ಶೇಖರ ಭಂಡಾರಿ ಪ್ರಾಸ ಭಂಡಾರದಲ್ಲಿ ಒಂದು ಸುತ್ತು

ನಮ್ಮ ರಾಜಣ್ಣ
ನಮ್ಮೆಲ್ಲರ ಪ್ರೀತಿಯ ಅಣ್ಣ
ಬೇಡರ ಕಣ್ಣಪ್ಪದಿಂದ ಹಾಕಿದ್ದರು ಬಣ್ಣ
ಶಿವನಿಗೆ ಅಂದು ನೀಡಿದ್ದರು ಕಣ್ಣ...

ನನಗೆ ವಿಜಯಾ ಬ್ಯಾಂಕಲ್ಲಿ ಡ್ಯೂಟಿ
ಅವಸರದಲ್ಲಿ ಬರುತ್ತಿದ್ದೆ ರಸ್ತೆ ದಾಟಿ
ಅಲ್ಲೇ ಈ ಉಪೇಂದ್ರರ ಭೇಟಿ...

ಹೌದು, ಕಾರ್ಕಳದ ಶೇಖರ್ ಭಂಡಾರಿ ಅವರು ಮಾತನಾಡುವುದೇ ಹೀಗೆ. ಭಂಡಾರಿ ಅವರು ಹೇಗೆ ಮಾತು ಆರಂಭಿಸಿದರೂ ಅದು ಪ್ರಾಸದೊಂದಿಗೆ ಅಂತ್ಯವಾಗುತ್ತದೆ. ಪ್ರಾಸದ ಪಗಳನ್ನು ಜೋಡಿಸುತ್ತಲೇ ಜೀವನಾನುಭವವನ್ನು ಪ್ರಾಸಬದ್ಧವಾಗಿ ಶೇಖರ ಭಂಡಾರಿ ಅವರು ವಿವರಿಸುತ್ತಾರೆ.

ಒನ್ ಇಂಡಿಯಾ ಕನ್ನಡಕ್ಕೆ ಸಂದರ್ಶನ ನೀಡಿದ ಶೇಖರ ಭಂಡಾರಿ ಅವರು ಪ್ರಾಸದ ಪದಗಳನ್ನು ಜೋಡಿಸುತ್ತಲೇ ತಮ್ಮ ಬದುಕಿ ಬಗ್ಗೆ ಮಾತನಾಡಿದ್ದಾರೆ. ತಾವು ಬರೆಯುತ್ತಿರುವ ಮೂರನೇ ಪುಸ್ತಕದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಸಿನಿಮಾ, ಕಿರುತೆರೆ ಎಂದು ಸದಾ ಬ್ಯುಸಿಯಾಗಿರುವ ಭಂಡಾರಿ ಅವರು ಸ್ನೇಹ ಜೀವಿ, ನಗುವಿನ ಭಂಡಾರವನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ.

ಶೇಖರ ಭಂಡಾರಿ ಅವರು ಮೂಲತಃ ಕಾರ್ಕಾಳದ ಬೆಟ್ಟದ ಮನೆಯವರು. ಶಾಲಾ ಕಾಲೇಜು ದಿನಗಳಲ್ಲಿಯೇ ರಂಗಭೂಮಿ ಅವರನ್ನು ಕೈಬೀಸಿ ಕರೆಯಿತು. ಅಂದಿನಿಂದಲೇ ಕಲಾದೇವಿಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಭಂಡಾರಿ ಅವರು ಸದ್ಯ ಬೆಂಗಳೂರಿನ ಯಶವಂಪುರದಲ್ಲಿ ನೆಲೆಸಿದ್ದಾರೆ.

