿಸುತ್ತಿರುವ ಜಬ್ಬಾರ್ ಮಂಗಳೂರು ಎಂಬ ವ್ಯಕ್ತಿಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

      ಈ ಹಿಂದೆ ಜಬ್ಬಾರ್ ಬಿ.ಸಿ ರೋಡ್ ಎನ್ನುವ ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿ ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಿಯ ಬಗ್ಗೆ ಅವಹೇಳನಕಾರಿ ಬರಹ ಪೋಸ್ಟ್ ಮಾಡಲಾಗುತ್ತು. ಇದರಿಂದ ಕೆರಳಿದ್ದ ಹಿಂದೂ ಸಂಘಟನೆಗಳು ರಸ್ತೆಗಿಳಿದು ಹೋರಾಟ ನಡೆಸಿದ್ದವು.

      ಈ ಪ್ರಕರಣದ ವಿರುದ್ಧ ಪ್ರತಿಭಟನೆಗಳ ಕಾವು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ, ಜಬ್ಬಾರ್ ಬಿ.ಸಿ ರೋಡ್ ಫೇಸ್‌ಬುಕ್‌ ಖಾತೆಯ ವಿರುದ್ಧ ತನಿಖೆ ಆರಂಭಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಿದೀನ್ ಹಾಗೂ ಶಫಿ ಎಂಬುವವರನ್ನು ಬಂಧಿಸಲಾಗುತ್ತು.

      Katilu Durgaparameshwari Devi has been abused in the facebook

      ಇದೀಗ ಮತ್ತೆ ಜಬ್ಬಾರ್ ಮಂಗಳೂರು ಎನ್ನುವಾತ ಫೇಸ್‌ಬುಕ್‌ ಖಾತೆಯಲ್ಲಿ ದೇವಿ ದುರ್ಗಾಪರಮೇಶ್ವರಿ, ಸ್ವಾಮಿ ಕೊರಗಜ್ಜ, ಶ್ರೀರಾಮ ಹಾಗೂ ಸೀತಾ ದೇವಿಯನ್ನು ಅತ್ಯಂತ ಅಶ್ಲೀಲ ಪದಗಳ ಮೂಲಕ ಅವಹೇಳನಕಾರಿಯಾಗಿ ಬರಹ ಪ್ರಕಟಿಸಿದ್ದಾನೆ.

      ಈ ವ್ಯಕ್ತಿ ಇದೀಗ ತನ್ನ ಖಾತೆಯನ್ನು ಡಿಲೀಟ್ ಮಾಡಿದ್ದರೂ, ಈತನ ಕಮೆಂಟ್ ಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ .

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+