• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರು ಗೋಲಿಬಾರ್ ಬಗ್ಗೆ ತನಿಖೆ ಶೀಘ್ರ: ಯಡಿಯೂರಪ್ಪ

|

ಮಂಗಳೂರು, ಡಿಸೆಂಬರ್ 21: ಮೊನ್ನೆ ಮಂಗಳೂರಿನಲ್ಲಿ ಇಬ್ಬರು ಪ್ರತಿಭಟನಾಕಾರರನ್ನು ಬಲಿಪಡೆದ ಗೋಲಿಬಾರ್‌ ಬಗ್ಗೆ ತನಿಖೆ ನಡೆಸಲಾಗುವುದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಇಂದು ಮಂಗಳೂರಿಗೆ ಭೇಟಿ ನೀಡಿದ್ದ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿ, 'ಗೋಲಿಬಾರ್‌ ಬಗ್ಗೆ ತನಿಖೆ ನಡೆಸಲಾಗುವುದು ಆದರೆ ಯಾವ ರೀತಿಯ ತನಿಖೆ ಎಂಬುದನ್ನು ನಿಗದಿಪಡಿಸಿಲ್ಲ' ಎಂದರು.

ಗೋಲಿಬಾರ್‌ ನಲ್ಲಿ ಮೃತಪಟ್ಟ ಇಬ್ಬರ ಕುಟುಂಬದವರನ್ನು ನಗರದ ಸರ್ಕಿಟ್‌ ಹೌಸ್‌ ಗೆ ಕರೆಸಿಕೊಂಡು ಯಡಿಯೂರಪ್ಪ ಭೇಟಿ ಮಾಡಿದರು. ಆ ವೇಳೆ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಸಹ ಇದ್ದರು.

ಇದೇ ದಿನ ಯಡಿಯೂರಪ್ಪ ಅವರು ನಗರದ ಧಾರ್ಮಿಕ ಮುಖಂಡರೊಂದಿಗೂ ಸಭೆ ನಡೆಸಿ, ಪ್ರತಿಭಟನೆಯನ್ನು ಶಾಂತಗೊಳಿಸುವ ಬಗ್ಗೆ ಮನವಿ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, 'ಇಂದು 3 ಗಂಟೆಯಿಂದ 6 ಗಂಟೆ ವರೆಗೆ ಕರ್ಪ್ಯೂ ಸಡಿಸಲಾಗುವುದು, ನಂತರ ರಾತ್ರಿ ಮತ್ತೆ ಕರ್ಪ್ಯೂ ವಿಧಿಸಲಾಗುವುದು. ಭಾನುವಾರ ಸಂಜೆ ವರೆಗೆ ಕರ್ಪ್ಯೂ ಇರುವುದುದಿಲ್ಲ, ರಾತ್ರಿ ಕರ್ಪ್ಯೂ ವಿಧಿಸಲಾಗುವುದು. ಸೋಮವಾರ ಬೆಳಿಗ್ಗೆಯಿಂದ ಕರ್ಪ್ಯೂ ಇರುವುದಿಲ್ಲ ಆದರೆ ನಿಷೇಧಾಜ್ಞೆ ಇರುತ್ತದೆ' ಎಂದರು.

English summary
CM Yediyurappa told media that government will investigate about Mangaluru golibar, yet not decided what kind of investigation that would be.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X