Get Updates
Get notified of breaking news, exclusive insights, and must-see stories!

ತೊಕ್ಕೊಟ್ಟು ಮೇಲ್ಸೇತುವೆ ಉದ್ಘಾಟಿಸಿದ ಮೋದಿ, ನಿತಿನ್ ಗಡ್ಕರಿ?!

ಮಂಗಳೂರು, ಡಿಸೆಂಬರ್ 30: ನರೇಂದ್ರ ಮೋದಿ ಹಾಗೂ ನಿತಿನ್ ಗಡ್ಕರಿ ಇಂದು ಮಂಗಳೂರಿನ ತೊಕ್ಕೊಟ್ಟು ಮೇಲ್ಸೆತುವೆಯನ್ನು ಉದ್ಘಾಟಿಸಿದ್ದಾರೆ. ಅರೆ ಇದೇನು ಹೀಗೆ ? ಸುದ್ದಿಯಿಲ್ಲದೇ ಉದ್ಘಾಟನೆ ಎಂದು ಯೋಚಿಸುತ್ತಿದ್ದಿರಾ ? ಈ ದೃಶ್ಯ ಕಂಡುಬಂದದ್ದು ತೊಕ್ಕೊಟ್ಟು ಮೇಲ್ಸೆತುವೆ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ.

ಹೌದು, ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿಯನ್ನು ಈ ವರ್ಷದ ಡಿಸೆಂಬರ್ 30 ರೊಳಗೆ ಪೂರ್ಣಗೊಳಿಸುವುದಾಗಿ ಸಂಸದ ನಳಿನ್ ಕುಮಾರ್ ಕಠೀಲ್ ಈ ಹಿಂದೆ ಹೇಳಿಕೆ ನೀಡಿದ್ದರು. ಆದರೆ ಶೇಖಡ 50 ರಷ್ಟು ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಹೆದ್ದಾರಿ ಪ್ರಾಧಿಕಾರದ ನಿಷ್ಕ್ರಿಯತೆಯನ್ನು ಖಂಡಿಸಿ ಉಳ್ಳಾಲ ವಲಯ ಡಿವೈಎಫ್ಐ ಕಾರ್ಯಕರ್ತರು ಇಂದು ನರೇಂದ್ರ ಮೋದಿ , ನಿತಿನ್ ಗಡ್ಕರಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮುಖವಾಡ ಧರಿಸಿದ ವ್ಯಕ್ತಿಗಳನ್ನು ಮೆರವಣಿಗೆಯಲ್ಲಿ ಕರೆತಂದು ಮೇಲ್ಸೇತುವೆಯ ಅಣುಕು ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಿದ್ದಾರೆ.

DYFI stages mock inaugural protest in Mangaluru

ಈ ಸಂದರ್ಭದಲ್ಲಿ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಅಚ್ಛೇ ದಿನ್ ಕೊಡುತ್ತೇವೆ ಎನ್ನುತ್ತಾ ಅಧಿಕಾರಕ್ಕೆ ಬಂದ ಮೋದಿ ಸರ್ಕಾರಕ್ಕೆ ಇದುವರೆಗೆ ಒಂದು ಅಚ್ಛೇ ಸಡಕ್ ಕೊಡಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.

DYFI stages mock inaugural protest in Mangaluru

ಕೇಂದ್ರ ವಿಫಲತೆಗೆ ಮಂಗಳೂರಿನ ಪಂಪುವೆಲ್ , ತೊಕ್ಕೊಟ್ಟು ರಸ್ತೆಗಳೇ ಉತ್ತಮ ಉದಾಹರಣೆ. ಇನ್ನಾದರೂ ಸಂಸದರು ಸುಳ್ಳು ಹೇಳುವುದು ಬಿಟ್ಟು ಕೆಲಸ ಮಾಡಿ ತೋರಿಸಲಿ ಎಂದು ಕುಟುಕಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+