ಚಿತ್ರಗಳು : ಬೆಳ್ತಂಗಡಿಯಲ್ಲಿ ಹೊತ್ತಿ ಉರಿದ ಡೀಸೆಲ್ ಟ್ಯಾಂಕರ್
ಮಂಗಳೂರು, ಜೂ.25 : ಡೀಸೆಲ್ ಸಾಗಿಸುತ್ತಿದ್ದ ಲಾರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೆಂಕಿಗೆ ಆಹುತಿಯಾದ ಘಟನೆ ಬೆಳ್ತಗಂಡಿಯ ಲಾೖಲಾ ಸೇತುವೆ ಸಮೀಪ ನಡೆದಿದೆ. ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.
ಬುಧವಾರ ಸಂಜೆ ಲ್ಯಾಲಾ ಸೇತುವೆ ಸಮೀಪ ಡೀಸೆಲ್ ಟ್ಯಾಂಕರ್ ಟೈರ್ ಸ್ಫೋಟಗೊಂಡಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಟ್ಯಾಂಕರ್ ಚಾಲಕ ಹಾಗೂ ನಿರ್ವಾಹಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಟ್ಯಾಂಕರ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ನಂತರ ಬೆಂಕಿ ಹೊತ್ತಿಕೊಂಡಿತು. ಬೆಂಕಿಯ ಕೆನ್ನಾಲಿಗೆಗೆ ಟ್ಯಾಂಕರ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಬೆಳ್ತಂಗಡಿ ಹಾಗೂ ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಹತೋಟಿಗೆ ತಂದರು.
ಟ್ಯಾಂಕರ್‌ನಲ್ಲಿ ಸುಮಾರು 8,000 ಲೀ. ಡೀಸೆಲ್ ಮತ್ತು 4,000 ಲೀಟರ್ ಪೆಟ್ರೋಲ್ ಇತ್ತು. ಈ ಅಪಘಾತದಿಂದಾಗಿ ಬೆಳ್ತಂಗಡಿ-ಧರ್ಮಸ್ಥಳ ರಸ್ತೆ ಸುಮಾರು ಮೂರು ಗಂಟೆಗಳ ಕಾಲ ಬಂದ್ ಆಗಿತ್ತು. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜನರ ಫೋಟೋ ವ್ಯಾಮೋಹ : ಟ್ಯಾಂಕರ್ ಹೊತ್ತಿ ಉರಿಯುತ್ತಿದ್ದರೆ ದಟ್ಟ ಹೊಗೆ ಸುತ್ತಲೂ ಆವರಿಸಿತ್ತು. ಜನರು ಫೋಟೋ ತೆಗೆಯುವ ಪ್ರಯತ್ನದಲ್ಲಿ ಅಗ್ನಿ ಶಾಮಕ ದಳದ ಕಾರ್ಯಾಚರಣೆಗೆ ಅಡ್ಡಿ ಪಡಿಸುತ್ತಿದ್ದರು. ಸ್ಥಳದಲ್ಲಿ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಉಜಿರೆಯ ಪಿ.ಸಿ. ಪೈ ಪೆಟ್ರೋಲ್ ಬಂಕ್‌ಗೆ ಈ ಟ್ಯಾಂಕರ್ ಡೀಸೆಲ್ ಮತ್ತು ಪೆಟ್ರೋಲ್ ತುಂಬಿಕೊಂಡು ಹೋಗುತ್ತಿತ್ತು. ಟ್ಯಾಂಕರ್ ಪಲ್ಪಿಯಾಗುತ್ತಿದ್ದಂತೆ ಚಾಲಕ ಸುರೇಶ್ ಮತ್ತು ನಿರ್ವಾಹಕ ಎದುರಿನ ಗಾಜನ್ನು ಒಡೆದು ಹೊರಬಂದರು. ಸಮೀಪದಲ್ಲಿ ಬರುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಚಾಲಕ ಘಟನೆ ಬಗ್ಗೆ ಮೊದಲು ಪೊಲೀಸರಿಗೆ ಮಾಹಿತಿ ನೀಡಿದರು.













Click it and Unblock the Notifications