ಕಾರ್ಕಳ ಮೂಲದವರು

ಕಾರ್ಕಳ ಮೂಲದವರು

ಶೇಖರ ಭಂಡಾರಿ ಅವರು ಕಾರ್ಕಳದ ಬೆಟ್ಟದ ಮನೆಯ ಬಾಬು ಭಂಡಾರಿ ಮತ್ತು ಅಭಯ ಭಂಡಾರಿ ಅವರ ಪುತ್ರರು. ಕಾರ್ಕಳದಲ್ಲಿಯೇವ ವಿದ್ಯಾಭ್ಯಾಸ ಮುಗಿಸಿದ ಅವರು, ವಿಜಯಾ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಬೆಂಗಳೂರಿನ ಯಶವಂಪತಪುರ ಶಾಖೆಯಲ್ಲಿ ಕಾರ್ಯನಿರ್ವಹಿಸಿ ಸದ್ಯ ನಿವೃತ್ತಿ ಪಡೆದಿದ್ದಾರೆ.

ಕಲೆಯ ಮೇಲೆ ಪ್ರೀತಿ ಹೆಚ್ಚು

ಕಲೆಯ ಮೇಲೆ ಪ್ರೀತಿ ಹೆಚ್ಚು

ಶಾಲಾ-ಕಾಲೇಜು ದಿನಗಳಲ್ಲಿ ಭಂಡಾರಿ ಅವರನ್ನು ಕಲೆಯನ್ನು ಮೈಗೂಡಿಸಿಕೊಂಡವರು. ರಂಗಭೂಮಿಯ ಜೊತೆ ಇವರದ್ದು ಬಿಡದ ನಂಟು. ಬಣ್ಣದ ಬದುಕಿನ ಬಗ್ಗೆ ಅಪಾರವಾದ ಗೌರವ, ಶ್ರದ್ಧೆ.

ಕಲೆಯ ಜೊತೆ ಕೆಲಸ

ಕಲೆಯ ಜೊತೆ ಕೆಲಸ

ಕಲಾಸೇವೆಯ ಜೊತೆಗೆ ಶೇಖರ ಭಂಡಾರಿ ಅವರು ವಿಜಯಾ ಬಾಂಕ್‌ನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಬೆಂಗಳೂರಿನ ಯಶವಂತಪುರ ಶಾಖೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ.

ಶೇಖರ ಭಂಡಾರಿ ಅವರ ಕುಟುಂಬ ಪರಿಚಯ

ಶೇಖರ ಭಂಡಾರಿ ಅವರ ಕುಟುಂಬ ಪರಿಚಯ

ಭಂಡಾರಿ ಅವರ ಪತ್ನಿ ವಾರಿಜಾ ಶೇಖರ್, ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ಹಿರಿಯ ಆರೋಗ್ಯ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗಂಡ-ಹೆಂಡಂತಿ ಇಬ್ಬರು ಹೆಣ್ಣುಮಕ್ಕಳ ಪುಟ್ಟ ಸಂಸಾರ ಇವರದ್ದು.

ನಿವೃತ್ತಿ ನಂತರವೂ ಸಕ್ರಿಯ

ನಿವೃತ್ತಿ ನಂತರವೂ ಸಕ್ರಿಯ

ನಿವೃತ್ತಿ ನಂತರವೂ ಶೇಖರ ಭಂಡಾರಿ ಅವರು ವಿವಿಧ ಚಟುವಟಿಕೆಳಲ್ಲಿ ಸಕ್ರಿಯವಾಗಿದ್ದಾರೆ. ಯಶವಂತಪುರದಲ್ಲಿ ಯಶವಂತ ವ್ಯಾಯಾಮ ಶಾಲೆಯ ಮುಖ್ಯ ಕಾರ್ಯದರ್ಶಿಯಾಗಿ ಹಾಗೂ ಹಲವು ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿ, ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ.

ಚಲನಚಿತ್ರಗಳಲ್ಲೂ ನಟನೆ

ಚಲನಚಿತ್ರಗಳಲ್ಲೂ ನಟನೆ

ಶೇಖರ ಭಂಡಾರಿ ಅವರು ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಜೆಗಳು ಪ್ರಭುಗಳು, ಇಂದ್ರ ಧನುಷ್, ಸ್ವಲ್ಪ ಅಜೆಸ್ಟ್ ಮಾಡ್ಕೋಳಿ, ಏಕಾಂಗಿ, ಓ ನನ್ನ ನಲ್ಲೆ, ಲವ್, ಧರ್ಮಯೋಧರು, ನನ್ನ ತಂಗಿ, ಕೋಟಿ ಚೆನ್ನಯ್ಯ, ತಮಾಶೆಗಾಗಿ, ಐದೊಂದ್ಲ ಐದು ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಕಿರುತೆರೆಯಲ್ಲೂ ಭಂಡಾರಿ ಪ್ರತಿಭಾ ಪ್ರದರ್ಶನ

