ರಾಜ್ಯದಲ್ಲಿ ಕ್ರೀಡಾ ಭಾರತಿ ಘಟಕ; ಡಿ. 14ರಂದು ಉದ್ಘಾಟನೆ
ಮಂಗಳೂರು, ಡಿ. 8: ಮಾಜಿ ಕ್ರಿಕೆಟ್ ಆಟಗಾರ ಚೇತನ್ ಚೌಹಾಣ್ ನೇತೃತ್ವದ ಕ್ರೀಡಾ ಭಾರತಿ ಸಂಸ್ಥೆಯ ಕರ್ನಾಟಕ ಘಟಕವನ್ನು ಮಂಗಳೂರಿನಲ್ಲಿ ಆರಂಭಿಸಲಾಗುತ್ತಿದೆ.
ಡಿ. 14ರಂದು ಮಂಗಳೂರು ನಗರದಲ್ಲಿ ಕೇಂದ್ರದ ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆ ರಾಜ್ಯ ಸಚಿವ ಸರ್ಬನಂದಾ ಸೋನೋವಾಲ್ ಈ ಘಟಕವನ್ನು ಉದ್ಘಾಟಿಸುವರು.

ಕೇಂದ್ರದ ಕಾನೂನು ಮತ್ತು ನ್ಯಾಯಾಂಗ ಸಚಿವ ಡಿ.ವಿ. ಸದಾನಂದಗೌಡ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದ ನಿಮಿತ್ತ ಪುರುಷ ಮತ್ತು ಮಹಿಳೆಯರ ಅಂತರ್ ಕಾಲೇಜು ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ.
ಕಬಡ್ಡಿ ಪಂದ್ಯಾವಳಿಯಲ್ಲಿ 50 ತಂಡಗಳು ಭಾಗವಹಿಸುವ ಅಂದಾಜಿದೆ. ಭಾಗವಹಿಸುವ ಎಲ್ಲ ತಂಡಗಳಿಗೆ 1 ಸಾವಿರ ರೂ. ಗೌರವಧನ ಹಾಗೂ ವಿಜೇತರಿಗೆ ಪ್ರಥಮ 10 ಸಾವಿರ, ದ್ವಿತೀಯ 7 ಸಾವಿರ ಹಾಗೂ ತೃತೀಯ ಮತ್ತು ಚತುರ್ಥ 4 ಸಾವಿರ ರೂ. ಬಹುಮಾನ ನೀಡಲಾಗುವುದು.












Click it and Unblock the Notifications