ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶೇಷ ಲೇಖನ; ಗೇರು ತೋಟದ ಪಾಂಡವರ ಗುಹೆಯ ರಹಸ್ಯ ಬಹಿರಂಗ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 28; ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ರಾಮಕುಂಜದಲ್ಲಿ ಪಾಂಡವರ ಗುಹೆ ಅಂತಾನೇ ಸ್ಥಳೀಯ ಹತ್ತೂರಿನ ಜನ ನಂಬಿದ್ದ ಪಾಂಡವರ ಗುಹೆಯ ರಹಸ್ಯವನ್ನು ಅಧ್ಯಯನ ಕಾರರು ಪತ್ತೆ ಹಚ್ಚಿದ್ದಾರೆ. ಕುಂಡಾಜೆ ಸಮೀಪಯ ಸರ್ಕಾರಿ ಗೇರುಬೀಜ ತೋಟದಲ್ಲಿ ಕಳೆದ ನೂರಾರು ವರ್ಷಗಳಿಂದ ಪಾಂಡವರ ಗುಹೆ ಎಂದೇ ಗುಹೆ ಖ್ಯಾತವಾಗಿತ್ತು.

ಗುಹೆಯ ರಹಸ್ಯ ಈಗ ಬಯಲಾಗಿದೆ. ಈ ಗುಹೆ ಪಾಂಡವರ ಗುಹೆಯಲ್ಲ, ಶಿಲಾಯುಗದ ಅಪರೂಪದಲ್ಲೇ ಅಪರೂಪದ ಸಮಾಧಿ ಎಂಬುವುದನ್ನು ಅಧ್ಯಯನಕಾರರು ಸ್ಪಷ್ಟಪಡಿಸಿದ್ದಾರೆ. ಕುಂಡಾಜೆಯ ಗುಹಾ ಸಮಾಧಿಗಳು ಶಿಲಾಯುಗದದಲ್ಲಿ ರಚಿಸಲಾದ ಸಮಾಧಿಗಳಾಗಿವೆ. ಈ ಸಮಾಧಿ ಬಹು ಅಪರೂಪದ್ದಾಗಿದೆ ಎಂದು ಅಧ್ಯಯನಕಾರರು ಸ್ಪಷ್ಟಪಡಿಸಿದ್ದಾರೆ.

ಉಡುಪಿಯ ಪಣಿಯಾಡಿಯಲ್ಲಿ ಮಧ್ಯ ಶಿಲಾಯುಗಕ್ಕೆ ಸೇರಿದ ಗುಹೆ ಪತ್ತೆಉಡುಪಿಯ ಪಣಿಯಾಡಿಯಲ್ಲಿ ಮಧ್ಯ ಶಿಲಾಯುಗಕ್ಕೆ ಸೇರಿದ ಗುಹೆ ಪತ್ತೆ

ಜನರು ಈ ಗುಹೆಯನ್ನು ಪಾಂಡವರ ಗುಹೆ ಅಂತಾನೇ ನಂಬಿದ್ದರು. ಗುಹೆ ರಹಸ್ಯವನ್ನು ಬಯಲು ಮಾಡಲು ಸ್ಥಳೀಯ ಇಂಜಿನಿಯರ್ ನಿಶ್ಚಿತ್ ಗೋಳಿತ್ತಡಿ ಎಂಬುವವರು ಉಡುಪಿಯ ಶಿರ್ವದ ಮುಲ್ಕಿ ಸುಂದರರಾಮ್ ಶೆಟ್ಟಿ ಕಾಲೇಜಿನ ಅಧ್ಯಯನಕಾರ ಪ್ರೊ. ಟಿ. ಮುರುಗೇಶಿ ತಂಡವನ್ನು ಕೇಳಿಕೊಂಡಿದ್ದರು.

