ನಾನು ನಯಾ ಪೈಸೆ ಪಡೆದಿಲ್ಲ:ಧರ್ಮಸ್ಥಳದಲ್ಲಿ ಮುದ್ದಹನುಮೇಗೌಡ ಆಣೆ
ಮಂಗಳೂರು, ಮೇ 02:ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಮೈತ್ರಿ ಕಾರಣಕ್ಕೆ ಸೀಟು ಕೈತಪ್ಪಿ ಹೋಗಿತ್ತು.ಮೈತ್ರಿ ಧರ್ಮದ ಅನಿವಾರ್ಯತೆ ಹಿನ್ನೆಲೆಯಲ್ಲಿ ಸೀಟು ತ್ಯಾಗ ಮಾಡುವ ಬಗ್ಗೆ ಮುಖಂಡರು ಒತ್ತಾಯಿಸಿದರು ಎಂದು ತುಮಕೂರು ಸಂಸದ ಮುದ್ದಹನುಮೇಗೌಡ ಹೇಳಿದರು.
ಧರ್ಮಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಬಳಿಕ ಯಾರೋ ಅಪ್ರಬುದ್ಧ ವ್ಯಕ್ತಿಗಳಿಬ್ಬರು ಮಾತನಾಡಿದ ಆಡಿಯೋ ಬಂದಿತ್ತು.ನನ್ನ ರಾಜಕೀಯ ಬೆಳವಣಿಗೆ ಸಹಿಸದ ವಿಕೃತ ಮನಸ್ಸಿನವರು ಈ ಕೃತ್ಯ ಮಾಡಿದ್ದಾರೆ. ಆದರೆ ಈ ಬಗ್ಗೆ ಅಧಿಕೃತ ವ್ಯಕ್ತಿಗಳು ಯಾರೂ ಕೂಡ ಕ್ಲಾರಿಫೈ ಮಾಡಿಲ್ಲ ಎಂದರು.

ಹೀಗಾಗಿ ಕೋಟ್ಯಂತರ ಜನರು ನಂಬುವ ಧರ್ಮಸ್ಥಳ ಕ್ಷೇತ್ರದಲ್ಲಿ ಸ್ಪಷ್ಟನೆ ನೀಡುತ್ತಿದ್ದೇನೆ.ಮಂಜುನಾಥ ಸ್ವಾಮಿಯ ದರ್ಶನ ಮಾಡಿ, ಸ್ಪಷ್ಟವಾಗಿ ಹೇಳುತ್ತಿದ್ದೇನೆ. ನಾಮಪತ್ರ ಹಿಂಪಡೆಯುವುದಕ್ಕಾಗಲೀ, ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ನಯಾ ಪೈಸೆ ಪಡೆದಿಲ್ಲ. ನ್ಯಾಯಾಂಗದ ಹಿನ್ನೆಲೆಯಲ್ಲಿ ಬಂದಿರುವ ಕಾರಣದಿಂದ ಚಾರಿತ್ರ್ಯ ಹರಣ ಮಾಡಲು ಪ್ರಯತ್ನಿಸಿದ್ದಾರೆ ಎಂದು ಮುದ್ದಹನುಮೇಗೌಡ ತಿಳಿಸಿದರು.












Click it and Unblock the Notifications