ದಕ್ಷಿಣ ಕನ್ನಡಕ್ಕೆ 25 ಕೋಟಿ ತುರ್ತು ಅನುದಾನ ನೀಡಿದ ಸರ್ಕಾರ

Recommended Video

      ದಕ್ಷಿಣ ಕನ್ನಡಕ್ಕೆ 25 ಕೋಟಿ ತುರ್ತು ಅನುದಾನ ನೀಡಿದ ರಾಜ್ಯ ಸರ್ಕಾರ | Oneindia Kannada

      ದಕ್ಷಿಣ ಕನ್ನಡ, ಸೆಪ್ಟೆಂಬರ್ 07 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಿದರು. ಜಿಲ್ಲೆಯಲ್ಲಿ ಅತಿವೃಷ್ಠಿಯಿಂದಾಗಿ 213 ಕೋಟಿ ರೂ.ಗಳಷ್ಟು ನಷ್ಟವಾಗಿದೆ ಎಂದು ಅಂದಾಜಿಸಿದ್ದು ಸರ್ಕಾರಕ್ಕೆ ಜಿಲ್ಲಾಧಿಕಾರಿಗಳು ವರದಿ ಸಲ್ಲಿಸಿದರು.

      ಶುಕ್ರವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಎರಡೂ ಜಿಲ್ಲೆಗಳಲ್ಲಿ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು. ಅಧಿಕಾರಿಗಳಿಗೆ ಹಲವಾರು ಸೂಚನೆಗಳನ್ನು ನೀಡಿದರು.

      ದಕ್ಷಿಣ ಕನ್ನಡ ಜಿಲ್ಲೆಯ ಜನರ ಬವಣೆಗೆ ತುರ್ತಾಗಿ ಸ್ಪಂದಿಸಿದ ಸರ್ಕಾರ ಈಗಾಗಲೇ ಜಿಲ್ಲಾಡಳಿತಕ್ಕೆ 25 ಕೋಟಿ ರೂ.ಗಳನ್ನು ಪರಿಹಾರವಾಗಿ ನೀಡಿದೆ. ಜಿಲ್ಲಾಧಿಕಾರಿಗಳ ಬಳಿ ಇನ್ನೂ 4 ಕೋಟಿ ರೂ.ಗಳಿವೆ. ಜಿಲ್ಲೆಯಲ್ಲಿ ಒಟ್ಟು 759 ಕಿ.ಮೀ ರಸ್ತೆಗಳು, 152 ಸೇತುವೆಗಳು, 139 ಕೆರೆಗಳು, 1,237 ಸಾರ್ವಜನಿಕ ಕಟ್ಟಡಗಳು ಮಳೆ, ಪ್ರವಾಹದಿಂದಾಗಿ ಹಾನಿಗೊಂಡಿವೆ.

      ದುರಸ್ತಿ, ಪುನರ್ ನಿರ್ಮಾಣಕ್ಕೆ ಅಂದಾಜು ಪಟ್ಟಿಯನ್ನು ಸಲ್ಲಿಸಿದ್ದಾರೆ. ಆದರೆ, ಸರ್ಕಾರದ ಆದೇಶಕ್ಕೆ ನಿರೀಕ್ಷಿಸದೆ ಅತೀ ತುರ್ತಾಗಿ ಗ್ರಾಮೀಣ ರಸ್ತೆ ಹಾಗೂ ಪ್ರಮುಖ ಹೆದ್ದಾರಿ ರಸ್ತೆಗಳ ದುರಸ್ತಿ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

