• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರಾಣಿರಕ್ಷಕರ ಹದ್ದಿನಗಣ್ಣಿನ ನಡುವೆ ಕಂಬಳ ಓಟ

By ಐಸಾಕ್ ರಿಚರ್ಡ್, ಮಂಗಳೂರು
|

ಕಾರ್ಕಳ,ಡಿ.21: ಸಾರ್ವಜನಿಕರು, ನಾನಾ ಇಲಾಖೆ ಅಧಿಕಾರಿಗಳು, ಪ್ರಾಣಿ ದಯಾ ಸಂಘಗಳ ರಾಷ್ಟ್ರೀಯ ಪ್ರತಿನಿಧಿಗಳ ಹದ್ದುಗಣ್ಣಿನ ನಡುವೆ ಬೆತ್ತವನ್ನು ಬಳಸದೆಯೇ ಕಾರ್ಕಳ ತಾಲೂಕಿನ ಬಾರಾಡಿಯಲ್ಲಿ ಶನಿವಾರ ಕರಾವಳಿಯ ಜನಪ್ರಿಯ ಕ್ರೀಡೆ ಕಂಬಳ ನಡೆದು ಹೊಸ ಇತಿಹಾಸವೊಂದು ಸೃಷ್ಟಿಯಾಯಿತು.

ಬಾರಾಡಿ ಕಂಬಳದಲ್ಲಿ ಭಾಗವಹಿಸಿದ 130ಕ್ಕೂ ಅಧಿಕ ಜೋಡಿ ಕೋಣಗಳ ಪೈಕಿ ಬೆರಳೆಣಿಕೆಯ ಕೋಣಗಳನ್ನು ಹೊರತುಪಡಿಸಿ ಉಳಿದಂತೆ ಬೆತ್ತವನ್ನು ಕೈಯಲ್ಲಿ ಹಿಡಿಯದೆಯೇ ಓಡಿಸಲಾಯಿತು. [ಕಂಬಳ ಆಚರಣೆಗೆ ಹೈಕೋರ್ಟಿನಿಂದ ಗ್ರೀನ್ ಸಿಗ್ನಲ್]

ಪೆಟ್ಟು ಕೊಡಲಿಲ್ಲ: ಬೆತ್ತದಿಂದ ಹೊಡೆಯುತ್ತಾರೆ, ಹಿಂಸೆ ನಡೆಸುತ್ತಾರೆ ಎನ್ನುವುದೇ ನಿಷೇಧದ ಪ್ರಮುಖ ಕಾರಣಕ್ಕೆ ಪ್ರತಿಯಾಗಿ ಶನಿವಾರ ಬಹುಪಾಲು ಕೋಣಗಳನ್ನು ಬೆತ್ತವಿಲ್ಲದೆ ಓಡಿಸಲಾಯಿತು. ಆದರೆ, ಹಗ್ಗದ ಹಿರಿಯ ವಿಭಾಗದಲ್ಲಿ ಬೆರಳೆಣಿಕೆಯ ಕೆಲವರು ಓಟಗಾರರು ಬೆತ್ತವನ್ನು ಕೈಯಲ್ಲಿ ಹಿಡಿದುಕೊಂಡಿದ್ದರು. ಆದರೆ, ಪೆಟ್ಟು ಹೊಡೆಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿತ್ತು.

ಕಾರ್ಕಳ ತಾಲೂಕು ತಹಸೀಲ್ದಾರ್ ರಾಘವೇಂದ್ರ, ಎಸ್‌ಐ ಮಹಾದೇವ ಶೆಟ್ಟಿ ಅವರ ನೇತತ್ವದಲ್ಲಿ ಇಡೀ ಕಂಬಳ ಗದ್ದೆ ಮತ್ತು ಸುತ್ತಮುತ್ತ ಹದ್ದುಗಣ್ಣನ್ನೇ ಇಡಲಾಗಿದೆ. ತಹಸೀಲ್ದಾರ್ ಅವರ ನೇತತ್ವದಲ್ಲಿ ಕಂದಾಯ ಇಲಾಖೆಯ 10ಕ್ಕೂ ಅಧಿಕ ಸಿಬ್ಬಂದಿ ಎಲ್ಲ ವ್ಯವಸ್ಥೆಗಳನ್ನು ಪರಿಶೀಲಿಸುತ್ತಿದ್ದರೆ, ಪೊಲೀಸ್ ಇಲಾಖೆಯ 40 ಮಂದಿ ನಾನಾ ಹಂತದ ಅಧಿಕಾರಿಗಳು ಎರಡು ತಂಡಗಳಲ್ಲಿ ಪ್ರತಿಯೊಂದನ್ನೂ ಕಣ್ಣಲ್ಲಿ ಕಣ್ಣಿಟ್ಟಿದ್ದರು. [ನಿಷೇಧ ತೆರವಿಗೆ ಕರ್ನಾಟಕ ಮನವಿ ಮಾಡಿಲ್ಲ]

