ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇಶದ ಅತಿ ದೊಡ್ಡ ಸರ್ಫಿಂಗ್ ಸಾಹಸಕ್ಕೆ ಸಜ್ಜಾದ ಸಸ್ಲಿಹಿತ್ಲು

ಕರಾವಳಿ ಕಡಲ ತೀರದ ಅಲೆಗಳ ನಡುವೆ ದೇಶ ವಿದೇಶದ ಸರ್ಫಿಂಗ್ ಸಾಹಸಿಗರು ಕೌಶಲ್ಯ ತೋರಿಸಲು ಸಿದ್ಧತೆ ಆರಂಭವಾಗಿದೆ. ಮಂಗಳೂರು ಹೊರವಲಯದ ಸಸಿಹಿತ್ಲು ಬೀಚ್ ನಲ್ಲಿ ಮೇ 26 ರಿಂದ 28ರ ವರೆಗೆ ಇಂಡಿಯನ್ ಓಪನ್ ಸರ್ಫಿಂಗ್ -2017 ಕ್ರೀಡಾಕೂಟ ನಡೆಯಲಿದೆ.

By ಅನುಷಾ ರವಿ
|
Google Oneindia Kannada News

ಮಂಗಳೂರು, ಮೇ 25: ಕರಾವಳಿ ಕಡಲ ತೀರದ ಅಲೆಗಳ ನಡುವೆ ದೇಶ ವಿದೇಶದ ಸರ್ಫಿಂಗ್ ಸಾಹಸಿಗರು ಕೌಶಲ್ಯ ತೋರಿಸಲು ಸಿದ್ಧತೆ ಆರಂಭವಾಗಿದೆ. ಮಂಗಳೂರು ಹೊರವಲಯದ ಸಸಿಹಿತ್ಲು ಬೀಚ್ ನಲ್ಲಿ ಮೇ 26 ರಿಂದ 28ರ ವರೆಗೆ ಇಂಡಿಯನ್ ಓಪನ್ ಸರ್ಫಿಂಗ್ -2017 ಕ್ರೀಡಾಕೂಟ ನಡೆಯಲಿದೆ.

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಅಂತಾರಾಷ್ಟ್ರೀಯ ಸರ್ಫಿಂಗ್ ಅಸೋಸಿಯೇಷನ್ ಹಾಗೂ ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾ ನೇತೃತ್ವದಲ್ಲಿ ಮಂತ್ರ ಸರ್ಫ್ ಕ್ಲಬ್, ಕೆನರಾ ಸರ್ಫಿಂಗ್ ಅಂಡ್ ವಾಟರ್ ಸ್ಫೋರ್ಟ್ ಪ್ರಮೋಷನ್ ಕೌನ್ಸಿಲ್ ಸಹಭಾಗಿತ್ವದಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಕರಾವಳಿಯ ಬಹುತೇಕ ಬೀಚ್‌ಗಳು ಹಲವು ರೀತಿಯ ಕಾರ್ಯಕ್ರಮಗಳ ಮೂಲಕ ಪ್ರಸಿದ್ಧಿ ಪಡೆದಿವೆ. ಆದರೆ, ಸುರತ್ಕಲ್ ಸಮೀಪದ ಸಸಿಹಿತ್ಲು ಬೀಚ್ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಿಂದ ವಂಚಿತವಾಗಿತ್ತು. ಆದ್ದರಿಂದ ಈ ಬಾರಿ ರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆಯನ್ನು ಸಸಿಹಿತ್ಲುವಿನಲ್ಲಿ ಆಯೋಜನೆ ಮಾಡುವ ಮೂಲಕ ಆ ಭಾಗದ ಬೀಚ್ ಅಭಿವೃದ್ದಿಗೆ ವಿಶೇಷ ಗಮನ ನೀಡಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಸಮುದ್ರದ ಅಲೆಗಳನ್ನು ಗಮನದಲ್ಲಿರಿಸಿ ಸ್ಪರ್ಧೆ

