ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಫಾಜಿಲ್ ಹತ್ಯೆ; ವದಂತಿಗೆ ಕಿವಿಗೊಡದಂತೆ ಪೊಲೀಸರ ಮನವಿ

|
Google Oneindia Kannada News

ಮಂಗಳೂರು, ಜುಲೈ 29: ಮಂಗಳೂರಿನ ಸುರತ್ಕಲ್ ಯುವಕ ಫಾಜಿಲ್​ ಮಂಗಲಪೇಟೆ ಹತ್ಯೆ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ವದಂತಿಗಳನ್ನು ನಂಬದಂತೆ ಪೊಲಿಸರು ಮನವಿ ಮಾಡಿದ್ದಾರೆ.

ಸುಳ್ಯದ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ ನೆಟ್ಟಾರ ಹತ್ಯೆಯ ಬೆನ್ನಲ್ಲೇ ಫಾಜಿಲ್​ ಮಂಗಲಪೇಟೆ ಹತ್ಯೆಯಾಗಿದ್ದು ಜಿಲ್ಲೆಯಲ್ಲಿ ಪರಿಸ್ಥಿತಿಯನ್ನು ಆತಂಕಕ್ಕೆ ನೂಕಿದೆ ಈಗಾಗಲೇ ಫಾಜಿಲ್ ಅಂತ್ಯಕ್ರಿಯೆ ಮುಗಿದಿದೆ.

ಸುರತ್ಕಲ್‌ನಲ್ಲಿ ಯುವಕನ ಕೊಲೆ: ನಿಷೇಧಾಜ್ಞೆ ಜಾರಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಸುರತ್ಕಲ್‌ನಲ್ಲಿ ಯುವಕನ ಕೊಲೆ: ನಿಷೇಧಾಜ್ಞೆ ಜಾರಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

"ಇದು ಪ್ರೇಮ ಪ್ರಕರಣ ಅಥವಾ ಕೋಮುವಾದದ ನಂಟನ್ನು ನೀಡುವ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿವೆ. ಇನ್ನೂ ನಾವು ಆರೋಪಿಗಳನ್ನು ಹಿಡಿಯಲು ಸಾಧ್ಯವಾಗದ ಕಾರಣ ಏನನ್ನಾದರೂ ಹೇಳಲು ಆಗುವುದಿಲ್ಲ. ಆರೋಪಿಗಳನ್ನು ವಿಚಾರಣೆಗೊಳಪಡಿಸುವವರೆಗೆ ಅವರ ಉದ್ದೇಶಗಳ ಬಗ್ಗೆ ನಾವು ಪ್ರತಿಕ್ರಿಯಿಸುವುದಿಲ್ಲ" ಎಂದು ಮಂಗಳೂರು ಸಿಪಿ ಎನ್‌ಎಸ್ ಕುಮಾರ್ ಹೇಳಿದರು.

Mangaluru Fazil case: Police request not to listen to rumours

ಇನ್ನು ಎಡಿಜಿಪಿ ಅಲೋಕ್ ಕುಮಾರ್ ಕೂಡ ಪ್ರತಿಕ್ರಿಯೆ ನೀಡಿದ್ದು, 'ಈಗ ತಾನೆ ಅಂತ್ಯಕ್ರಿಯೆ ಮುಗಿದಿದೆ, ಜಿಲ್ಲೆಯಲ್ಲಿ ಪರಿಸ್ಥಿತಿ ಶಾಂತವಾಗಿದೆ. ಅಧಿಕಾರಿಗಳು ಈಗ ತನಿಖೆಯತ್ತ ಗಮನಹರಿಸಿದ್ದಾರೆ, ಘಟನೆ ನಡೆದ ಸಿಸಿಟಿವಿ ಪರಿಶೀಲಿಸುತ್ತಿದ್ದಾರೆ. ಅಪರಾಧದ ಉದ್ದೇಶಕ್ಕಾಗಿ ಬಳಸಿದ ವಾಹನವು ಮುಖ್ಯವಾಗಿದೆ. ಶೀಘ್ರದಲ್ಲೇ ಪ್ರಕರಣವನ್ನು ಭೇದಿಸುತ್ತೇವೆ. ನಾಳೆ ಬೆಳಗ್ಗೆಯವರೆಗೆ ಸೆಕ್ಷನ್ 144 ಜಾರಿಯಲ್ಲಿರುತ್ತದೆ" ಎಂದರು.

ಮುಂದುವರೆದು, "ಇತ್ತೀಚಿನ ದಿನಗಳಲ್ಲಿ ಇಂತಹ 2-3 ಪ್ರಕರಣಗಳು ನಡೆದಿವೆ. ಅವರು ಒಂದಕ್ಕೊಂದು ಲಿಂಕ್ ಆಗಿದ್ದಾರೆಯೇ ಎಂದು ಪರಿಶೀಲಿಸಲಾಗುತ್ತದೆ. ನಾವು ಇನ್ನೂ ಅಪರಾಧಿಗಳು ಮತ್ತು ಅವರ ಉದ್ದೇಶವನ್ನು ಕಂಡುಹಿಡಿದಿಲ್ಲ. ಆದ್ದರಿಂದ, ಅವರ ಸಂಪರ್ಕಗಳ ಕುರಿತು ನಾವು ಏನು ಹೇಳಿಕೆ ನೀಡಲು ಸಾಧ್ಯವಿಲ್ಲ' ಎಂದರು.

Mangaluru Fazil case: Police request not to listen to rumours

'ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ಹೇಳಿಕೆಗಳನ್ನು ನೀಡದಂತೆ ನಾನು ಯುವಕರಿಗೆ ಸಲಹೆ ನೀಡುತ್ತೇನೆ. ನಾವು ವಾಸ್ತವಾಂಶದ ಆಧಾರದ ಮೇಲೆ ತನಿಖೆಯನ್ನು ಮುಂದುವರೆಸುತ್ತೇವೆ" ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.

Mangaluru Fazil case: Police request not to listen to rumours

ಮಂಗಳೂರು ಹೊರವಲಯದಲ್ಲಿರುವ ಸುರತ್ಕಲ್‌ನಲ್ಲಿ ಗುರುವಾರ ಸಂಜೆ ದುಷ್ಕರ್ಮಿಗಳು ಫಾಜಿಲ್​ ಮಂಗಲಪೇಟೆ (23) ಎನ್ನುವ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

Recommended Video

Karnataka: ನೆಟ್ಟಾರು ಅಂಗಡಿಯಲ್ಲಿ ಕೆಲಸಕಿದ್ದ ವನ ಪುತ್ರನಿಂದಲೆ ಸ್ಕೆಚ್!! | Politics | OneIndia Kannada

English summary
mangaluru Fazil death case: Police request not to listen to rumours on social media. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X