ಮಂಗಳೂರು ಸ್ಮಾರ್ಟ್ ಬಸ್ ಬೇ ನಿರ್ಮಾಣದ ಕಾಮಗಾರಿ ತಡೆಹಿಡಿಯಲು ಆದೇಶಿಸಿದ ಡಿಸಿ

ಮಂಗಳೂರು, ನವೆಂಬರ್. 26: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆ ದಾರಿ ತಪ್ಪುತ್ತಿದೆಯೇ? ಇದು ಹಣ ಮಾಡುವ ಯೋಜನೆ ಆಗುತ್ತಿದೆಯೇ? ಇಂತಹ ಅನುಮಾನ ಇದೀಗ ಕಾಡಲಾರಂಭಿಸಿದೆ. ಯಾಕೆಂದರೆ ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರು ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಸ್ಮಾರ್ಟ್ ಬಸ್ ಸ್ಟ್ಯಾಂಡ್ ಗಳ ನಿರ್ಮಾಣಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ತಡೆ ನೀಡಿದ್ದಾರೆ.

ಮಂಗಳೂರು ಸ್ಮಾರ್ಟ್ ಸಿಟಿ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ಬಸ್ ಬೇ ಗಳು ಮಂಗಳೂರಿನ ಹವಮಾನಕ್ಕೆ ಅನುಗುಣವಾಗಿಲ್ಲ ಹಾಗೂ ಅವೈಜ್ಞಾನಿಕವಾಗಿವೆ ಎಂಬ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಸ್ಮಾರ್ಟ್ ಬಸ್ ಬೇ ನಿರ್ಮಾಣದ ಕಾಮಗಾರಿಯನ್ನು ತಡೆಹಿಡಿಯಬೇಕೆಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಮಂಗಳೂರು ನಗರದಲ್ಲಿ 27 ಸ್ಮಾರ್ಟ್ ಬಸ್ ಬೇ ಗಳನ್ನು ನಿರ್ಮಾಣ ಮಾಡಲು ಬೆಂಗಳೂರಿನ ಖಾಸಗಿ ಕಂಪೆನಿಗೆ ಟೆಂಡರ್ ನೀಡಲಾಗಿದೆ. ಆದರೆ ಈ ಸಂಸ್ಥೆ ನಿರ್ಮಿಸಲು ಮುಂದಾಗಿರುವ ಬಸ್ ಬೇ ಗಳು ಕರಾವಳಿಯಲ್ಲಿ ಅಧಿಕವಾಗಿರುವ ಬಿಸಿಲು ಮತ್ತು ಮಳೆಯಿಂದ ಜನರಿಗೆ ರಕ್ಷಣೆ ನೀಡಲಾರದು ಎಂದು ವಿಮರ್ಶಿಸಲಾಗಿದೆ.

DC order to stop work of smart bus stands in Mangaluru

ಅಲ್ಲದೇ ಅತಿ ದುಬಾರಿಯಾಗಿರುವ ಈ ಸ್ಮಾರ್ಟ್ ಬಸ್ ಬೇ ಗಳು ಕೇವಲ ಹಣ ಮಾಡುವ ಯೋಜನೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಬಸ್ ಬೇ ನಿರ್ಮಾಣದ ಕಾಮಗಾರಿ ತಡೆಗೆ ಆದೇಶಿಸಿದ್ದಾರೆ.

ಮಾದರಿಯಾಗಿ ಮೂರು ಬಸ್ ಬೇಗಳನ್ನು ಮಾತ್ರ ನಿರ್ಮಾಣ ಮಾಡಿ ಅದರ ಸಾಧಕ - ಭಾಧಕಗಳನ್ನು ನೋಡಿ ಮುಂದುವರೆಯುವಂತೆ ಈ ಹಿಂದೆ ಸೂಚಿಸಲಾಗಿತ್ತು.

DC order to stop work of smart bus stands in Mangaluru

ಈಗಾಗಲೇ ನಗರದ ಕಾವೂರು, ಮಣ್ಣಗುಡ್ಡೆ, ಕದ್ರಿ ಹಿಲ್ಸ್ ಹೀಗೆ ಅನೇಕ ಕಡೆ ಅತೀ ದುಬಾರಿಯಾದ ಇಂತಹ ಸ್ಮಾರ್ಟ್ ಬಸ್ ಬೇ ಗಳನ್ನು ನಿರ್ಮಾಣ ಮಾಡಿ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಲಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+