ಮಂಗಳೂರು : ಉರ್ವ ಸ್ಟೋರ್‌ನಲ್ಲಿ ವಿಶಿಷ್ಟವಾಗಿ ಗಣಪತಿ ಚತುರ್ಥಿ ಆಚರಣೆ

ಮಂಗಳೂರು, ಆಗಸ್ಟ್. 27 : ಮಂಗಳೂರಿನ ಉರ್ವ ಸ್ಟೋರ್ ನಲ್ಲಿರುವ ಶ್ರೀ ಗಣಪತಿ ದೇವಾಲಯದಲ್ಲಿ ವಿಶಿಷ್ಟವಾಗಿ ಗಣೇಶ ಚತುರ್ಥಿ ಆಚರಿಸಲಾಯಿತು. ಎಲ್ಲೆಡೆ ಚೌತಿ ಪ್ರಯುಕ್ತ ಪೂಜೆ ಪುರಸ್ಕಾರ ನಡೆದರೆ, ಈ ದೇವಾಲಯದಲ್ಲಿ ವಿಶೇಷ ವೃಕ್ಷ ಸೇವೆ ನಡೆಸಲು ಭಕ್ತರಿಗೆ ಅವಕಾಶ ನೀಡಲಾಯಿತು.

ಪ್ರಕೃತಿ ಆರಾಧನೆಯ ಭಾಗವಾಗಿ ಗಣೇಶ ಚತುರ್ಥಿಯನ್ನು ವಿಶಿಷ್ಟವಾಗಿ ಆಚರಿಸಲು ಮಂಗಳೂರಿನ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ವೃಕ್ಷ ಸೇವೆ ನಡೆಸಿತು. ಇದಕ್ಕಾಗಿ ದೇವಾಲಯದಲ್ಲಿ ವಿಶಿಷ್ಟ ಸೇವೆ ಏರ್ಪಾಡು ಮಾಡಿತ್ತು. ಇದಕ್ಕೆ ದೇವಾಲಯದ ಆಡಳಿತ ಮಂಡಳಿ ಕೂಡ ಸಹಕಾರ ನೀಡಿತು.

ಚೌತಿಯ ಪ್ರಯುಕ್ತ ದೇವಾಲಯದ ಸೇವಾ ಕೌಂಟರ್ ನಲ್ಲಿ 50 ರೂಪಾಯಿ ವೃಕ್ಷ ಸೇವಾ ರಶೀದಿ ಮಾಡಿಸಿದ ಭಕ್ತರಿಗೆ ದೇವಾಲಯದ ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲು ಅವಕಾಶ ನೀಡಲಾಯಿತು. ಭಕ್ತರು ನೆಟ್ಟ ಗಿಡಗಳಿಗೆ ಅವರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಬರೆದು ಗಿಡಕ್ಕೆ ಟ್ಯಾಗ್ ಮಾಡಲಾಯಿತು.

ರಾಷ್ಟ್ರೀಯ ಪರಿಸರ ಆಸಕ್ತರ ಒಕ್ಕೂಟ ಸಹ ದಕ್ಷಿಣ ಕನ್ನಡದಲ್ಲಿ ಈ ಬಾರಿಯ ಗಣೇಶೋತ್ಸವದಲ್ಲಿ ಪರಿಸರ ಜಾಗೃತಿ ಮೂಡಿಸಿದೆ. ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಅದು ವಿತರಣೆ ಮಾಡಿದ್ದು, ಗಣೇಶನ ವಿಗ್ರಹದ ಜೇಡಿ ಮಣ್ಣು ನೀರಿನಲ್ಲಿ ಕರಗಿ ಗಣೇಶ ನಲ್ಲಿದ್ದ ಗಿಡ ಶಾಶ್ವತವಾಗಿ ಭೂಮಿಯಲ್ಲಿ ನೆಲೆ ನಿಲ್ಲುವಂತೆ ಮೂರ್ತಿರನ್ನು ರಚಿಸಲಾಗಿತ್ತು....

