ಅರಬ್ಬಿ ಸಮುದ್ರದಲ್ಲಿ ಕೋಸ್ಟ್ ಗಾರ್ಡ್ ಶತ್ರುಗಳನ್ನು ಹಿಮ್ಮೆಟ್ಟಿಸುವ ಪರಿ ಹೇಗಿರುತ್ತೆ ಗೊತ್ತಾ..?
ಮಂಗಳೂರು, ಫೆಬ್ರವರಿ 24: ದೇಶದ ಸಮುದ್ರ ಗಡಿಯ ಪ್ರೆಹರಿಗಳಾದ ಭಾರತೀಯ ತಟರಕ್ಷಣಾ ಪಡೆ ಕೋಸ್ಟ್ ಗಾರ್ಡ್ ದಿನಚಾರಣೆಯನ್ನು ಮಂಗಳೂರಿನ ಕಡಲ ಕಿನಾರೆಯಿಂದ ದೂರ ಆಳ ಸಮುದ್ರದಲ್ಲಿ ಆಚರಿಸಲಾಯಿತು.
ಕೋಸ್ಟ್ ಗಾರ್ಡ್ ನ ರೈಸಿಂಗ್ ಕಾರ್ಯಕ್ರಮದ ಅಂಗವಾಗಿ ಕೋಸ್ಟ್ ಗಾರ್ಡ್ ಪಡೆ ನಡೆಸುವ ಅಪಾಯಕಾರಿ ಕಾರ್ಯಚರಣೆಗಳ ಅಣಕು ಪ್ರದರ್ಶನ ಏರ್ಪಡಿಸಲಾಗಿತ್ತು . ಈ ಕಾರ್ಯಕ್ರಮ ದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪಾಲ್ಗೊಂಡು ಅಣಕು ಕಾರ್ಯಾಚರಣೆ ವಿಕ್ಷಿಸಿದರು. ದೇಶದ ಪ್ರಹರಿಗಳಾದ ಇಂಡಿಯನ್ ಕೋಸ್ಟ್ ಗಾರ್ಡ್‌ನ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು.

ಭಾರತೀಯ ಕೋಸ್ಟ್ ಗಾರ್ಡ್, ವಿಶ್ವದ ಅತಿದೊಡ್ಡ ಕರಾವಳಿ ಕಾವಲು ಪಡೆಗಳಲ್ಲಿ ಒಂದಾಗಿದ್ದು, ಕಡಲ ಗಡಿಗಳನ್ನು ರಕ್ಷಿಸುವಲ್ಲಿ ಪ್ರಮುಖ ಕೊಡುಗೆಯನ್ನು ಹೊಂದಿದೆ. ಭಾರತೀಯ ಕೋಸ್ಟ್ ಗಾರ್ಡ್ ದೇಶದ ಸುಮಾರು 7500 ಕಿಲೋಮೀಟರ್ ಕಡಲ ಗಡಿಗಳ ರಕ್ಷಣೆ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯ ಜವಾಬ್ದಾರಿಯನ್ನು ಹೊಂದಿದೆ. ಭಾರತೀಯ ಕೋಸ್ಟ್ ಗಾರ್ಡ್ ತನ್ನ ಕರ್ತವ್ಯಗಳನ್ನು ಸಂಪೂರ್ಣ ಸಮರ್ಪಣೆ, ನಿಷ್ಠೆ ಮತ್ತು ಧೈರ್ಯದಿಂದ ನಿರ್ವಹಿಸುತ್ತಿದೆ.
ಭಾರತೀಯ ತಡರಕ್ಷಣಾ ಪಡೆ ಸ್ಥಾಪನೆಗೊಂಡು 48 ವರ್ಷ ಪೂರ್ಣಗೊಂಡ ಹಿನ್ನೆಲೆ ಭಾರತೀಯ ಕೋಸ್ಟ್ ಗಾರ್ಡ್ ರೈಸಿಂಗ್ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿತ್ತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪಾಲ್ಗೊಂಡಿದ್ದರು. ಕೋಸ್ಟ್ ಗಾರ್ಡ್ ನ ರೈಸಿಂಗ್ ಕಾರ್ಯಕ್ರಮದ ಅಂಗವಾಗಿ ಆಳ ಸಮುದ್ರದಲ್ಲಿ ಕೋಸ್ಟ್ ಗಾರ್ಡ್ ಪಡೆ ನಡೆಸುವ ಅಪಾಯಕಾರಿ ಕಾರ್ಯಚರಣೆಗಳ ಅಣಕು ಪ್ರದರ್ಶನ ಏರ್ಪಡಿಸಲಾಗಿತ್ತು.
ಮಂಗಳೂರು ಕಡಲ ಕಿನಾರೆಯಿಂದ ದೂರದ ಆಳ ಸಮುದ್ರ ದಲ್ಲಿ ಕೋಸ್ಟ್‌ಗಾರ್ಡ್ ಕಾರ್ಯಚರಣೆಗಳ ಅಣಕು ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಅಣುಕು ಪ್ರದರ್ಶನಲ್ಲಿ ICG ವಿಕ್ರಮ ಮತ್ತು ICG ಅಮರ್ತ್ಯ, ICG ಕಸ್ತುರಬಾ ಗಾಂಧಿ, ICG ಸಾವಿತ್ರಿಬಾಯಿ ಪುಲೆ ಗಾರ್ಡ್ ಹಡಗುಗಳು , 2 ಇಂಟರ್ ಸೆಪ್ಟರ್ ಬೋಟ್‌ಗಳಾದ CG 44, CG 420 , 2 ಡೋನಿಯರ್ ಏರ್ ಕ್ರಾಫ್ಟ್ ಸೇರಿದಂತೆ ALH ಹೆಲಿಕಾಪ್ಟರ್‌ಗಳು ಈ ಅಣಕು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದವು.