ಥಾಯ್ ಗುಹೆ ರಕ್ಷಣಾ ಕಾರ್ಯಾಚರಣೆಗೆ ನೆರವಾಗಿದ್ದ ಭಾರತದ ಕಂಪೆನಿ ಥಾಯ್ ಗುಹೆ ರಕ್ಷಣಾ ಕಾರ್ಯಾಚರಣೆಗೆ ನೆರವಾಗಿದ್ದ ಭಾರತದ ಕಂಪೆನಿ

ಈ ಹಿನ್ನಲೆಯಲ್ಲಿ ಅಧ್ಯಯನ ಆರಂಭಿಸಿದ ಅಧ್ಯಯನಕಾರರ ತಂಡ ಗುಹೆಯ ಬಗ್ಗೆ ಅದ್ಭುತ ಮಾಹಿತಿ ಕಲೆ ಹಾಕಿದ್ದಾರೆ. ಈ‌ ಗುಹಾ ಸಮಾಧಿಗಳು ಶಿಲಾಯುಗ ಕಾಲದಲ್ಲಿ ರಚಿಸಲಾದ ಸಮಾಧಿಗಳಾಗಿದ್ದು, ಸಮಾಧಿಯ ಮಧ್ಯಭಾಗದಲ್ಲಿ ಸುಮಾರು 2-3 ಮೂರು ಅಡಿ ವ್ಯಾಸದ ರಂಧ್ರವನ್ನು ಸುಮಾರು ಒಂದು ಮೀಟರ್ ಆಳದವರೆಗೆ ಸಿಲಿಂಡರ್‌ ಆಕಾರದಲ್ಲಿ ಕೆಂಪು ಮುರಕಲ್ಲಿನ ಭೂಪಾತಾಳಿಯಲ್ಲಿ ಕೊರೆಯಲಾಗಿದೆ.

 2 ಗ್ರಾಮಸ್ಥರ ನಡುವೆ ಬೆಂಕಿಯ ಭೀಕರ ಕಾದಾಟ; ಇದು ಕಟೀಲು ಜಾತ್ರೆಯ 'ತೂಟೆದಾರ'ದ ವಿಶೇಷ 2 ಗ್ರಾಮಸ್ಥರ ನಡುವೆ ಬೆಂಕಿಯ ಭೀಕರ ಕಾದಾಟ; ಇದು ಕಟೀಲು ಜಾತ್ರೆಯ 'ತೂಟೆದಾರ'ದ ವಿಶೇಷ

ಬೌದ್ಧ ಧರ್ಮದ ಸೂಪಗಳ ರಚನೆ

ಬೌದ್ಧ ಧರ್ಮದ ಸೂಪಗಳ ರಚನೆ

ಗುಹೆಯಲ್ಲಿ ಕೆಳಭಾಗದಲ್ಲಿ‌ಅರ್ಥ ಗೋಲಾಕೃತಿಯ ಗುಹೆಯನ್ನು ಅಗತ್ಯವಾದ ಆಳ ಹಾಗೂ ಆಗಲ ರಚಿಸಲಾಗಿದ್ದು, ಇದು ಬಹುತೇಕ ಸುತ್ತಳತೆಯೊಂದಿಗೆ‌ ಬೌದ್ಧ ಧರ್ಮದ ಸೂಪಗಳ ರಚನೆ ಹೋಲುತ್ತದೆ ಎಂದು ಅಧ್ಯಯನಕಾರರು ಹೇಳಿದ್ದಾರೆ. ಪಾಂಡವರ ಗುಹೆ ಎನ್ನಲಾದ ಈ ಗುಹೆಯ ವೃತ್ತದ ವಿಸ್ತಾರ ಸುಮಾರು 7 ಅಡಿಯಾಗಿದ್ದು, ಒಳಗಿನ ಗುಹೆಯೂ ಏಳು ಅಡಿ ವಿಸ್ತಾರವಾಗಿದೆ. ಅಗ್ನಿಕುಂಡವನ್ನು ಹೋಲುವ ಒಂದು ಗುಂಡಿ ಕಂಡು ಬಂದಿದೆ.

ಗುಹೆಯೊಳಗೆ ಏನಿದೆ?

ಗುಹೆಯೊಳಗೆ ಏನಿದೆ?

