ಉಜಿರೆಯಲ್ಲಿ ಉತ್ತರಕಾಂಡ, ರಾಜ್ ಲೀಲಾ ವಿನೋದ ಜನಪ್ರಿಯತೆ
21ನೇ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯ ಪುಸ್ತಕ ಮಳಿಗೆಗಳಲ್ಲಿ ವ್ಯಕ್ತಿತ್ವ ವಿಕಸನ, ಅಡುಗೆಗೆ ಸಂಬಂಧಿಸಿದ ಪುಸ್ತಕಗಳು, ಕಾದಂಬರಿ, ಕಥಾ ಪುಸ್ತಕಗಳ ಖರೀದಿ ಭರಾಟೆಯಿಂದ ನಡೆದಿದೆ.
21ನೇ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯ ಪುಸ್ತಕ ಮಳಿಗೆಗಳಲ್ಲಿ ವ್ಯಕ್ತಿತ್ವ ವಿಕಸನ, ಅಡುಗೆಗೆ ಸಂಬಂಧಿಸಿದ ಪುಸ್ತಕಗಳು, ಕಾದಂಬರಿ, ಕಥಾ ಪುಸ್ತಕಗಳ ಖರೀದಿ ಭರಾಟೆಯಿಂದ ನಡೆಯಿತು.
ಇಂದಿನ ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ಪುಸ್ತಕಗಳನ್ನು ಕೊ0ಡು ಓದುವ ಆಸಕ್ತರು ಕಡಿಮೆ ಆಗುತ್ತಿದ್ದಾರೆ ಎಂಬ ಮಾತನ್ನು ಸುಳ್ಳಾಗಿಸುವಂತೆ ಹಲವರು ಕೃತಿಗಳನ್ನು ಖರೀದಿಸುತ್ತಿರುವುದು ಸಮ್ಮೇಳನದ ವಿಶೇಷತೆಯಾಗಿದೆ. ಅವರ ಆದ್ಯತೆ ಜನಪ್ರಿಯ ಕಿರುಹೊತ್ತಿಗೆಗಳ ಕಡೆಗಿದೆ.
ಮಕ್ಕಳ ಪುಸ್ತಕಗಳು, ಮಹಿಳೆಯರಿಗೆ ಸಂಬಂಧಿಸಿದ ಪುಸ್ತಕಗಳು, ಎಲ್ಲಾ ಬಗೆಯ ಹಾಡುಗಳ ಪುಸ್ತಕಗಳು, ಜ್ಯೋತಿಷ್ಯ ಪುಸ್ತಕಗಳು, ಅಡಿಗೆ ಪುಸ್ತಕಗಳು ಹೆಚ್ಚು ಮಾರಾಟಗೊಂಡವು.

ಎಸ್. ಎಲ್ ಬೈರಪ್ಪನವರ "ಉತ್ತರಕಾಂಡ", ಮಣಿಕಾಂತ್‍ನವರ "ಮನಸ್ಸು ಮಾತಾಡಿತು" "ಭಾವ ತೀರಯಾನ" "ಅಮ್ಮ ಹೇಳಿದ ಎಂಟು ಸುಳ್ಳುಗಳು" "ಅಪ್ಪ ಅಂದ್ರೆ ಆಕಾಶ", ರವಿ ಬೆಳಗೆರೆಯವರ "ರಾಜ್ ಲೀಲಾ ವಿನೋದ" "ಆತ್ಮ" "ನಕ್ಷತ್ರ ಜಾರಿದಾಗ" "ಕಾಳಿಂಗ" ಕೃತಿಗಳನ್ನು ಕುತೂಹಲದಿಂದ ಹಲವರು ಗಮನಿಸುತ್ತಿದ್ದಾರೆ. ನಂತರ ಖರೀದಿಸುತ್ತಿದ್ದಾರೆ.
ಜನಸಾಮಾನ್ಯರಿಗೆ ಪುಸ್ತಕಗಳನ್ನು ತೆಗೆದುಕೊಳ್ಳುವ ಮನಸ್ಸು ಇದ್ದರೂ ಖರೀದಿ ಬೆಲೆಯು ಜನರನ್ನು ಹಿಂದೇಟು ಹಾಕಿಸುವಂತಹ ಪರಿಸ್ಥಿತಿ ಉಂಟಾಗುತ್ತಿದೆ. ಎಸ್. ಎಲ್ ಬೈರಪ್ಪನವರ "ಉತ್ತರಕಾಂಡ" ಅಧಿಕ ಬೆಲೆಯುಳ್ಳದ್ದು. ಇಷ್ಟವಿದ್ದರೂ ಕೆಲವರು ಈ ಕಾರಣಕ್ಕಾಗಿ ಖರೀದಿಗೆ ಹಿಂದೇಟು ಹಾಕಿದರು ಎಂದು ವೆಂಕಟೇಶ ಪುಸ್ತಕ ಭಂಡಾರದ ಚರಣ್ ತಿಳಿಸಿದರು.

