ಪುತ್ತೂರು ಬಳಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ಕಾರು ಅಪಘಾತ
ಮಂಗಳೂರು, ಮಾರ್ಚ್ 13 : ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರ ಕಾರು ಪುತ್ತೂರಿನ ಬೈಪಾಸ್ ಬಳಿ ಉರ್ಲಾಂಡಿ ಎಂಬಲ್ಲಿ ಸೋಮವಾರ ಅಪಘಾತಕ್ಕೀಡಾಗಿದೆ.
ಓಮ್ನಿ ಕಾರು ಹಾಗೂ ವಿನಯಕುಮಾರ್ ಸೊರಕೆ ಅವರ ಕಾರು ಮುಖಾಮುಖಿ ಡಿಕ್ಕಿ ಹೊಡೆದಿದೆ. ಓಮ್ನಿ ಚಾಲಕ ರವೀಂದ್ರಗೌಡ ಶಾಂತಿಗೋಡು ಮತ್ತು ಸೊರಕೆ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಅಪಘಾತದಲ್ಲಿ ಕಾಪು ಶಾಸಕ ವಿನಯಕುಮಾರ್ ಸೊರಕೆ ಸೇರಿದಂತೆ ಇತರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.












Click it and Unblock the Notifications