ಗುಹೆಯ ಒಳಭಾಗದಲ್ಲಿ, ಮಧ್ಯಭಾಗದಲ್ಲಿಅತ್ಯಲ್ಪ ಪ್ರಮಾಣದ ಕೆಂಪು, ಕಪ್ಪು ಮತ್ತು ಕೆಂಪು ಬಣ್ಣದ ಮಡಕೆಯ ಅವಶೇಷಗಳನ್ನು ದೋಚಿರುವಂತೆ ಗೋಚರಿಸುತ್ತಿದೆ ಅಂತಾ ಅಧ್ಯಯನಕಾರರು ತಿಳಿಸಿದ್ದಾರೆ. "ಈ ಗುಹೆಯನ್ನು ಸ್ಥಳೀಯರು ಪಾಂಡವರ ಗುಹೆ ಎಂದು ಹೇಳಿಕೊಳ್ಳುತ್ತಿದ್ದರು.‌ ಸಂಶೋಧನೆ ಬಳಿಕ ಇದೊಂದು ಬಹಳ ಅಪರೂಪದ ಸಮಾಧಿ ಎಂಬುದು ತಿಳಿದುಬಂದಿದೆ. ಈ ಭಾಗದಲ್ಲಿ ಇನ್ನಷ್ಟೂ ಸಮಾಧಿಗಳು ಇರಬಹುದು" ಎಂದು ಪ್ರೊ. ಟಿ. ಮುರುಗೇಶಿ ಅಭಿಪ್ರಾಯಪಟ್ಟಿದ್ದಾರೆ.

ಜನರು ಪ್ರಾರ್ಥನೆ ಮಾಡುತ್ತಿದ್ದರು

ಜನರು ಪ್ರಾರ್ಥನೆ ಮಾಡುತ್ತಿದ್ದರು

ಈ ಗುಹೆಯ ಹಿಂದೆ ಆಸಕ್ತಿದಾಯಕ ಕಥೆಯೂ ಇದೆ. ಮದುವೆಯ ಸಂದರ್ಭದಲ್ಲಿ ಇಲ್ಲಿನ ಜನರು ಗುಹೆಯ‌ ಸಮೀಪಕ್ಕೆ ಬಂದು ಭಕ್ತಿಯಿಂದ ಪ್ರಾರ್ಥಿಸಿ ಹೋಗುತ್ತಿದ್ದರು. ಪ್ರಾರ್ಥನೆ ಮಾಡಿದ ಮರು ದಿನ ಇಲ್ಲಿ ಮದುಮಕ್ಕಳ ಶೃಂಗಾರಕ್ಕೆ ಬೇಕಾದ ಆಭರಣಗಳು ಇರುತ್ತಿದ್ದವು. ಮದುವೆ ಮುಗಿದ ಬಳಿಕ ಎಲ್ಲಾ ಆಭರಣವನ್ನು ಮತ್ತೆ ಅಲ್ಲಿಯೇ ಇಡಬೇಕಿತ್ತು.‌ ಇದನ್ನು ಇಲ್ಲಿನ ಜನರು ಬಹು ಸಮಯದಿಂದ ಚಾಚೂ ತಪ್ಪದೇ ಪಾಲಿಸುತ್ತಿದ್ದರು.

ಮೂಗುತಿಯನ್ನು ನೀಡಲಿಲ್ಲ

ಮೂಗುತಿಯನ್ನು ನೀಡಲಿಲ್ಲ

ಗುಹೆಯ ಮುಂದೆ ಒಮ್ಮೆ‌ ಪ್ರಾರ್ಥಿಸಿದವರು ಆಭರಣ ಪಡೆದುಕೊಂಡವರು ಹಿಂತಿರುಗಿಸುವ ವೇಳೆ ಮೂಗುತ್ತಿಯನ್ನು ತಮ್ಮಲ್ಲೇ‌ ಇರಿಸಿಕೊಂಡಿದ್ದರು. ಆ ಬಳಿಕ ಇಲ್ಲಿಎಷ್ಟೇ ಪ್ರಾರ್ಥಿಸಿದರೂ ಯಾರಿಗೂ ಆಭರಣ ಸಿಗಲಿಲ್ಲ ಎನ್ನುವ ಪ್ರತೀತಿ ಇದೆ. ಒಟ್ಟಾರೆ ಗುಹೆಯ ನಿಗೂಢ ರಹಸ್ಯ ಈಗ ಪತ್ತೆಯಾಗಿದ್ದು, ಸ್ಥಳೀಯರ ಕುತೂಹಲಕ್ಕೆ ಸಹ ತೆರೆಬಿದ್ದಿದೆ.

Recommended Video

ಹಿಂದಿ ರಾಷ್ಟ್ರಭಾಷೆ ವಿವಾದದಲ್ಲಿ ಅಜಯ್ ದೇವಗನ್ ಕೀಳು ಮನಸ್ಥಿತಿ ಬಿಚ್ಚಿತ್ತ ನೀನಾಸಂ ಸತೀಶ್ | Oneindia Kannada

English summary
A team of experts discover the reality of the cave of Pandavas in Ramakunja village in Kadaba taluk of the Dakshina Kannada district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X