ಮಂಗಳೂರಿನಲ್ಲಿ ಮತ್ತೆ ಗ್ಯಾಂಗ್ ವಾರ್: ಓರ್ವ ಅಮಾಯಕ ಬಲಿ
ಮಂಗಳೂರು, ಜನವರಿ 22: ಮಂಗಳೂರನ್ನು ತಲ್ಲಣಿಸಿದ್ದ ರೌಡಿ ಇಲ್ಯಾಸ್ ಹತ್ಯೆ ಸುದ್ದಿ ಇನ್ನೂ ಹಸಿಯಾಗಿರುವಾಗಲೇ ಮತ್ತೊಂದು ಬರ್ಬರ ಹತ್ಯೆಗೆ ಕರಾವಳಿ ನಗರ ಸಾಕ್ಷಿಯಾಗಿದೆ.
ಮಂಗಳೂರಿನ ತಣ್ಣೀರುಬಾವಿಯಲ್ಲಿ ದುಷ್ಕರ್ಮಿಗಳು ಶಿವರಾಜ್(39) ಎಂಬುವವರನ್ನು ಹತ್ಯೆಗೈದಿದ್ದಾರೆ. ತಮ್ಮನ ಮೇಲಿನ ದ್ವೇಷಕ್ಕೆ ಅಣ್ಣನನ್ನು ಸಾಯಿಸಲಾಗಿದೆ ಎ ಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ.
ರಾತ್ರಿ ಮನೆಯ ಟೆರೇಸ್ ನಲ್ಲಿ ಮಲಗಿದ್ದ ಶಿವರಾಜ್ ಅವರನ್ನು ಮೂವರು ದುಷ್ಕರ್ಮಿಗಳು ಕೊಲೆ ಮಾಡಿದ್ದು, ಮೃತ ಶಿವರಾಜ್ ತಮ್ಮ ಭರತೇಶ್ ರೌಡಿ ಶೀಟರ್ ಆಗಿದ್ದ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ಭರತೇಶ್ ಮೇಲಿನ ದ್ವೇಷಕ್ಕೆ, ಯಾವುದೇ ಅಪರಾಧ ಪ್ರಕರಣಗಳಲ್ಲೂ ಕಾಣಿಸಿಕೊಳ್ಳದ, ಅಮಾಯಕ ಶಿವರಾಜ್ ನನ್ನು ಕೊಲೆ ಮಾಡಲಾಗಿದೆ. ದುಷ್ಕರ್ಮಿಗಳ ವಿರುದ್ಧ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಶಿವರಾಜ್ ತಮ್ಮ ಭರತೇಶ್ ಗೂಂಡಾಕಾಯ್ದೆಯಡಿ ಗಡಿಪಾರಾಗಿರುವುದಾಗಿ ದಾಖಲೆಗಳು ತಿಳಿಸಿವೆ.
ಜ.13 ರಂದು ಬೆಳಿಗ್ಗೆ ಉಳ್ಳಾಲದ ಟಾರ್ಗೆಟ್ ಗ್ರೂಪ್ ನ ಕುಖ್ಯಾತ ರೌಡಿ ಇಲ್ಯಾಸ್ ನನ್ನು ಮಂಗಳೂರಿನಲ್ಲಿ ಚೂರಿಯಿಂದ ಇರಿದು ಕೊಲೆ ಮಾಡಲಾಗಿತ್ತು.












Click it and Unblock the Notifications