ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿಯದ್ದು ಆರ್‌ಎಸ್‌ಎಸ್ ಹಿನ್ನಲೆ; ದಿನೇಶ್ ಅಮೀನ್‌ಮಟ್ಟು ಟೀಕೆ

ಮಂಗಳೂರು, ನವೆಂಬರ್ 25: ದಕ್ಷಿಣ ಕನ್ನಡ ಸ್ಥಳೀಯಾಡಳಿತ ಕ್ಷೇತ್ರದಿಂದ ವಿಧಾನ ಪರಿಷತ್ ಸ್ಥಾನಕ್ಕೆ ಕಾಂಗ್ರೆಸ್ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಮಂಗಳೂರಿನ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮಂಜುನಾಥ ಭಂಡಾರಿಯವರಿಗೆ ಕಾಂಗ್ರೆಸ್ ಈ ಬಾರಿ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಯಾಗಿ ಟಿಕೆಟ್ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನ ಹಲವು ಮುಖಂಡರು ಟಿಕೆಟ್‌ಗಾಗಿ ಲಾಬಿ ನಡೆಸಿದರೂ, ಯಾವುದೇ ಲಾಬಿಗೆ ಬಗ್ಗದ ಕಾಂಗ್ರೆಸ್ ಹೈಕಮಾಂಡ್ ಮಂಜುನಾಥ ಭಂಡಾರಿಯವರಿಗೆ ಮಣೆ ಹಾಕಿದೆ.

ಮಂಜುನಾಥ ಭಂಡಾರಿ ಅಚ್ಚರಿಯ ಆಯ್ಕೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ಗೂ ಆಶ್ಚರ್ಯ ತಂದಿದೆ. ಒಮ್ಮೆಯೂ ಕಾಂಗ್ರೆಸ್ ಕಚೇರಿ ಮೆಟ್ಟಿಲು ಹತ್ತದ ಮಂಜುನಾಥ ಭಂಡಾರಿಗೆ ಏಕಾಏಕಿ ಪರಿಷತ್ ಟಿಕೆಟ್ ನೀಡಿರುವುದು ಪಕ್ಷದ ಒಳಗೂ ಇರುಸು- ಮುರುಸು ತಂದಿದೆ.

 Dakshina Kannada Congress Candidate Manjunath Bhandari Came From RSS Background Alleges Dinesh Aminmattu

ರಾಜ್ಯ ಕಾಂಗ್ರೆಸ್ ಮುಖಂಡರು ಮಂಜುನಾಥ ಭಂಡಾರಿಗೂ ಮೊದಲು ದಕ್ಷಿಣ ಕನ್ನಡ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್‌ಗೆ ಟಿಕೆಟ್ ನೀಡುವುದಾಗಿ ಹೇಳಿತ್ತು. ಬೆಂಗಳೂರಿನಲ್ಲಿ ಡಾ.ಎಂ.ಎನ್. ರಾಜೇಂದ್ರ ಕುಮಾರ್‌ರನ್ನು ಭೇಟಿಯಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಕೇಳಿಕೊಂಡಿದ್ದರು.

ಕಾಂಗ್ರೆಸ್‌ನಿಂದ ರಾಜೇಂದ್ರ ಕುಮಾರ್ ಸ್ಪರ್ಧೆ ಖಚಿತ ಅಂತಾ ಅಧಿಕೃತವಾಗಿ ಘೋಷಣೆಯಾಗುವಷ್ಟರಲ್ಲಿ, ರಾಜೇಂದ್ರ ಕುಮಾರ್ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು. ಪಕ್ಷಾತೀತವಾಗಿ ಇರುವುದಾಗಿ ಹೇಳಿ, ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ಕೈ ಬಿಟ್ಟಿದ್ದರು.

ಆ ಬಳಿಕ ಕಾಂಗ್ರೆಸ್ ಉದ್ಯಮಿ ಮಂಜುನಾಥ್ ಭಂಡಾರಿಗೆ ಟಿಕೆಟ್ ನೀಡಿತ್ತು. ಮಂಜುನಾಥ್ ಭಂಡಾರಿ ಆಯ್ಕೆಗೆ ಕಾಂಗ್ರೆಸ್‌ನಲ್ಲಿ ಒಳಗೊಳಗೆ ತೀವ್ರ ಅಪಸ್ವರ ಕೇಳಿಬಂದಿದೆ. ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು, ಫೇಸ್‌ಬುಕ್‌ನಲ್ಲಿ ಮಂಜುನಾಥ ಭಂಡಾರಿಯವರು ಆರ್‌ಎಸ್‌ಎಸ್ ಹಿನ್ನಲೆಯಿಂದ ಬಂದವರು ಎಂದು ಪರೋಕ್ಷವಾಗಿ ತಿವಿದಿದ್ದಾರೆ.