      ಬೆಳೆಹಾನಿ ಬಗ್ಗೆ ಸಮೀಕ್ಷೆ

      ಬೆಳೆಹಾನಿ ಬಗ್ಗೆ ಸಮೀಕ್ಷೆ

      ಜಿಲ್ಲೆಯಲ್ಲಿ ಕೃಷಿಗೆ ಸಂಬಂಧಿಸಿದಂತೆ ಶಾಸಕರು, ಲೋಕಸಭೆ ಸದಸ್ಯರ ಅಭಿಪ್ರಾಯವನ್ನು ಆಲಿಸಲಾಗಿದ್ದು, ಅಡಿಕೆ ಕೊಳೆರೋಗ ಹಾಗೂ ಕೃಷಿಗೆ ಸಂಬಂಧಿಸಿದಂತೆ ಸಮರ್ಪಕವಾಗಿ ಹಾಗೂ ಸಮಗ್ರವಾಗಿ ಪ್ರತ್ಯೇಕ ಸಮೀಕ್ಷೆಯನ್ನು ಸಮಗ್ರವಾಗಿ ನಡೆಸಿ ಕ್ರಮಕೈಗೊಳ್ಳಲಾಗುವುದು. ಇದೇ ರೀತಿ ಮನೆ ಹಾನಿ, ಮರಳು, ಕುಮ್ಕಿ ಭೂಮಿಗೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.

      ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ

      ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ

      ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ, ಕುಡಿಯುವ ನೀರಿನ ಬಗ್ಗೆಯೂ ಜಿಲ್ಲೆಗೆ ಅನುಕೂಲವಾಗುವಂತೆ ಎಲ್ಲ ಕ್ರಮಕೈಗೊಳ್ಳಲಾಗುವುದು. ಡೀಮ್ಡ್ ಫಾರೆಸ್ಟ್ - ವ್ಯಾಪ್ತಿ ಸ್ಪಷ್ಟವಾಗುವವರೆಗೆ ಕಂದಾಯ ಇಲಾಖೆಯವರು ಅರ್ಜಿಗಳನ್ನು ತಿರಸ್ಕರಿಸದೆ ಬಾಕಿ ಇಡಿ ಎಂಬ ಸೂಚನೆ ನೀಡಲಾಗಿದೆ. ಡೀಮ್ಡ್ ಫಾರೆಸ್ಟ್ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಈ ಸಂಬಂಧ ವರದಿ ಬರುವವರೆಗೆ ನಿರೀಕ್ಷಿಸಲು ನಿರ್ಧರಿಸಲಾಗಿದೆ.

      ಸರ್ವರ್ ಸಮಸ್ಯೆ ಈಗಿಲ್ಲ

      ಸರ್ವರ್ ಸಮಸ್ಯೆ ಈಗಿಲ್ಲ

      ಸರ್ವರ್ ಸಮಸ್ಯೆ ಈಗಿಲ್ಲ, ಭೂಮಿ ಸಂಬಂಧ ಸಮಸ್ಯೆ ಪರಿಹರಿಸಲು ಬಾಪೂಜಿ ಕೇಂದ್ರಗಳಲ್ಲಿ ಲಭ್ಯವಾಗಿಸಲಾಗುವುದು. ಈ ಸಂಬಂದ ಎಲ್ಲ ಇಒಗಳನ್ನು ಕರೆಸಿ ಸಭೆ ನಡೆಸಿ ಲೋಪದೋಷಗಳನ್ನು ಸರಿಪಡಿಸಿ. ಇನ್ನೊಂದು ವಾರದಲ್ಲಿ ಸಮಸ್ಯೆಗಳನ್ನು ಸರಿಪಡಿಸಲು ಭೂಮಿ ಕೇಂದ್ರ ಬೆಂಗಳೂರಿಗೆ ಸೂಚನೆ ನೀಡಲಾಗುವುದು.

      ಪ್ರಾದೇಶಿಕ ವಲಯವಾಗಿ ಅನುಷ್ಠಾನ

      ಪ್ರಾದೇಶಿಕ ವಲಯವಾಗಿ ಅನುಷ್ಠಾನ

      ಸಮಾಜಕಲ್ಯಾಣ ಇಲಾಖೆ- ಜಾಗದ ಕೊರತೆ ಇಲ್ಲ ಹಾಸ್ಟೆಲ್ ಕಟ್ಟಡ ನಿರ್ಮಾಣ ಆರಂಭಿಸಲು ಸೂಚನೆ. ಕೊಳವೆ ಬಾವಿ ಕೊರೆಯಲು ಪ್ರಾದೇಶಿಕ ವಲಯವನ್ನಾಗಿಸಿ ಅನುಷ್ಠಾನಕ್ಕೆ ತರಲು ಚಿಂತನೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+