ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು : ನೀರಿಗೆ ಬಿದ್ದ ಈರುಳ್ಳಿ ಕಣ್ಣೀರು ತರಿಸಿತು

By * ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಜೂ.2: ಆತುರವೇ ಅಪಘಾತಕ್ಕೆ ಕಾರಣ ಎಂಬುದು ಹಳೆ ನಾಣ್ನುಡಿ. ಆದರೆ, ಈರುಳ್ಳಿ ಹೆಚ್ಚಿದರೆ ಕಣ್ಣೀರು ಸುರಿಯುವುದು ಮಾಮೂಲಿ ಆದರೆ, ಇಲ್ಲಿ ನದಿ ನೀರಿಗೆ ಬಿದ್ದ ಈರುಳ್ಳಿ ಮೂಟೆಗಳು ಮಾಲೀಕರಿಗೆ ಭಾರಿ ನಷ್ಟವುಂಟು ಮಾಡಿ ಕಣ್ಣೀರು ತರಿಸಿದ್ದಂತೂ ನಿಜ.

ಈರುಳ್ಳಿ ತುಂಬಿಸಿಕೊಂಡು ಬರುತ್ತಿದ್ದ ಲಾರಿಯೊಂದು ಗ್ಯಾಸ್ ಟ್ಯಾಂಕರೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿ ಫಲ್ಗುಣಿ ನದಿಗೆ ಉರುಳಿ ಬಿದ್ದ ಘಟನೆ ಕೂಳೂರು ಸೇತುವೆ ಬಳಿ ಸಂಭವಿಸಿದೆ. ಈ ಸೇತುವೆ ಬಳಿ ಈ ರೀತಿ ಅಪಘಾತ ನಡೆಯುತ್ತಲೆ ಇರುತ್ತದೆ ಈ ಬಗ್ಗೆ ಸ್ಥಳೀಯ ಆಡಳಿತವಾಗಲಿ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವಾಗಲಿ ತಲೆ ಕೆಡಿಸಿಕೊಂಡಿಲ್ಲ. ಕೂಳೂರು ಗ್ರಾಮಸ್ಥರು ಅನೇಕ ಬಾರಿ ಸೇತುವೆ ದುರಸ್ತಿ ಹಾಗೂ ಅಪಘಾತ ವಲಯ ಘೋಷಣೆಗೆ ಆಗ್ರಹಿಸಿ ಸೋತಿದ್ದಾರೆ.

ಘಟನೆಯಲ್ಲಿ ಲಾರಿ ಚಾಲಕ ಝೈಬು ಹಾಗೂ ಕ್ಲೀನರ್ ನಾಗೇಶ್ ಎಂಬವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಉಡುಪಿ ಕಡೆಯಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಲಾರಿ, ಕೂಳೂರು ಸೇತುವೆ ಸಮೀಪ ಬರುತ್ತಿದ್ದಂತೆಯೇ ಎದುರಿನಲ್ಲಿದ್ದ ಗ್ಯಾಸ್ ಟ್ಯಾಂಕರನ್ನು ಓವರ್ ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿದ ಪರಿಣಾಮ ನದಿಗೆ ಉರುಳಿ ಬಿದ್ದಿದೆ. ಈರುಳ್ಳಿ ತುಂಬಿದ್ದ ಚೀಲಗಳು ನೀರಿಗೆ ಬಿದ್ದ ಹಿನ್ನೆಲೆಯಲ್ಲಿ ರೂ. 3.5 ಲಕ್ಷ ಮೌಲ್ಯ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಈರುಳ್ಳಿ ತುಂಬಿಸಿಕೊಂಡು ಬರುತ್ತಿದ್ದ ಲಾರಿ ನೀರಿಗೆ ಬಿದ್ದ ಚಿತ್ರಗಳನ್ನು ಮುಂದೆ ನೋಡಿ...

ಓವರ್ ಟೇಕ್ ಮಾಡುವ ಭರದಲ್ಲಿ

ಓವರ್ ಟೇಕ್ ಮಾಡುವ ಭರದಲ್ಲಿ

ಈರುಳ್ಳಿ ತುಂಬಿಸಿಕೊಂಡು ಬರುತ್ತಿದ್ದ ಲಾರಿಯೊಂದು ಓವರ್ ಟೇಕ್ ಮಾಡುವ ಭರದಲ್ಲಿ ಫಲ್ಗುಣಿ ನದಿಗೆ ಬಿದ್ದಿರುವ ಚಿತ್ರ

ಕೂಳೂರು ಸೇತುವೆ ಬಳಿ ಸಂಭವಿಸಿದ ಅಪಘಾತ

ಕೂಳೂರು ಸೇತುವೆ ಬಳಿ ಸಂಭವಿಸಿದ ಅಪಘಾತ

ಕೂಳೂರು ಸೇತುವೆ ಬಳಿ ಅಪಘಾತ ನಡೆಯುತ್ತಲೆ ಇರುತ್ತದೆ ಈ ಬಗ್ಗೆ ಸ್ಥಳೀಯ ಆಡಳಿತವಾಗಲಿ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವಾಗಲಿ ತಲೆ ಕೆಡಿಸಿಕೊಂಡಿಲ್ಲ.

ಅದೃಷ್ಟವಶಾತ್ ಲಾರಿ ಚಾಲಕ ಬಚಾವ್

ಅದೃಷ್ಟವಶಾತ್ ಲಾರಿ ಚಾಲಕ ಬಚಾವ್

ಘಟನೆಯಲ್ಲಿ ಲಾರಿ ಚಾಲಕ ಝೈಬು ಹಾಗೂ ಕ್ಲೀನರ್ ನಾಗೇಶ್ ಎಂಬವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈರುಳ್ಳಿ ನೀರಿಗೆ ಬಿದ್ದು ಭಾರಿ ನಷ್ಟ

ಈರುಳ್ಳಿ ನೀರಿಗೆ ಬಿದ್ದು ಭಾರಿ ನಷ್ಟ

ಈರುಳ್ಳಿ ತುಂಬಿದ್ದ ಚೀಲಗಳು ನೀರಿಗೆ ಬಿದ್ದ ಹಿನ್ನೆಲೆಯಲ್ಲಿ ರೂ. 3.5 ಲಕ್ಷ ಮೌಲ್ಯ ನಷ್ಟ ಸಂಭವಿಸಿದೆ.

English summary
Mangalore: Loss of Rs 3.5 lakh was incurred when a lorry laden with onions fell in Phalguni river near Kulur bridge
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X