ದಿಲ್ಲಿ, ಚೆನ್ನೈ ಪ್ರತಿನಿಧಿಗಳು: ಕಂಬಳ ನಿಷೇಧದ ಪರವಾಗಿ ನಿಂತಿರುವ ರಾಷ್ಟ್ರೀಯ ಪ್ರಾಣಿ ರಕ್ಷಣಾ ಮಂಡಳಿಯ 10ಕ್ಕೂ ಅಧಿಕ ಪ್ರತಿನಿಧಿಗಳು ಯಾರಿಗೂ ತಿಳಿಯದಂತೆ ಎಲ್ಲ ಕಡೆ ಸುತ್ತಾಡುತ್ತಿದ್ದಾರೆ. ಇಬ್ಬರು ಹಿರಿಯ ಪ್ರತಿನಿಧಿಗಳ ಜತೆಗೆ ಯುವಕರ ತಂಡವೊಂದು ಆಗಮಿಸಿದ್ದು, ಪ್ರತಿಯೊಂದು ಕೋಣಗಳ ಮೈಯಲ್ಲಿ ಗಾಯ ಮತ್ತಿತರ ಕುರುಹುಗಳಿವೆಯೇ ಎಂದು ಗಮನಿಸಿದೆ. ಕಂಬಳದಲ್ಲಿ ಭಾಗವಹಿಸಿದ ಕೋಣಗಳ ಮಾಲೀಕರ ದೂರವಾಣಿ ಸಂಖ್ಯೆಯನ್ನು ನಮೂದಿಸಿಕೊಂಡಿದ್ದು, ಎಲ್ಲ ವಿದ್ಯಮಾನಗಳನ್ನು ವಿಡಿಯೋಗ್ರಾಫ್ ಮಾಡಿದೆ.

ಕಂಬಳ ಸಮಿತಿ ಅಧ್ಯಕ್ಷ ಭಾಸ್ಕರ ಎಸ್.ಕೋಟ್ಯಾನ್ ಮಾತನಾಡಿ, ಹೈ ಕೋರ್ಟ್ ತೀರ್ಪಿನಿಂದ ತುಂಬಾ ಸಂತೋಷ ಆಗಿದೆ. ತುಳು ನಾಡಿನ ಸಾವಿರ ವರ್ಷಗಳ ಇತಿಹಾಸದ ಜಾನಪದ ಕ್ರೀಡೆಗೆ ಇದರಿಂದ ನ್ಯಾಯ ಸಿಕ್ಕಿದಂತಾಗಿದೆ. ಆದರೆ, ತೀರ್ಪಿನ ಶರತ್ತುಗಳನ್ನು ಇನ್ನಷ್ಟೇ ನೋಡಬೇಕಾಗಿದೆ ಎಂದು ಪ್ರತಿಕ್ರಿಯಿಸಿದರು.

ಈ ವರ್ಷ ನಡೆಯಬೇಕಾಗಿದ್ದ ಶಿರ್ವದ ನಡಿಬೆಟ್ಟು, ಸುರತ್ಕಲ್, ಬಂಗಾಡಿ ಮತ್ತು ಬಾರಾಡಿ ಬೀಡು ಕಂಬಳಗಳು ನಿಷೇಧದಿಂದ ನಡೆದಿರಲಿಲ್ಲ. ಈ ಪೈಕಿ ಬಾರಾಡಿ ಕಂಬಳ ಡಿ.20ರಂದು ಸಂಪನ್ನವಾಗಿದೆ. ಸಿದ್ಧಕಟ್ಟೆಯ ಹೊಕ್ಕಾಡಿಗೋಳಿ ಕಂಬಳ ಮುಂದಿನ ವಾರ, ಜಿಲ್ಲಾಡಳಿತ ನಡೆಸುವ ಪಿಲಿಕುಳ ಕಂಬಳ ಡಿ.28ರಂದು ನಡೆಯಬೇಕಾಗಿದೆ. ಇದಾದ ಬಳಿಕ ಒಟ್ಟು 22 ಕಂಬಳ ಉಳಿಯುತ್ತವೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Following the lift on the ban on Kambala, the Baradi Beedu Kambala was held on December 20, representatives of the Animal Welfare Board and police strictly monitored the entired Kambala which created a history by that without using sticks by Kambala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more