 Dakshina Kannada Congress Candidate Manjunath Bhandari Came From RSS Background Alleges Dinesh Aminmattu

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ದಿನೇಶ್ ಅಮೀನ್‌ಮಟ್ಟು, "ಕರಾವಳಿಯ ಕೋಮುವಾದದ ವಿರುದ್ಧ ಕಾಂಗ್ರೆಸ್ ಪಕ್ಷ ನಡೆಸಲಿರುವ ನಿರ್ಣಾಯಕ ಹೋರಾಟದ ನೇತೃತ್ವ ವಹಿಸಲು ವಿಧಾನ ಪರಿಷತ್ ಸದಸ್ಯರಾಗಿ ಹೊಸ ಸೇನಾಧಿಪತಿ ಆಗಮಿಸಲಿದ್ದಾರೆ. ಅವರ ಹೆಸರು ಮಂಜುನಾಥ ಭಂಡಾರಿ."

"ತಮ್ಮ ಕಾಲೇಜಿನಲ್ಲಿಯೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿ, ಸಂಘ ಪರಿವಾರದ ಅಂತರಂಗವನ್ನು ಚೆನ್ನಾಗಿ ಅರಿತಿರುವ ಕಾರಣದಿಂದಾಗಿ ಅದರ ವಿರುದ್ಧ ಹೋರಾಟಕ್ಕೆ ಇವರೇ ಸರಿ ಎಂದು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆಯಂತೆ,'' ಎಂದು ಪೋಸ್ಟ್ ಮಾಡಿದ್ದಾರೆ.

ಆದರೆ ಈ ವಿಚಾರವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಅಲ್ಲಗಳೆದಿದ್ದಾರೆ. ಈ ಬಗ್ಗೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, "ಮಂಜುನಾಥ ಭಂಡಾರಿ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಮಂಜುನಾಥ ಭಂಡಾರಿ ಆರ್‌ಎಸ್‌ಎಸ್ ಹಿನ್ನೆಲೆಯವರು ಅಲ್ಲ. ಆರಂಭದಿಂದಲೂ ಎನ್ಎಸ್‌ಯುಐ ಕಾರ್ಯಕರ್ತರಾಗಿ ಕೆಲಸ ಮಾಡಿದ್ದಾರೆ. ಯೂತ್ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಇವೆಲ್ಲಾ ಕೇವಲ ಊಹಾಪೋಹಗಳು," ಎಂದು ಸ್ಪಷ್ಟನೆ ನೀಡಿದ್ದಾರೆ.

"ನಾನು ಆರ್‌ಎಸ್‌ಎಸ್‌ನ್ನು ತಾಲಿಬಾನ್ ಜೊತೆ ಹೊಲಿಸಿದ್ದೆ ನಿಜ. ಆದರೆ ಎಲ್ಲಾ ವಿಷಯಗಳಲ್ಲೂ ತಾಲಿಬಾನ್ ಎಂದು ಹೋಲಿಕೆ ಮಾಡಿರಲಿಲ್ಲ. ಕೆಲವೊಂದು ವಿಚಾರಗಳಲ್ಲಿ ತಾಲಿಬಾನ್ ಜತೆ ಹೋಲಿಕೆ ಮಾಡಿದ್ದೆ. ದೇಶದ ಬೆಳವಣಿಗೆಗೆ ಆರ್‌ಎಸ್‌ಸ್ ಕೊಡುಗೆ ಏನು? ಸ್ವತಂತ್ರ ಪೂರ್ವದಲ್ಲಿ ದೇಶಕ್ಕೆ ಆರ್‌ಎಸ್‌ಸ್ ಕೊಡುಗೆ ಏನು? ಸ್ವಾತಂತ್ರ್ಯ ಬಂದ ನಂತರ ದೇಶದ ಆರ್ಥಿಕ ಬೆಳವಣಿಗೆಗೆ ಅವರ ಕೊಡುಗೆ ಏನು? ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಆರ್‌ಎಸ್‌ಸ್‌ಗೆ ನಂಬಿಕೆ ಇಲ್ಲ. ಆರ್‌ಎಸ್‌ಸ್‌ನವರು ಮನುವಾದ, ಶ್ರೇಣೀಕೃತ ಸಮಾಜದ ಪ್ರತಿಪಾದಕರು," ಎಂದು ಟೀಕೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+