ಆಳ ಸಮುದ್ರದಲ್ಲಿ ಡೊನಿಯರ್ ವಿಮಾನಗಳ ಮೂಲಕ ಸರ್ವಲೆನ್ಸ್ , ಭಾರತದ ಸಮುದ್ರ ಗಡಿಯೊಳಗೆ ನುಸಳಲು ಯತ್ನಿಸುವ ನುಸುಕೋರರ ಬೋಟ್ ನ್ನು ಸ್ಪೀಡ್ ಬೋಟ್ ಗಳು ಸುತ್ತು ವರೆದು ಅವರನ್ನು ಸೆರೆಹಿಡಿರುವ ಅಪಾಯಕಾರಿ ಸನ್ನಿವೇಶ ವನ್ನು ಅಣಕು ಪ್ರದರ್ಶನದ ಮೂಲಕ ಪ್ರದರ್ಶಿಸಲಾಯಿತು.
ಸಮುದ್ರ ಮಾರ್ಗವಾಗಿ ನುಸುಳಲು ಯತ್ನಿಸುವ ಉಗ್ರರರನ್ನು 51MM ಮೊರಾಟ್ ಫೈರ್ ಮಾಡಿ ಹಿಮ್ಮೆಟ್ಟಿಸುವ ಕಾರ್ಯಾಚರಣೆ ಮೈ ಜುಮ್ ಎನಿಸುವಮತಿತ್ತು. ಆಳ ಸಮುದ್ರದಲ್ಲಿ ಬೆಂಕಿ ಹತ್ತಿಕೊಂಡ ಬೋಟ್ ಒಂದನ್ನು 1000TB ಪಂಪ್ ಮೂಲಕ ನೀರು ಹಾಯಿಸಿ ಬೆಂಕಿ ಆರಿಸುವ ಹಾಗೂ ಅದರಲ್ಲಿ ಅಪಾಯದಲ್ಲಿದ್ದರ ರಕ್ಷಣೆ ಸೇರಿದಂತೆ ಬೆಂಕಿ ಹತ್ತಿಕೊಂಡ ಬೋಟ್‌ಗೆ ತಕ್ಷಣ ನೀರು ಹಾಯಿಸಿ ನಂದಿಸುವ ಕಾರ್ಯಚರಣೆ ಪ್ರದರ್ಶಿಸಲಾಯಿತು. ಈ ವೇಳೆ ಸಮುದ್ರಕ್ಕೆ ಬಿದ್ದವರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸುವ ಕಾರ್ಯಾಚಾರಣೆ ಸೇರಿದಂತೆ ಶಸ್ತ್ರಾಸ್ತ್ರಗಳ ಬಳಕೆ ಬಗ್ಗೆ ಅಣಕು ಕಾರ್ಯಾಚರಣೆ ಪ್ರದರ್ಶಿಸಲಾಯಿತು.
ಕಡಲ ತೀರ ಅಂತಾರಾಷ್ಟ್ರೀಯ ಸಮುದ್ರ ಗಡಿಭಾಗದಲ್ಲಿ ಕಣ್ಗಾವಲು, ಶೋಧ ಮತ್ತು ರಕ್ಷಣೆ ಹೊಣೆ ಹೊತ್ತಿರುವ ಕೋಸ್ಟ್‌ಗಾರ್ಡ್ ತನ್ನ ಯಾವುದೇ ಕಠಿಣ ಪರಿಸ್ಥಿತಿಯನ್ನೂ ನಿಭಾಯಿಸುವುದಕ್ಕೆ ಸಜ್ಜು ಎನ್ನುವ ಸಂದೇಶದೊಂದಿಗೆ ಕೋಸ್ಟ್‌ಗಾರ್ಡ್‌ನ ಸಿಬಂದಿ ವಿವಿಧ ಅಣಕು ಪ್ರದರ್ಶನದ ಮೂಲಕ ಸಾಬೀತುಪಡಿಸಿದರು.












Click it and Unblock the Notifications