ಕಿರುತೆರೆಯಲ್ಲೂ ಭಂಡಾರಿ ಪ್ರತಿಭಾ ಪ್ರದರ್ಶನ

ಕಿರುತೆರೆಯ ಜೋಗುಳ, ಗುರುರಾಘವೇಂದ್ರ ವೈಭವ, ರಂಗೋಲಿ ಮುಂತಾದ ಧಾರವಾಹಿಗಳಲ್ಲಿ ಶೇಖರ ಭಂಡಾರಿ ಅವರು ಅಭಿನಯಿಸಿದ್ದಾರೆ. ಬೆಂಗಳೂರು ಆಕಾಶವಾಣಿಯ ಎಫ್.ಎಂ.ರೈನ್ಬೋದಲ್ಲಿ ಆಗಾಗ ಹಾಸ್ಯ ಕಾರ್ಯಕ್ರಮ ನಡೆಸಿಕೊಡುತ್ತಾರೆ.

ಚುನಾವಣೆಬಂತೆಂದರೆ ಭಂಡಾರಿ ಅವರು ಬ್ಯುಸಿ

ಚುನಾವಣೆಬಂತೆಂದರೆ ಭಂಡಾರಿ ಅವರು ಬ್ಯುಸಿ

ಪದಗಳಲ್ಲಿ ಪ್ರಾಸವನ್ನು ಕಟ್ಟಿಕೊಡುವ ಶೇಖರ ಭಂಡಾರಿ ಅವರಿಗೆ ಚುನಾವಣೆ ಬಂತೆಂದರೆ ಬಹು ಬೇಡಿಕೆ. ಎಲ್ಲಾ ಪಕ್ಷದವರು ಕೂಡಾ ಚುನಾವಣಾ ಸ್ಲೋಗನ್ ಬರೆಸಿಕೊಳ್ಳಲು ಭಂಡಾರಿ ಅವರನ್ನು ಸಂಕರ್ಪಿಸುತ್ತಾರೆ.

ಪುಸ್ತಕ ಬರೆಯುವುದರಲ್ಲಿ ತಲ್ಲೀನ

ಪುಸ್ತಕ ಬರೆಯುವುದರಲ್ಲಿ ತಲ್ಲೀನ

ಶೇಖರ ಭಂಡಾರಿ ಅವರು ತಾವು ಹೇಳುವ ಪ್ರಾಸ ಪದ್ಯಗಳನ್ನು ಸೇರಿಸಿ ಪುಸ್ತಕ ಬರೆಯುತ್ತಾರೆ. ಇವರ ಒಂದು ಪುಸ್ತಕವನ್ನು ವೀರಪ್ಪ ಮೊಯ್ಲಿ ಬಿಡುಗಡೆ ಮಾಡಿದ್ದಾರೆ. ಸದ್ಯ ಮತ್ತೊಂದು ಪುಸ್ತಕ ಬರೆಯುವುದರಲ್ಲಿ ಅವರ ನಿರತರಾಗಿದ್ದಾರೆ.

