ಎತ್ತಿನಹೊಳೆ: ರಮನಾಥ ರೈ ವಿರುದ್ಧ ಕಿಡಿಕಾರಿದ ದಿನೇಶ್ ಹೊಳ್ಳ

ಮಂಗಳೂರು, ಡಿಸೆಂಬರ್, 12: ಎತ್ತಿನಹೊಳೆ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಯಾವುದೇ ಆಸಕ್ತಿ ತೋರುತ್ತಿಲ್ಲ ಎಂದು ದೂರಿದ ನೇತ್ರಾವತಿ ನದಿ ಸಂರಕ್ಷಣಾ ಒಕ್ಕೂಟದ ದಿನೇಶ್ ಹೊಳ್ಳ ಅವರು ಡಿಸೆಂಬರ್ 15ರ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಎತ್ತಿನಹೊಳೆ ಯೋಜನೆ ವಿಚಾರವಾಗಿ ಖುದ್ದಾಗಿ ರಮಾನಾಥ್ ರೈ ಅವರ ಕಚೇರಿಗೆ ಹೋಗಿ ಮನವಿ ಸಲ್ಲಿಸಿದ್ದೇವೆ, ಆದರೆ ಇವರಿಂದ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ದಿನೇಶ್ ಹೊಳ್ಳ ಅವರು ಪ್ರತಿಭಟನೆ ಹಾದಿ ಹಿಡಿದಿದ್ದು, ಪ್ರತಿಭಟನೆ ಜಾಥಾ ಬಿಸಿ. ರೋಡ್ ನ ಕೈಕಂಬ ಪೊಳಲಿ ದ್ವಾರದಿಂದ ಹೊರಟು ಬಂಟ್ವಾಳ ತಾಲೂಕು ಕಚೇರಿ ತಲುಪಲಿದೆ ಎಂದರು.[ಎತ್ತಿನಹೊಳೆ ಯೋಜನೆಗೆ ಕರಾವಳಿ ಜನರ ವಿರೋಧವೇಕೆ?]

Dinesh holla decide to take protest against of Mangaluru incharge minister ramanath rai at Mangaluru

ಮಂಗಳೂರು ಎತ್ತಿನಹೊಳೆ ಯೋಜನೆಗಾಗಿ ಶಾಸನಾತ್ಮಕವಾಗಿ ಅರಣ್ಯ ಸಂರಕ್ಷಣಾ ಕಾಯ್ದೆ , ವನ್ಯಜೀವಿ ಸಂರಕ್ಷಣಾ ಕಾಯ್ದೆಗಳ ಪ್ರಕಾರ ಅನುಮತಿ ಪಡೆಯದೆ ಸುಳ್ಳಿನ ಸರಮಾಲೆ ಸೃಷ್ಟಿಸುತ್ತಿರುವ ಸರ್ಕಾರ ಜನರನ್ನು ತಪ್ಪು ದಾರಿಗೆಳೆಯುತ್ತಿದೆ ಎಂದು ನೇತ್ರಾವತಿ ನದಿ ಸಂರಕ್ಷಣಾ ಹೋರಾಟ ವೇದಿಕೆಯ ಪ್ರಮುಖರಾದ ಸಿ ಯತಿರಾಜು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಸರ್ಕಾರ ಎತ್ತಿನ ಹೊಳೆ ಯೋಜನೆಯನ್ನು ಕುಡಿಯುವ ನೀರು ಯೋಜನೆ ಎಂದು ತಪ್ಪಾಗಿ ಬಿಂಬಿಸಿ ಪರಿಸರ ವಿನಾಶ ಪ್ರಕ್ರಿಯೆಗಳಿಂದ ವಿನಾಯಿತಿ ಪಡೆಯುವ ಹುನ್ನಾರ ನಡೆಸುತ್ತಿದೆ. ಆದರೆ, ಇದು 527 ಕಿರು ನೀರಾವರಿ ಕೆರೆಗಳಿಗೆ ತುಂಬಿಸುವ ಯೋಜನೆಯೆಂದು ಇಲಾಖೆ ವರದಿಯೇ ಹೇಳುತ್ತಿದೆ. ನೀರಾವರಿ ನಿಗಮ ನಿರಂತರವಾಗಿ ಪರಿಸರದ ಕಾನೂನುಗಳನ್ನು ಉಲ್ಲಂಘಿಸುತ್ತಾ ನಡೆಯುತ್ತಿರುವ ನಿಗಮವಾಗಿದೆ. ಪರಿಸರ ಅಪರಾಧಗಳನ್ನು ಎಸಗುವ ಅಪರಾಧಿ ನಿಗಮ ಎಂದು ದೂರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+