ಥಾಮಸ್ ಕೊಲೆ ಪ್ರಕರಣ, ಆರ್ಚ್ ಬಿಷಪ್ ಕೈವಾಡ!

ಅಖಿಲ ಕರ್ನಾಟಕ ಕ್ಯಾಥೋಲಿಲ್ ಕ್ರೈಸ್ತರ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ರಾಫೆಲ್ ರಾಜ್‌ರನ್ನು ಮಂಗಳೂರಿನ ಪೊಲೀಸರು ಬಂಧಿಸಿದ್ದಾರೆ. ಅಖಿಲ ಕರ್ನಾಟಕ ಕೆಥೋಲಿಕ ಕ್ರೈಸ್ತರ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ರಾಫೆಲ್ ರಾಜ್ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಆರ್ಚ್ ಬಿಷಪ್ ಡಾ. ಬರ್ನಾಡ್ ಮೊರಾಸ್ ವಿರುದ್ಧ ಆರೋಪ ಮಾಡಿದ್ದರು.
ಕೆ.ಜೆ.ಥಾಮಸ್ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಆರ್ಚ್ ಬಿಷಪ್ ಆರ್ಚ್ ಬಿಷಪ್ ಡಾ.ಬರ್ನಾಡ್ ಮೊರಾಸ್, ಬೆಂಗಳೂರಿನ ಕೆಥೆಡ್ರಲ್ ಚರ್ಚ್‌ನ ಅಂತೋಣಿ ಸ್ವಾಮಿ, ಧರ್ಮಕ್ಷೇತ್ರದ ಎಸ್ಟೇಟ್ ಕಮಿಟಿ ಅಧ್ಯಕ್ಷ ರೊನಾಲ್ಡ್ ಡಿಸೋಜರ ಕೈವಾಡವಿದೆ ಎಂದು ರಾಫೇಲ್ ರಾಜ್ ಆರೋಪಿಸಿದ್ದರು. ರಿಯಲ್ ಎಸ್ಟೇಟ್ ಮಾಫಿಯಾಕ್ಕೆ ಫಾದರ್ ಕೆ.ಜೆ ಥಾಮಸ್ ಬಲಿಯಾಗಿದ್ದು, ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು, ಕೂಡಲೆ ಬರ್ನಾಡ್ ಮೊರಾಸ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದರು.
ರಾಫೆಲ್ ರಾಜ್ ವಿರುದ್ಧ ಮಂಗಳವಾರ ಸಂಜೆ ನಗರದ ಕೊಂಕಣಿ ಪ್ರಚಾರ ಸಂಚಾಲನ್ ಅಧ್ಯಕ್ಷ ಸ್ಟಾನಿ ಅಲ್ವೇರಸ್ ಮತ್ತಿತರ ಕ್ರೈಸ್ತ ಮುಖಂಡರು ಬಂದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೂಡಲೇ ಕಾರ್ಯಾಚರಣೆ ನಡೆಸಿದ ಬಂದರ್ ಪೊಲೀಸರು ರಾಫೆಲ್ ರಾಜ್ ರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.











Click it and Unblock the Notifications