ಪ್ರತಿಯೊಂದು ಪುಸ್ತಕ ಮಳಿಗೆಗಳಲ್ಲಿ ಜನಪ್ರಿಯ ಪುಸ್ತಕಗಳಾದ ಪಂಡಿತ ಜಿ.ವಿ ಶರ್ಮರವರ "ಆರ್ಷಧರ್ಮ" "ಸಂಪ್ರದಾಯ" "ದೈವದರ್ಶನ" "ಪಂಚಮವೇದ ಮಹಾಭಾರತ", ಡಾ.ಬಿ.ಆರ್. ಸುಹಾಸ್‍ರವರ "ಚಾಣಕ್ಯ ನೀತಿ ದರ್ಶನ" "ಪ್ರಾಚೀನ ಭಾರತ ಪ್ರೇಮ ಕಥೆಗಳು" "ಪ್ರಶ್ನೋತ್ತರ ಸುಭಾಷಿತಗಳು" "ಭೋಜ ಪ್ರಬಂಧ", ಎಸ್ ಜಗನ್ನಾಥರಾವ್ ಬಹುಳೆರವರ
"ಡಾ. ರಾಜ್‍ಕುಮಾರ್ ಸಿನಿಮಾ-ಬಹುಕು-ಸಾಧನೆ "ಅಣ್ಣಾವ್ರ ಅಮರ ಗೀತೆಗಳು", ಹೊ.ಶಾ ಅರುಣ್‍ರವರ "ಯೋಗ ಪರಿಚಯ" "ನಿತ್ಯ ಜೀವನದಲ್ಲಿ ಯೋಗ", "ತರವೇಹಾರಿ ಅಡುಗೆಗಳು" "ಗೃಹಣಿಯರ ಉಪಯುಕ್ತ ಸಲಹೆಗಳು", ಗಾದೆ, ಹಾಸ್ಯ, ಕ್ವಿಜ್ ಪುಸ್ತಕಗಳು ಹೀಗೆ ಹಲವಾರು ಪುಸ್ತಕಗಳನ್ನು ಖರೀದಿಸಲು ಜನರು ಆಸಕ್ತಿ ತೋರುತ್ತಿದ್ದಾರೆ.
ಹಲವಾರು ಪುಸ್ತಕಗಳು ಕೇವಲ ಬರಹಗಾರರ ಅಭಿಮಾನಿಗಳ ಅಭಿರುಚಿಗೆ ತಕ್ಕಂತೆ ಮಾರಾಟವಾಗುತ್ತವೆ. ಕೆಲವು ಓದುಗರು ಮಾತ್ರ ಬರವಣಿಗೆಯನ್ನು ಗಮನಿಸಿ ಮುನ್ನುಡಿ ಹಿನ್ನುಡಿಗಳನ್ನು ಓದಿ ಖರೀದಿಸುತ್ತಿರುವುದು ಕಂಡುಬಂತು.
"ಉಜಿರೆ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳನ್ನು ಹಾಕಿರುವುದು ಹೊಸ ಅನುಭವವನ್ನು ತಂದಿದೆ. ಇಲ್ಲಿನ ಜನರಿಗೆ ಓದಿನ ಅಭಿರುಚಿ ಇದೆ. ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕಗಳನ್ನು ಖರೀಸುತ್ತಿದ್ದಾರೆ. ಜೊತೆಗೆ ಪುಸ್ತಕಗಳನ್ನು ಮಕ್ಕಳಿಗೆ ಕೊಡಿಸುವಂತಹ ಅಭಿರುಚಿಯ ತಂದೆ ತಾಯಿಯರೂ ಇದ್ದಾರೆ. ಮಕ್ಕಳು ತಮ್ಮ ಜ್ಞಾನ ಹಾಗೂ ವಯಸ್ಸಿನ ಮಿತಿಗೆ ಮೀರಿದ ಪುಸ್ತಕಗಳನ್ನು ಖರೀದಿಸುತ್ತಿದ್ದಾರೆ ಎಂದವರು ಕುಂದಾಪುರದ ಜಿ.ವಿ.ಎನ್ ಬುಕ್ ಮಾರ್ಕ್‍ನ ನವೀನ್.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications