ಕಾಸರಗೋಡು: ಗಡಿನಾಡ ಮಕ್ಕಳಿಗೆ ಕೇರಳದ ಬಿಸಿಯೂಟ
ಕಾಸರಗೋಡು, ಫೆ. 9: ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಕೇರಳದ 'ಸುಭಿಕ್ಷಾ' ಯೋಜನೆಗೆ ಮುಳ್ಳೇರಿಯ ಜಿವಿಎಚ್‌ಎಸ್ ಶಾಲೆಯಲ್ಲಿ ಫೆ.11ರಂದು ಬೆಳಗ್ಗೆ ಚಾಲನೆ ನೀಡಲಾಗುವುದು.
ರಕ್ಷಕ ಶಿಕ್ಷಕ ಸಂಘ ಹಾಗೂ ಊರವರ ಸಹಕಾರದೊಂದಿಗೆ 9, 10ನೇ ತರಗತಿ ವಿದ್ಯಾರ್ಥಿಗಳಿಗೂ ಊಟ ನೀಡಲಾಗುವುದು. ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಪಿ.ಶ್ಯಾಮಲಾ ದೇವಿ ವಿನೀತನ ಯೋಜನೆಗೆ ಚಾಲನೆ ನೀಡುವರು.[ಬಗೆಹರಿದಿಲ್ಲ ಸಿಎಂ ಕ್ಷೇತ್ರದ ಬಿಸಿಯೂಟ ಸಮಸ್ಯೆ]

ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಬಿ.ಎಂ.ಪ್ರದೀಪ್ ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಸುಭಿಕ್ಷಾ ಅನ್ನದಾನ ಯೋಜನೆಯ ನಿಧಿಯನ್ನು ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷ ಜಗನ್ನಾಥ ಕೆ.ವಿ. ಅವರಿಗೆ ಹಸ್ತಾಂತರಿಸುವರು. ಶಿಕ್ಷಣ ಉಪ ನಿರ್ದೇಶಕ ರಾಘವನ್ ಸಿ. ಅವರು ಕಳೆದ ವರ್ಷ 10ನೇ ತರಗತಿಯಲ್ಲಿ ಅತ್ಯಧಿಕ ಅಂಕ ಪಡೆದ ಮಕ್ಕಳಿಗೆ ಬಹುಮಾನ ವಿತರಿಸುವರು.
ಮುಖ್ಯ ಅತಿಥಿಗಳಾಗಿ ಮಲ್ಲ ಕ್ಷೇತ್ರದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣು ಭಟ್, ಕಾರಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಆರ್.ತಂತ್ರಿ, ಜಿಲ್ಲಾ ಪಂಚಾಯಿತಿ ಸದಸ್ಯ ತಿಮ್ಮಯ್ಯ ಎಂ., ಉದ್ಯಮಿ ವಸಂತ ಪೈ ಬದಿಯಡ್ಕ, ಉದ್ಯಮಿ ಮದಕ್ಕಂ ಇಬ್ರಾಹಿಂ ಭಾಗವಹಿಸುವರು.[ವಾರಕ್ಕೊಮ್ಮೆ ಮಕ್ಕಳಿಗೆ ರಾಗಿಮುದ್ದೆ ಭಾಗ್ಯ!]
ರೇಣುಕಾ ದೇವಿ, ಎಂ.ಜನನಿ, ಗ್ರಾಮ ರತ್ನಾಕರ ಎ., ರಾಜೇಶ್ ಕೆ.ವಿ., ಸದಸ್ಯ ಶೆರೀಫ್, ಸದಾಶಿವ ನಾಯಕ್, ಕೈಲಾಸ ಮೂರ್ತಿ, ಇ.ಜೆ.ಪೌಲ್, ಸತೀಶ್ ಕುಮಾರ್, ಡಾ.ಕೇಶವ ಭಟ್, ಬಾಲಕಷ್ಣ ರೈ, ಎಂ.ಸತ್ಯನಾರಾಯಣ ಬದಿಯಡ್ಕ, ರಘುರಾಮ ಬಲ್ಲಾಳ್, ಮಾಧವ ಭಟ್, ಶಿವಕಷ್ಣ ಭಟ್, ಎ.ಕೆ ಶಂಕರ, ವಿಜಯ ಕುಮಾರ್, ಮತ್ತಿತರರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.












Click it and Unblock the Notifications