ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿಯಲ್ಲಿ ಲೈಟ್ ಫಿಶಿಂಗ್ ನಿಷೇಧ, ನಿರಾಳರಾದ ಪಾರಂಪರಿಕ ಮೀನುಗಾರರು

|
Google Oneindia Kannada News

ಮಂಗಳೂರು, ಫೆಬ್ರವರಿ 07:ಕರಾವಳಿಯ ಆಳ ಸಮುದ್ರದಲ್ಲಿ ಲೈಟ್ ಮತ್ತು ಬುಲ್ ಟ್ರಾಲ್ ಫಿಶಿಂಗ್ ಗೆ ನಿಷೇಧ ಹೇರಲಾಗಿದೆ. ಕೇಂದ್ರ ಸರ್ಕಾರ 2017ರ ನವೆಂಬರ್ 10ರಂದು ಲೈಟ್ ಮತ್ತು ಬುಲ್ ಟ್ರಾಲ್ ಫಿಶಿಂಗ್ ಗೆ ನಿಷೇಧ ಹೇರಿ ಹೊರಡಿಸಿದ್ದ ಆದೇಶಕ್ಕೆ ಮನ್ನಣೆ ನೀಡಿರುವ ರಾಜ್ಯ ಹೈಕೋರ್ಟ್‌, ಕೇಂದ್ರ ಸರ್ಕಾರದ ಆದೇಶ ಪಾಲಿಸುವಂತೆ ನಿರ್ದೇಶನ ನೀಡಿದೆ.

ಕೇಂದ್ರ ಸರಕಾರದ ಆದೇಶದಂತೆ ಕರಾವಳಿಯ 12 ನಾಟಿಕಲ್ ಮೈಲ್‌ ಆಚೆಗೆ ಲೈಟ್ ಫಿಶಿಂಗ್ ಮತ್ತು ಬುಲ್ ಟ್ರಾಲ್ ಫಿಶಿಂಗ್ ಅನ್ನು ನಿಷೇಧಿಸಲಾಗಿದೆ. ಕರಾವಳಿಯಲ್ಲಿ ನಡೆಯುತ್ತಿದ್ದ ಲೈಟ್ ಫಿಶಿಂಗ್ ಹಾಗೂ ಬುಲ್ ಟ್ರಾಲ್ ಫಿಶಿಂಗ್ ವಿರುದ್ಧ ಕರಾವಳಿಯ ಪಾರಂಪರಿಕ ಮೀನುಗಾರರು ಸಿಡಿದೆದ್ದಿದ್ದರು. ಲೈಟ್ ಫಿಶಿಂಗ್ ಹಾಗೂ ಬುಲ್ ಟ್ರಾಲ್ ಫಿಶಿಂಗ್ ನಿಷೇಧಿಸುವಂತೆ ಹೋರಾಟ ಆರಂಭಿಸಿದ್ದರು.

ಲೈಟ್ ಹಾಗೂ ಬುಲ್ ಟ್ರಾಲ್ ಫಿಶಿಂಗ್ ವಿರುದ್ಧ ಧರಣಿ ಆರಂಭಿಸಿದ ಮೀನುಗಾರರುಲೈಟ್ ಹಾಗೂ ಬುಲ್ ಟ್ರಾಲ್ ಫಿಶಿಂಗ್ ವಿರುದ್ಧ ಧರಣಿ ಆರಂಭಿಸಿದ ಮೀನುಗಾರರು

ಈ ನಡುವೆ ಈ ಅವೈಜ್ಞಾನಿಕ ಮೀನುಗಾರಿಕೆ ವಿರುದ್ಧ ರಾಜ್ಯ ಹೈಕೋರ್ಟ್ ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಲೈಟ್ ಫಿಶಿಂಗ್ ನಿಷೇಧಿಸುವಂತೆ ನ್ಯಾಯಾಲಯವನ್ನು ಕೋರಿದ್ದರು. ಇದೀಗ ಹೈಕೋರ್ಟ್‌ ಆದೇಶದಿಂದ ಪಾರಂಪರಿಕ ಮೀನುಗಾರರು ನಿರಾಳರಾಗಿದ್ದಾರೆ. ಮುಂದೆ ಓದಿ..

 ಮೀನುಗಳ ಉತ್ಪತ್ತಿ ಮೇಲೆ ಪರಿಣಾಮ

ಮೀನುಗಳ ಉತ್ಪತ್ತಿ ಮೇಲೆ ಪರಿಣಾಮ

ಆಳ ಸಮದ್ರದಲ್ಲಿ ಎಲ್‌ಇಡಿ, ಹಾಲೋಜನ್ ಮತ್ತಿತರ ಬೆಳಕು ಬಳಸಿ ಯಾಂತ್ರೀಕೃತ ದೋಣಿಗಳ ಮೂಲಕ ಮೀನುಗಾರಿಕೆ ಮಾಡಲಾಗುತ್ತಿದೆ. ಇದರಿಂದ ಅಪರೂಪದ ಮೀನಿನ ಸಂತತಿ ಹಾಗೂ ಮೀನು ಮರಿಗಳನ್ನೂ ಸಹ ಹಿಡಿಯಲಾಗುತ್ತಿತ್ತು. ಇದು ಮೀನುಗಳ ಉತ್ಪತ್ತಿ ಮೇಲೆ ಪರಿಣಾಮ ಬೀರುತ್ತದೆ ಎಂದು ಪಾರಂಪರಿಕ ಮೀನುಗಾರರು ಆತಂಕ ವ್ಯಕ್ತಪಡಿಸಿದ್ದರು.