ಹಲವಾರು ಪ್ರಶಸ್ತಿಗಳು ಬಂದಿವೆ

ಹಲವಾರು ಪ್ರಶಸ್ತಿಗಳು ಬಂದಿವೆ

ಭಂಡಾರಿಅವರಿಗೆ ಹಲವಾರು ಪ್ರಶಸ್ತಿಗಳು ಬಂದಿವೆ. ವಿಜಯ ಬ್ಯಾಂಕಿನ ವತಿಯಿಂದ ವಿಜಯ ಬ್ಯಾಂಕ್ ಅಧ್ಯಕ್ಷರಾದ ಪ್ರಕಾಶ್ ಪಿ. ಮಲ್ಯರವರು `ವಿಜಯಶ್ರೀ ಪ್ರಶಸ್ತಿ` ನೀಡಿ ಗೌರವಿಸಿದ್ದಾರೆ. ಡಾ. ರಾಜ್‌ ಕುಮಾರ್ ಸದ್ಭಾವನಾ ಪ್ರಶಸ್ತಿ, ವೀರಕನ್ನಡಿಗ ಪ್ರಶಸ್ತಿ, ಜಯಪ್ರಕಾಶ್ ನಾರಾಯಣ್ ರಾಷ್ಟ್ರೀಯ ಪುರಸ್ಕಾರ, ಕರುನಾಡ ಸಿರಿ ಪ್ರಶಸ್ತಿ, ಡಾ. ಶಿವರಾಮ ಕಾರಂತ ಸದ್ಭಾವನ ಪ್ರಶಸ್ತಿಗಳನ್ನು ಇವರು ಪಡೆದಿದ್ದಾರೆ.

ರಾಜ್ ಕುಮಾರ್ ಬಗ್ಗೆ ಭಂಡಾರಿ ಹೇಳುವುದೇನು?

ರಾಜ್ ಕುಮಾರ್ ಬಗ್ಗೆ ಭಂಡಾರಿ ಹೇಳುವುದೇನು?

ನಮ್ಮ ರಾಜಣ್ಣ
ನಮ್ಮೆಲ್ಲರ ಪ್ರೀತಿಯ ಅಣ್ಣ
ಬೇದರ ಕಣ್ಣಪ್ಪದಿಂದ ಹಾಕಿದ್ದರು ಬಣ್ಣ
ಶಿವನಿಗೆ ಅಂದು ನೀಡಿದ್ದರು ಕಣ್ಣ
ನಿಜ ಬದುಕಿನಲ್ಲಿ ಕಣ್ಣ ಮಾಡಲಿಲ್ಲ ಮಣ್ಣ
ಅಂಧರಿಬ್ಬರಿಗೆ ನೀಡಿ ಸಾರ್ಥಕರಾದರು ರಾಜಣ್ಣ.

ಉಪೇಂದ್ರ ಬಗ್ಗೆ ಹೇಳಿದ್ದೇನು?

ಉಪೇಂದ್ರ ಬಗ್ಗೆ ಹೇಳಿದ್ದೇನು?

ನನಗೆ ವಿಜಯಾ ಬ್ಯಾಂಕಲ್ಲಿ ಡ್ಯೂಟಿ
ಅವಸರದಲ್ಲಿ ಬರುತ್ತಿದ್ದೆ ರಸ್ತೆ ದಾಟಿ
ಅಲ್ಲೇ ಈ ಉಪೇಂದ್ರರ ಭೇಟಿ
ನಟನೆಯಲ್ಲಿ ಅವರಿಗಿಲ್ಲ ಸರಿಸಾಟಿ
ಸಂಭಾಷಣೆಯಂತೂ ಬಲು ಘಾಟಿ
ನಿರ್ದೇಶನ ತುಂಬಾ ಚೂಟಿ
ಮಲಗಿದ್ದ ಕನ್ನಡಿಗರ ಎಬ್ಬಿಸಲು ಬೀಸಿದ್ದಾರೆ ಚಾಟಿ

ಸಂದರ್ಶನದ ಕೊನೆಗೆ ಹೇಳಿದಿಷ್ಟು

ಸಂದರ್ಶನದ ಕೊನೆಗೆ ಹೇಳಿದಿಷ್ಟು

ಒನ್ ಇಂಡಿಯಾ ಕನ್ನಡ, ಇದು ಕನ್ನಡ ಮೀಡಿಯಾ
ಇವರದು ಎಲ್ಲಾ ಐಡಿಯಾ
ನೋಡಿದ್ಯಾ ಒನ್ ಇಂಡಿಯಾ
ನೋಡದಿದ್ದರೆ ನೋಡು, ಇದು ಕನ್ನಡ ನಾಡಿನ ಸಂಸ್ಕೃತಿಯ ಮೀಡಿಯಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+