ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಕ್ಷಿಣ ಕನ್ನಡ ಅಭ್ಯರ್ಥಿಯಾಗಿ ಪೂಜಾರಿ ಆಯ್ಕೆ

By Mahesh
|
Google Oneindia Kannada News

ಮಂಗಳೂರು, ಮಾ.9: ಕಗ್ಗಂಟಾಗಿದ್ದ ದಕ್ಷಿಣ ಕನ್ನಡ ಲೋಕಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಈಗ ಪೂರ್ಣಗೊಂಡಿದೆ. ಅಭ್ಯರ್ಥಿ ಆಯ್ಕೆಗಾಗಿ ನಡೆದ ಆಂತರಿಕ ಚುನಾವಣೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರು ಭರ್ಜರಿ ಜಯ ದಾಖಲಿಸಿದ್ದಾರೆ. ಈ ಮೂಲಕ ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಅಧಿಕೃತ ಅಭ್ಯರ್ಥಿ ಎನಿಸಿದ್ದಾರೆ.

ಮಂಗಳೂರಿನಲ್ಲಿ ಭಾನುವಾರ ನಡೆದ ಆಂತರಿಕ ಚುನಾವಣೆಯಲ್ಲಿ ಜನಾರ್ದನ ಪೂಜಾರಿ ಅವರು 478 ಮತಗಳನ್ನು ಗಳಿಸಿ ಅಮೋಘ ಜಯ ದಾಖಲಿಸಿದ್ದಾರೆ. ಚಲಾವಣೆಗೊಂಡ 574 ಮತಗಳ ಪೈಕಿ ಎದುರಾಳಿ ಕಣಚೂರು ಮೋನು ಅವರಿಗೆ ಕೇವಲ 62 ಮತಗಳು ಬಿದ್ದಿವೆ. 7 ಮತಗಳು ಅಸಿಂಧು ಎನಿಸಿವೆ. ಮತದಾರರ ಪಟ್ಟಿಯಲ್ಲಿ 598 ಹೆಸರುಗಳಿತ್ತು.

ಮಂಗಳೂರಿನ ರೊಸಾರಿಯೋ ಶಾಲೆ ಮೈದಾನದಲ್ಲಿ ನಡೆದ ಆಂತರಿಕ ಚುನಾವಣೆಯಲ್ಲಿ ಜಯ ಗಳಿಸಿರುವ ಜನಾರ್ದನ ಪೂಜಾರಿ ಅವರು ಬಿಜೆಪಿಯ ನಳೀನ್ ಕುಮಾರ್ ಕಟೀಲ್ ಅವರನ್ನು ಎದುರಿಸಲಿದ್ದಾರೆ.

Mangalore: Congress primary - Janardhan Poojary wins

'ಇದು ಆಂತರಿಕ ಚುನಾವಣೆ ನಮ್ಮ ಕುಟುಂಬದ ಚುನಾವಣೆ ಇದ್ದಂತೆ. ಇಲ್ಲಿ ಗೆಲುವಿನ ಸಂಭ್ರಮ ಅನಗತ್ಯ. ನಾವೆಲ್ಲರೂ ಒಗ್ಗಟ್ಟಾಗಿ ದುಡಿದು ಕರಾವಳಿಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಲೆ ಏಳುವಂತೆ ಮಾಡಬೇಕಿದೆ' ಎಂದು ಪೂಜಾರಿ ಅವರು ಗೆಲುವಿನ ಸಂಭ್ರಮದಲ್ಲಿ ಹೇಳಿದ್ದಾರೆ.

ಕಲ್ಲಡ್ಕದಲ್ಲಿ ನಡೆದ ಗಲಭೆಯ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, 'ಶಾಂತಿಯುತ ಸಭೆಯನ್ನು ಹಾಳುಗೆಡಿವಿದ ಬಿಜೆಪಿ ಹಾಗೂ ಸಂಘ ಪರಿವಾರದವರು ಪರಿಣಾಮವನ್ನು ಎದುರಿಸಲಿದ್ದಾರೆ. ಮೋದಿ ಅವರು ದೇಶದಲ್ಲಿ ಕೋಮು ಸಾಮರಸ್ಯ ಕದಡುತ್ತಿದ್ದಾರೆ. ಪ್ರಭಾಕರ್ ಭಟ್ ಅವರು ಜಿಲ್ಲೆಯ ಸ್ವಾಸ್ಥ್ಯ ಕೆಡಿಸುತ್ತಿದ್ದಾರೆ' ಎಂದರು.

English summary
Senior Congress leader and former union minister Janardhan Poojary won the Congress primary (internal election) by garnering 478 out of the total 547 votes that were cast. Janardhan Poojary will face Nalin Kumar Kateel of BJP in the Election
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X