ಮಂಗ್ಳೂರು ಬಂದ್ ವೇಳೆ ಬಸ್ ಗೆ ಕಲ್ಲೆಸೆದಿದ್ದ ಐವರ ಬಂಧನ

ಸೌಹಾರ್ದ ರ್ಯಾಲಿ ಹಿನ್ನಲೆಯಲ್ಲಿ ಶನಿವಾರ ಮಂಗಳೂರು ಬಂದ್ ಗೆ ಕರೆ ನೀಡಿದ್ದ ಸಂದರ್ಭದಲ್ಲಿ ಕೆಎಸ್ ಆರ್ ಟಿಸಿ ಬಸ್ ಗಳಿಗೆ ಕಲ್ಲು ತೂರಿದ್ದ ಐದು ಜನ ಆರೋಪಿಗಳನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು, ಫೆಬ್ರವರಿ. 28 : ಕೇರಳ ಸಿಎಂ ಪಿಣರಾಯಿ ವಿಜಯನ್ ಆಗಮನವನ್ನು ವಿರೋಧಿಸಿ ಶನಿವಾರ ಮಂಗಳೂರು ಬಂದ್ ವೇಳೆ ಕೆಎಸ್ ಆರ್‌ಟಿಸಿ ಬಸ್‌ಗಳಿಗೆ ಕಲ್ಲೆಸೆದಿದ್ದ ಐದು ಮಂದಿ ಆರೋಪಿಗಳನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.

ಬಂಟ್ವಾಳ ಮಾರಿಪಳ್ಳದ ಪ್ರವೀಣ್, ಕಿಶೋರ್, ಕುಮ್ಡೇಲ್ ನ ಮುಕೇಶ್, ಕಲ್ಲಿಗೆಯ ಆತೀಶ್, ಬಂಟ್ವಾಳದ ಅಚ್ಯುತ ಬಂಧಿತ ಆರೋಪಿಗಳು.[ಸೌಹಾರ್ದ ರ್ಯಾಲಿ, ಮಂಗ್ಳೂರು ಬಂದ್ ಎಫೆಕ್ಟ್ ರೌಂಡಪ್]

Five persons held in connection with stone pelt case during mangaluru bandh

ಶನಿವಾರ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದಿದ್ದ ' ಸೌಹಾರ್ದ ರ್ಯಾಲಿ' ಯಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಭಾಗವಹಿಸುವುದನ್ನು ವಿರೋಧಿಸಿ ಸಂಘ ಪರಿವಾರ ದಕ್ಷಿಣ ಕನ್ನಡ ಬಂದ್ ಗೆ ಕರೆ ನೀಡಿತ್ತು.

ಈ ಸಂದರ್ಭ ನಗರದ ಕುಲಶೇಖರ ಹಾಗೂ ಹಳೆಯಂಗಡಿ, ಬಿ.ಸಿ.ರೋಡ್ ನ ತುಂಬೆಯಲ್ಲಿ ಕೆಎಸ್ ಆರ್ ಟಿಸಿ ಬಸ್ಸುಗಳಿಗೆ ಕಿಡಿಗೇಡಿಗಳು ಕಲ್ಲು ತೂರಿದ್ದರು.

ಬಂಟ್ವಾಳ ಪೊಲೀಸರು ಕಾರ್ಯಚರಣೆ ನಡೆಸಿ ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+