 ಅರ್ಜಿದಾರರಿಗೆ ನಿರ್ದೇಶನ

ಅರ್ಜಿದಾರರಿಗೆ ನಿರ್ದೇಶನ

ಉಡುಪಿಯ ಮಲ್ಪೆ ಬಂದರಿನ ಅಖಿಲ ಕರ್ನಾಟಕ ಪರ್ಸೆ ಸೀನ್‌ ಮೀನುಗಾರರ ಸಂಘ ಸಲ್ಲಿಸಿದ್ದ ಅರ್ಜಿ ಆಲಿಸಿದ ಹೈಕೋರ್ಟ್ ನ ಏಕಸದಸ್ಯ ಪೀಠ ಈ ಹಿಂದೆ ಷರತ್ತು ಬದ್ಧ ಮೀನುಗಾರಿಕೆಗೆ ಅವಕಾಶ ನೀಡಿ, 2018ರ ಡಿಸೆಂಬರ್ 21ರಂದು ನೀಡಿದ್ದ ಆದೇಶವನ್ನು ಬುಧವಾರ ಮಾರ್ಪಾಡು ಮಾಡಿ ಕೇಂದ್ರದ ಆದೇಶ ಪಾಲನೆ ಮಾಡಲು ಅರ್ಜಿದಾರರಿಗೆ ನಿರ್ದೇಶನ ನೀಡಿತು. ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ವಕೀಲರು ಕೇಂದ್ರ ಸರ್ಕಾರದ ಈ ಹಿಂದಿನ ಆದೇಶವನ್ನು ಸಮರ್ಥಿಸಿಕೊಂಡಿದ್ದರು.

ನಿಷೇಧವಿದ್ದರೂ ಕರಾವಳಿಯಲ್ಲಿ ಮತ್ತೆ ಕಾಣಿಸಿಕೊಂಡ ಬುಲ್ ಟ್ರಾಲ್ ಮೀನುಗಾರಿಕೆನಿಷೇಧವಿದ್ದರೂ ಕರಾವಳಿಯಲ್ಲಿ ಮತ್ತೆ ಕಾಣಿಸಿಕೊಂಡ ಬುಲ್ ಟ್ರಾಲ್ ಮೀನುಗಾರಿಕೆ

 2017, ನ.10ರಂದು ಆದೇಶ ಹೊರಡಿಸಿತ್ತು

2017, ನ.10ರಂದು ಆದೇಶ ಹೊರಡಿಸಿತ್ತು

ಕರ್ನಾಟಕ, ಕೇರಳ, ಗೋವಾ ಮತ್ತು ಮಹಾರಾಷ್ಟ್ರ ಒಳಗೊಂಡಂತೆ ಇತ್ತೀಚಿನ ವರ್ಷಗಳಲ್ಲಿ ಎಲ್‌ಇಡಿ ಮತ್ತಿತರ ಬೆಳಕು ಬಳಸಿ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸಲಾಗುತ್ತಿತ್ತು. ಅದು ಮೀನು ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂಬುದನ್ನು ಪರಿಗಣಿಸಿ ಕೇಂದ್ರ ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ ಬೆಳಕು ಮೀನುಗಾರಿಕೆಯನ್ನು ನಿಷೇಧಿಸಿ 2017 ರ ನವೆಂಬರ್ 10ರಂದು ಆದೇಶ ಹೊರಡಿಸಿತ್ತು. ಅದನ್ನು ಪ್ರಶ್ನಿಸಿ ಯಾಂತ್ರಿಕೃತ ಮೀನುಗಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

 ಹರ್ಷ ವ್ಯಕ್ತಪಡಿಸಿದ ಮೀನುಗಾರರು

ಹರ್ಷ ವ್ಯಕ್ತಪಡಿಸಿದ ಮೀನುಗಾರರು

ಹೈಕೋರ್ಟ್ ನ ಈ ಆದೇಶಕ್ಕೆ ಕರಾವಳಿಯ ಪಾರಂಪರಿಕ ಪರ್ಸೆ ಸೀನ್‌ ಮೀನುಗಾರರರು ಸ್ವಾಗತಿಸಿದ್ದು ಹರ್ಷ ವ್ಯಕ್ತಪಡಿಸಿದ್ದಾರೆ. ಸಮುದ್ರದಲ್ಲಿ ಅಪರೂಪದ ಮೀನಿನ ಸಂತತಿ ಉಳಿವಿಗೆ ಹಾಗೂ ಮೀನುಗಳ ಉತ್ಪತ್ತಿ ಹೆಚ್ಚಾಗಲು ಈ ಆದೇಶ ಪೂರಕವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕರಾವಳಿಯ ಆಳ ಸಮುದ್ರದಲ್ಲಿ ಮತ್ತೆ ಕಡಲ ಮಕ್ಕಳ ಕಲರವ ಆರಂಭಕರಾವಳಿಯ ಆಳ ಸಮುದ್ರದಲ್ಲಿ ಮತ್ತೆ ಕಡಲ ಮಕ್ಕಳ ಕಲರವ ಆರಂಭ

English summary
High court directed to follow central government's order on Banning fishing by using light in coastal area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X