ಸಮುದ್ರದ ಅಲೆಗಳನ್ನು ಗಮನದಲ್ಲಿರಿಸಿ ಸ್ಪರ್ಧೆ

ಮೇ 26ರಿಂದ ಮೂರು ದಿನ ಬೆಳಗ್ಗೆ 7ರಿಂದ ಸಮುದ್ರದ ಅಲೆಗಳನ್ನು ಗಮನದಲ್ಲಿರಿಸಿ ಮಧ್ಯಾಹ್ನದ ವರೆಗೆ ಸ್ಪರ್ಧೆಗಳು ನಡೆಯಲಿದೆ. ಸಂಜೆ 4ರಿಂದ ಮತ್ತೆ ಸ್ಪರ್ಧೆ ಮುಂದುವರಿಯಲಿದೆ. ಸರ್ಫಿಂಗ್ ಫೆಸ್ಟಿವಲ್ ಜೊತೆಗೆ ಕೋಸ್ಟಲ್ ಫುಡ್ ಫೆಸ್ಟಿವಲ್ ಮತ್ತು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ

ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಿವೆ

ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಿವೆ

ರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಿವೆ. 16ರ ವಯೋಮಿತಿಯ ಒಳಗಿನ ಮಕ್ಕಳು, 17 ರಿಂದ 22 ವಯೋಮಿತಿ, 22-28 ಹಾಗೂ 28 ರಿಂದ ಹೆಚ್ಚಿನ ವಯೋಮಿತಿಯವರಿಗೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಬೇರೆ ಬೇರೆ ವಿಭಾಗಗಳಲ್ಲಿ ನಡೆಯುವ ಸ್ಪರ್ಧೆಯಲ್ಲಿ ಒಟ್ಟು 6 ಲಕ್ಷ ರೂ.ನಗದು ಬಹುಮಾನವನ್ನು ನೀಡಲಾಗುತ್ತಿದೆ. ಪಂದ್ಯದ ತೀರ್ಪುಗಾರರಾಗಿ ಹಾಗೂ ಉಸ್ತುವಾರಿ ನೋಡಿಕೊಳ್ಳಲು ಇಂಡೋನೇಷ್ಯಾ ಆಸ್ಟ್ರೇಲಿಯಾ ಮತ್ತು ಯುಎಸ್ಎನಿಂದ ಅಧಿಕಾರಿಗಳು ಆಗಮಿಸಲಿದ್ದಾರೆ.

ಇಂಡಿಯನ್ ಸರ್ಫಿಂಗ್ ಅಸೋಸಿಯೇಷನ್

ಇಂಡಿಯನ್ ಸರ್ಫಿಂಗ್ ಅಸೋಸಿಯೇಷನ್

ಈ ವರ್ಷ ಹೆಚ್ಚು ಕ್ರೀಡಾಳುಗಳನ್ನು ಸರ್ಫಿಂಗ್ ಕ್ರೀಡೆಗೆ ಆಕರ್ಷಿಸಲು ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಲಾಗಿದೆ. ವಿದೇಶಿಯರು ಕೂಡಾ ಈ ಸರ್ಫಿಂಗ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದು ಇಂಡಿಯನ್ ಸರ್ಫಿಂಗ್ ಅಸೋಸಿಯೇಷನ್ ತಿಳಿಸಿದೆ.

ಸರ್ಫಿಂಗ್ ಜನಪ್ರಿಯತೆ

ಸರ್ಫಿಂಗ್ ಜನಪ್ರಿಯತೆ

ಮಂಗಳೂರು ಜಿಲ್ಲಾಡಳಿತವು ಸಸಿಹಿತ್ಲು ಬೀಚನ್ನು ಜಲಕ್ರೀಡೆಯ ತಾಣವನ್ನಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದ್ದು, ಸರ್ಫಿಂಗ್ ಹಾಗೂ ಸ್ಟ್ಯಾಂಡ್ ಅಪ್ ಪ್ಯಾಡ್ಲಿಂಗಿಗೆ ಒತ್ತು ನೀಡಲಾಗಿದೆ. ದೇಶದ 5,422.6 ಕಿಮೀ ಕರಾವಳಿಯಲ್ಲಿ ಕರ್ನಾಟಕದ ಕರಾವಳಿ ವಿಭಾಗದ ತನ್ನ ವಿಶಿಷ್ಟತೆ ಮೂಲಕ ಈ ಸರ್ಫಿಂಗ್ ಕ್ರೀಡೆ ದೇಶದೆಲ್ಲೆಡೆ ಜನಪ್ರಿಯತೆಗೊಳ್ಳುವಂತೆ ಮಾಡಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.

English summary
The Karnataka tourism department is hosting a three-day surfing festival, the biggest in India starting Friday. The government of Karnataka along with Mantra Surf Club and Canara Surfing and Water Promotion Council is all set to promote beaches of Karnataka as a premier adventure destination in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X