ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸ್ ಇಲಾಖೆ ವೈಫಲ್ಯಕ್ಕೆ ಸಾಕ್ಷಿಯಾದ ಮಂಗಳೂರು ಗ್ಯಾಂಗ್ ವಾರ್

|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 27: ದಕ್ಷಿಣ ಕನ್ನಡ ಜಿಲ್ಲೆಯ ಗಾಂಜಾ ಹಾಗೂ ಮರಳು ಮಾಫಿಯಾ ಅಟ್ಟಹಾಸಕ್ಕೆ ಬಂಟ್ವಾಳ ಮತ್ತೊಮ್ಮೆ ಸಾಕ್ಷಿಯಾಗಿದೆ. ಪೊಲೀಸರ ಕಣ್ಣಮುಂದೆಯೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕರಿಬ್ಬರ ಹೆಣ ಬಿದ್ದಿದ್ದು ಕಾನೂನು ವೈಫಲ್ಯತೆಯನ್ನು ಮತ್ತೆ ಎತ್ತಿ ಹಿಡಿದಿದೆ.

18 ವರ್ಷಗಳಲ್ಲಿ 30 ಮನುಷ್ಯರನ್ನು ತಿಂದು ತೇಗಿದ್ದ ರಷ್ಯಾ ದಂಪತಿ!18 ವರ್ಷಗಳಲ್ಲಿ 30 ಮನುಷ್ಯರನ್ನು ತಿಂದು ತೇಗಿದ್ದ ರಷ್ಯಾ ದಂಪತಿ!

ಗ್ಯಾಂಗ್ ವಾರ್ ಹುಡುಗರ ತಲವಾರು ಕಾಳಗಕ್ಕೆ ಮತ್ತಿಬ್ಬರ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಘಟನಾ ಸ್ಥಳಕ್ಕೆ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆ ಕಾರ್ಯಕ್ಕಾಗಿ ಮಾರ್ಗದರ್ಶನ ನೀಡಿದ್ದಾರೆ.

Farangipet gangwar killing takes place amidst police check post in Mangaluru

ತಲೆಮರೆಸಿಕೊಂಡಿರುವ ಆರೋಪಿಗಳ ಹುಡುಕಾಟಕ್ಕಾಗಿ ಅಲ್ಲಲ್ಲಿ ನಾಕಾಬಂದಿ ಹಾಕಲಾಗಿದ್ದು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಘಟನೆಗೆ ಕಣ್ಣೂರು ಸೇರಿದಂತೆ ಪಡೀಲ್, ಬಜಾಲ್ ಪರಿಸರ ಹುಡುಗರು ಭಾಗಿಯಾಗಿರುವುದನ್ನು ಶಂಕಿಸಿರುವ ಪೊಲೀಸರು, ಹುಡುಗರನ್ನು ಬಂಧಿಸಲು ಬಲೆ ಬೀಸಿದ್ದಾರೆ.

ಎರಡು ಗಾಂಜಾ ಗ್ಯಾಂಗಿನ ಯುವಕರ ನಡುವೆ ರಾಷ್ಟ್ರೀಯ ಹೆದ್ದಾರಿ ಫರಂಗಿಪೇಟೆ ಪೊಲೀಸ್ ಔಟ್ ಪೋಸ್ಟ್ ಬಳಿ ಸೋಮವಾರ ತಡರಾತ್ರಿ ವೇಳೆ ಭೀಕರ ಕಾಳಗ ನಡೆದಿದ್ದು ಪೊಲೀಸ್ ಸಿಬ್ಬಂದಿ ಪ್ರತ್ಯಕ್ಷದರ್ಶಿಯಾಗಿದ್ದರೆನ್ನಲಾಗಿದೆ.