ಪರಿಸರ ಸ್ನೇಹಿ ಗಣೇಶ ಉತ್ಸವ

ಪರಿಸರ ಸ್ನೇಹಿ ಗಣೇಶ ಉತ್ಸವ

ಮಂಗಳೂರಿನ ಉರ್ವ ಸ್ಟೋರ್ ನಲ್ಲಿರುವ ಶ್ರೀ ಗಣಪತಿ ದೇವಾಲಯದಲ್ಲಿ ವಿಶಿಷ್ಟವಾಗಿ ಗಣೇಶ ಚತುರ್ಥಿ ಆಚರಿಸಲಾಯಿತು. ಗಣೇಶ ಉತ್ಸವದ ಪ್ರಯುಕ್ತ ಗಿಡ ನೆಡಲು ಅವಕಾಶ ನೀಡಲಾಯಿತು.

ಯಾವ-ಯಾವ ಗಿಡಗಳನ್ನು ನೆಟ್ಟರು?

ಯಾವ-ಯಾವ ಗಿಡಗಳನ್ನು ನೆಟ್ಟರು?

ಶ್ರೀಗಂಧ, ಚಂದನ, ಬಂಟ ಕೇಪು, ಹತ್ತಿ, ಅಶೋಕ ಆಲ, ಪುನರ್ಪುಳಿ, ದಾಲ್ಚಿನ್ನಿ, ಹುಣಸೆ, ಬಿಲ್ವ, ಚೇರಿ ಹೀಗೆ ಹಲವಾರು ಬಗೆಯ ಗಿಡಗಳನ್ನು ಭಕ್ತರಿಗೆ ನೀಡಿ, ಅವರಿಂದ ನಡೆಸಲಾಯಿತು.

ಪ್ರಸಾದವಾಗಿ ಮನೆಗೆ ತೆಗೆದುಕೊಂಡು ಹೋದರು

ಪ್ರಸಾದವಾಗಿ ಮನೆಗೆ ತೆಗೆದುಕೊಂಡು ಹೋದರು

ದೇವಾಲಯಕ್ಕೆ ಬಂದ ಕೆಲವು ಭಕ್ತರು, ಪ್ರಸಾದ ರೂಪದಲ್ಲಿ ತಮಗೆ ಬೇಕಾದ ಗಿಡಗಳನ್ನು ಅಲ್ಲಿಂದ ಮನೆಗೆ ತೆಗೆದುಕೊಂಡು ಹೋದರು. 50 ರೂಪಾಯಿ ವೃಕ್ಷ ಸೇವಾ ರಶೀದಿ ಮಾಡಿಸಿದ ಭಕ್ತರಿಗೆ ದೇವಾಲಯದ ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲು ಅವಕಾಶ ನೀಡಲಾಯಿತು.

ಧಾರ್ಮಿಕ ಮತ್ತು ಪರಿಸರ ಕಾರ್ಯ

ಧಾರ್ಮಿಕ ಮತ್ತು ಪರಿಸರ ಕಾರ್ಯ

'ಇಂತಹ ಸೇವೆ ದೇವಾಲಯ ಮಸೀದಿ, ಚರ್ಚ್ ಸೇರಿದಂತೆ ಎಲ್ಲ ಧಾರ್ಮಿಕ ಕ್ಷೇತ್ರಗಳಿಲ್ಲಿಯೂ ನಡೆಸಿದರೆ, ಒಂದೆಡೆ ಧಾರ್ಮಿಕ ಕಾರ್ಯವೂ ನಡೆಯಲಿದೆ ಇನ್ನೊಂದೆಡೆ ಪ್ರಕೃತಿಯ ಸೇವೆಯೂ ಮಾಡಿದಂತಾಗುತ್ತದೆ' ಎಂದು ಸಹ್ಯಾದ್ರಿ ಸಂಚಯದ ಮಾರ್ಗದರ್ಶಕ ದಿನೇಶ್ ಹೊಳ್ಳ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+