ಮಂಗಳೂರಿನಿಂದ ವಿಮಾನಯಾನ, ಪ್ರಯಾಣಕ್ಕೆ ಮಾರ್ಗಸೂಚಿ
ಮಂಗಳೂರು, ಮೇ 24: ಇಲ್ಲಿನ ಬಜ್ಪೆಯಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(MIA)ದಲ್ಲಿ ಮೇ 25ರಿಂದ ವಿಮಾನಯಾನ ಆರಂಭಗೊಳ್ಳಲಿದೆ. ಲಾಕ್ಡೌನ್ 4.0 ನಡುವೆ ದೇಶಿ ವಿಮಾನಯಾನಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ವಿಮಾನ ನಿಲ್ದಾಣ, ವಿಮಾನಯಾನ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಥರ್ಮಲ್ ಸ್ಕ್ಯಾನಿಂಗ್, ಮಾಸ್ಕ್ ಕಡ್ಡಾಯ, ಸ್ಯಾನಿಟೈಸರ್ ಬಳಕೆ ಸೇರಿದಂತೆ ವಿವಿಧ ನಿಯಮವನ್ನು ಪ್ರಯಾಣಿಕರು, ಸಿಬ್ಬಂದಿ ಪಾಲಿಸಬೇಕಿದೆ.
ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆ ತರಲು ಕೇಂದ್ರ ಸರ್ಕಾರವು ವಂದೇ ಭಾರತ್ ಮಿಷನ್ ಆರಂಭಿಸಿ, ದುಬೈ ಸೇರಿದಂತೆ ವಿವಿಧೆಡೆ ನೆಲೆಸಿದ್ದ ನೂರಾರು ಮಂದಿಯನ್ನು ಮಂಗಳೂರಿಗೆ ಕರೆ ತರಲಾಗಿದೆ.

ಯಾವ ಸಂಸ್ಥೆ ವಿಮಾನಗಳ ಹಾರಾಟ?
ಒಟ್ಟು 6 ಇಂಡಿಗೋ ಹಾಗೂ ಸ್ಪೈಸ್ ಜೆಟ್ ವಿಮಾನಗಳೂ ಮಂಗಳೂರಿನಿಂದ ಬೆಂಗಳೂರು, ಮುಂಬೈ ಹಾಗೂ ಚೆನ್ನೈಗೆ ಪ್ರಯಾಣಿಸಲಿವೆ. ಏರ್ ಇಂಡಿಯಾ ಇನ್ನೂ ಹಾರಾಟದ ಬಗ್ಗೆ ಸ್ಪಷ್ಟಣೆ ನೀಡಿಲ್ಲ.

ಎಷ್ಟು ವಿಮಾನ ಯಾವ ಊರಿಗೆ ವಿಮಾನ? ದರ ಎಷ್ಟು?
ಪ್ರಯಾಣಿಕರು ಇಂಡಿಗೋ ವಿಮಾನವೇರಿ ಮಂಗಳೂರಿನಿಂದ ಬೆಂಗಳೂರು, ಮುಂಬೈ ಹಾಗೂ ಚೆನ್ನೈಗೆ ತೆರಳಬಹುದು. ಇದೇ ರೀತಿ ಸ್ಪೈಸ್ ಜೆಟ್ ವಿಮಾನವೇರಿ ಬೆಂಗಳೂರು ಹಾಗೂ ಮುಂಬೈಗೆ ಮಾತ್ರ ತೆರಳಬಹುದು ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ. ಬೆಂಗಳೂರು-ಮಂಗಳೂರು ದರ ಕ್ಲಾಸ್ ಎ ಶ್ರೇಣಿಗೆ ಬರಲಿದ್ದು ಕನಿಷ್ಠ 2 ಸಾವಿರ ರುನಿಂದ 6 ಸಾವಿರ ರು ತನಕ ಇದೆ. ದರಗಳು ಬದಲಾವಣೆಗೆ ಒಳಪಟ್ಟಿವೆ.

ವಿಮಾನ ಹಾರಾಟ ಸಮಯ
* ಸ್ಪೈಸ್ ಜೆಟ್ ವಿಮಾನವು ಬೆಂಗಳೂರಿನಿಂದ ಮಂಗಳೂರು ಬೆಳಗ್ಗೆ 8:30 ಹಾಗೂ ಸಂಜೆ 7ಕ್ಕೆ ಹೊರಡಲಿದೆ.
*ಸ್ಪೈಸ್ ಜೆಟ್ ವಿಮಾನವು ಮಂಗಳೂರಿನಿಂದ ಬೆಂಗಳೂರಿಗೆ ಬೆಳಗ್ಗೆ 10.20, ರಾತ್ರಿ 9.35ಕ್ಕೆ ಹೊರಡಲಿದೆ.
* ಇಂಡಿಗೋ ವಿಮಾನವು ಮಂಗಳೂರಿನಿಂದ ಬೆಂಗಳೂರಿಗೆ ಸಂಜೆ 5.55ಕ್ಕೆ ಹೊರಡಲಿದೆ.
* ಮುಂಬೈನಿಂದ ಸ್ಪೈಸ್ ಜೆಟ್ ವಿಮಾನವು ಬೆಳಗ್ಗೆ 7.05ಕ್ಕೆ ಹಾಗೂ ಇಂಡಿಗೋ 9.30ಕ್ಕೆ ಹೊರಡಲಿವೆ.
* ಮಂಗಳೂರಿನಿಂದ ಮುಂಬೈ ಸ್ಪೈಸ್ ಜೆಟ್ ವಿಮಾನವು ಬೆಳಗ್ಗೆ 9.05ಕ್ಕೆ ಹಾಗೂ ಇಂಡಿಗೋ ಬೆಳಗ್ಗೆ 11.40ಕ್ಕೆ ಹೊರಡಲಿವೆ.
* ಚೆನ್ನೈನಿಂದ ಮಂಗಳೂರಿಗೆ ಇಂಡಿಗೋ ವಿಮಾನವು ಸಂಜೆ 5.45ಕ್ಕೆ ಹಾಗೂ ಮಂಗಳೂರಿನಿಂದ ಚೆನ್ನೈಗೆ ಬೆಳಗ್ಗೆ 8.05ಕ್ಕೆ ವಿಮಾನ ಹೊರಡಲಿದೆ.

ಕ್ವಾರಂಟೈನ್ ನಿಯಮ ಹೇಗಿದೆ?
ಕರ್ನಾಟಕಕ್ಕೆ ಆಗಮಿಸಿದ ಬಳಿಕ ಪ್ರಯಾಣಿಕರು ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ. ಒಂದೊಮ್ಮೆ ಸ್ಕ್ರೀನಿಂಗ್ ಸಂದರ್ಭದಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿದರೆ ಅಂಥವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. 14 ದಿನಗಳ ಕ್ವಾರಂಟೈನ್ ಅವಧಿ ಬಳಿಕ ನಡೆಸಿದ ತಪಾಸಣೆಯಲ್ಲಿ ಕೊರೊನಾ ವೈರಸ್ ನೆಗಟಿವ್ ಬಂದಿದ್ದಲ್ಲಿ ಮಾತ್ರ ಮನೆಗೆ ತೆರಳಲು ಅವಕಾಶ ನೀಡಲಾಗುತ್ತದೆ.












Click it and Unblock the Notifications