ಲೈಂಗಿಕ ದೌರ್ಜನ್ಯ ಆರೋಪ: ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲ ವಿರುದ್ಧ FIR ದಾಖಲು

ಮಂಗಳೂರು, ಸೆಪ್ಟೆಂಬರ್​ 02: ಪುತ್ತಿಲ ಪರಿವಾರದ ಸಂಸ್ಥಾಪಕ ಹಾಗೂ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದಡಿ ದೂರು ದಾಖಲಾಗಿದೆ. ಈ ದೂರಿನ ಮೇರೆಗೆ ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿರುವ ದಕ್ಷಿಣ ಕನ್ನಡ ಮಹಿಳಾ ಠಾಣೆಯಲ್ಲಿ ಐಪಿಸಿ 417, 354A, 506 ಅಡಿಯಲ್ಲಿ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

47 ವರ್ಷದ ಮಹಿಳೆಯೊಬ್ಬರು ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ 2023 ಜೂನ್​ನಲ್ಲಿ ಬೆಂಗಳೂರಿನ ಪೈ ವಿಸ್ತಾ ಹೋಟೆಲ್​ನಲ್ಲಿ ಲೈಂಗಿಕ ದೌರ್ಜನ್ಯವೆಸಗಿ ಫೋಟೋ, ಸೆಲ್ಫಿ ಹಾಗೂ ವಿಡಿಯೋ ಮಾಡಿ ಬ್ಲ್ಯಾಕ್​ಮೇಲ್ ಮಾಡಿದ್ದಾರೆಂದು ಆರೋಪಿಸಿದ್ದಾರೆ.

FIR Filed Against BJP Leader Arun Kumar Puthila

ಎಫ್‌ಐಆರ್‌ನಲ್ಲಿರುವುದೇನು..?

ದೂರುದಾರನ್ನು ಅರುಣ್ ಕುಮಾರ್ ಪುತ್ತಿಲ ಬೆಂಗಳೂರು ಪೈ ವಿಸ್ತಾ ಹೋಟೆಲ್‌ಗೆ ಜೂನ್‌ ತಿಂಗಳ 2023ಕ್ಕೆ ಕರೆಸಿಕೊಂಡು, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಸಿ ದೂರುದಾರ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಎಸೆಗಿದ್ದಾರೆ. ಇತರ ಕಡೆಗಳಲ್ಲಿಯೂ ಮುಖತಃ ಸಂಪರ್ಕಿಸುತ್ತಿದ್ದ ಎಲ್ಲಾ ಸಂದರ್ಭಗಳಲ್ಲಿಯೂ, ಕೂಡ ಒಂದು ನಿನ್ನ ಪ್ರಾಣ ಹೋಗುತ್ತದೆ. ಇಲ್ಲ ನನ್ನ ಪ್ರಾಣ ಹೋಗುತ್ತದೆ ಎಂದು ಬ್ಲ್ಯಾಕ್‌ ಮೇಲ್‌ ಮಾಡಿ ದೂರುದಾರನ್ನು ಆರೋಪಿ ಇರುವ ಕಡೆ ಕರೆಸಿಕೊಳ್ಳುತ್ತಿದ್ದರು'.

ದೂರುದಾರು ಹಾಗೂ ಅವರ ಮಗಳನ್ನು ಜೀವನ ಪೂರ್ತಿ ಯಾವುದೇ ಕುಂದು ಕೊರೆತೆಗಳಿಲ್ಲದೇ ನೋಡಿಕೊಳ್ಳುತ್ತೇನೆಂದು ಹೇಳಿ ಫೋಟೋ, ಸೆಲ್ಫಿ, ಆಡಿಯೋ ಹಾಗೂ ವಿಡಿಯೋಗಳು ತನ್ನಲ್ಲಿದೆ ಎಂದು ಹೇಳಿ ದೂರುದಾರರನ್ನು ಹೆದರಿಸಿ ಬ್ಲ್ಯಾಕ್ ಮೇಲೆ ಮಾಡಿ ಅವರಿಂದ ಕೆಲಸಗಳನ್ನು ಮಾಡಿಸಿಕೊಂಡಿದ್ದಾರೆ. 2024ರ ಲೋಕಸಭಾ ಚುನಾವಣೆ ನಂತರ ಅವರೊಂದಿಗೆ ಮಾತುಕತೆಯನ್ನು ಕಡಿಮೆ ಮಾಡಿದ್ದು, ದೂರುದಾರನ್ನು ಸಂಪೂರ್ಣವಾಗಿ ಶೋಷಣೆ ಮಾಡಿರುವ ಬಗ್ಗೆ ಎಫ್‌ಐಆರ್‌ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+