ಉಪ್ಪಿನಂಗಡಿಯಲ್ಲಿ ದಲಿತ ಯುವತಿಯ ಮೇಲೆ ಗ್ಯಾಂಗ್ ರೇಪ್
ಮಂಗಳೂರು, ಫೆಬ್ರವರಿ 17: ದಲಿತ ಯುವತಿಯ ಮೇಲೆ ಯುವಕರಿಬ್ಬರು ಅತ್ಯಾಚಾರ ನಡೆಸಿದ ಪೈಶಾಚಿಕ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ,
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಈ ಘಟನೆ ನಡೆದಿದೆ. ಗುರುವಾರ ತಡ ರಾತ್ರಿ ಈ ಘಟನೆ ನಡೆದಿದ್ದು ದಲಿತ ಯುವತಿಯ ಮೇಲೆ ಕಾಮುಕರು ನೆಲ್ಯಾಡಿ ಎಂಬಲ್ಲಿ ಗ್ಯಾಂಗ್ ರೇಪ್ ಮಾಡಿದ್ದಾರೆ ಎಂದು ಹೇಳಲಾಗಿದೆ.
ಗುರುವಾರ ರಾತ್ರಿ ಬೆಟ್ಟಂಪಾಡಿಯ ಯುವತಿಯೋರ್ವಳನ್ನು ಕರೆತಂದು ನೆಲ್ಯಾಡಿ ಬಳಿಯ ಖಾಲಿ ಮನೆಯೊಂದರಲ್ಲಿ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ತಡರಾತ್ರಿ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಯುವತಿಯನ್ನು ಬಿಟ್ಟು ಪರಾರಿಯಾಗಿದ್ದಾರೆ.

ಘಟನೆಯ ಬಗ್ಗೆ ಸಂತ್ರಸ್ಥ ಯುವತಿ ಧನಂಜಯ ಹಾಗೂ ಇನ್ನೋರ್ವ ಯುವಕನ ವಿರುದ್ಧ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಿನಂಗಡಿ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.












Click it and Unblock the Notifications