ಬಂಟ್ವಾಳ ಹೊರವಲಯದಲ್ಲಿ ಗ್ಯಾಂಗ್ ವಾರ್: ಇಬ್ಬರ ಸಾವುಬಂಟ್ವಾಳ ಹೊರವಲಯದಲ್ಲಿ ಗ್ಯಾಂಗ್ ವಾರ್: ಇಬ್ಬರ ಸಾವು

ಝಿಯಾ ಮತ್ತವನ ತಂಡ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಸೋಮವಾರ ರಾತ್ರಿ ಸುಮಾರು 11:30ರ ವೇಳೆಗೆ ಫರಂಗಿಪೇಟೆ ಪೆಟ್ರೋಲ್ ಪಂಪ್ನಲ್ಲಿ ಪೆಟ್ರೋಲ್ ಹಾಕಿ ಹೆದ್ದಾರಿಯಲ್ಲೇ ವಾಪಸ್ಸಾಗಲು ನಿಧಾನವಾಗಿ ತಿರುತಿರುಗಿತ್ತಿದ್ದಂತೆಯೇ ಕಾರು ಹಾಗೂ ಪಿಕಪ್ ವಾಹನದಲ್ಲಿ ಬಂದ ಇನ್ನೊಂದು ತಂಡ ಜಿಯಾ ತಂಡದ ಕಾರನ್ನು ಅಡ್ಡಗಟ್ಟಿ ಕಾರಿನ ಗಾಜು ಪುಡಿಗಟ್ಟಿ ತಲವಾರು ದಾಳಿ ನಡೆಸಿತ್ತು.

ಈ ವೇಳೆ ಎರಡು ತಂಡಗಳ ಮಧ್ಯೆ ಕೆಲಹೊತ್ತು ತಲವಾರು ಕಾಳಗ ನಡೆದಿದೆ. ಝೀಯನನ್ನು ತಲವಾರಿನಿಂದ ಕೊಚ್ಚಿ ಹಾಕಲಾಗಿದ್ದು ಆತ ಸ್ಥಳದಲ್ಲೇ ಮೃತಪಟ್ಟರೆ, ಫೈಝಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ತಲವಾರು ದಾಳಿಯಿಂದ ಅನಿಸ್ ಹಾಗೂ ಮುತ್ ಎಂಬವರು ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಝೀಯನೊಂದಿಗೆ ಗುರುತಿಸಿಕೊಂಡಿದ್ದ ಅನೀಸ್, ಮುಸ್ತಾಫ್ ಹಾಗೂ ಫೈಸಲ್ ಮೇಲೂ ದಾಳಿ ನಡೆದಿದ್ದು ಗಂಭೀರ ಸ್ಥಿತಿಯಲ್ಲಿದ್ದಾರೆ.

ರೌಡಿಸಂ ಫೀಲ್ಡಿನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿರುವ ಕಣ್ಣೂರು ಫೈಸಲ್ ನಗರದ ನಿವಾಸಿಯಾಗಿರುವ ನೌಫಲ್ ಮತ್ತು ಝಿಯಾ ಪರಸ್ಪರ ಸ್ನೇಹಿತರಾಗಿದ್ದರು. ಗಾಂಜಾ ವ್ಯವಹಾರದಿಂದಾಗಿ ಇಬ್ಬರ ನಡುವೆ ವೈಷಮ್ಯ ಬೆಳೆಯಲಾರಂಭಿಸಿತ್ತು. ದಿನ ಕಳೆದಂತೆ ಇಬ್ಬರು ಹುಡುಗರನ್ನು ಸೇರಿಸಿ ಗ್ಯಾಂಗ್ ಕಟ್ಟಿಕೊಂಡರು.

ಮಂಗಳೂರು ಬಿ.ಸಿ ರೋಡ್ ಹೆದ್ದಾರಿಯ ಸಮೀಪ ನಡೆಯುತ್ತಿರುವ ಅಕ್ರಮ ಮರಳು ದಂಧೆ ಕೂಡ ಈ ಕೃತ್ಯಕ್ಕೆ ಲಿಂಕ್ ಹೊಂದಿದ್ದು ಪೊಲೀಸ್ ಅಧಿಕಾರಿಗಳು ಅಕ್ರಮ ಮರಳು ಮಾಫಿಯಾದ ಹಿಂದೆ ಬಿದ್ದಿದ್ದಾರೆ.

English summary
Farangipet gangwar killing takes place amidst police check post by killing two has put people in shock. Special police investigation team comprising police officers from both the district police and Mangaluru city commissionerate has been formed to probe the Monday night incident near Farangipet in which two were killed and three suffered serious injuries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X