'ನೂರು ಶರತ್‌ಗಳು ಹುಟ್ಟಿ ಬಂದು ದುಷ್ಕರ್ಮಿಗಳಿಗೆ ಪಾಠ ಕಲಿಸಲಿದ್ದಾರೆ'

ಮಂಗಳೂರು, ಜುಲೈ 11 : ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಯಾದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಸಜಿಪ ಗ್ರಾಮದಲ್ಲಿರುವ ಮನೆಗೆ ಇಂದು (ಮಂಗಳವಾರ) ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಭೇಟಿ ನೀಡಿದರು.

ಬಳಿಕ ಮಾಧ್ಯಮ ಪ್ರತಿನಿದಿಗಳ ಜತೆಗೆ ಮಾತನಾಡಿದ ಅವರು, "ಮನೆಗೆ ಆಧಾರವಾಗಿದ್ದ ಪುತ್ರನನ್ನು ಕಳೆದುಕೊಂಡು ದುಃಖದಲ್ಲಿರುವ ತಂದೆಗೆ ಸಾಂತ್ವನ ಹೇಳುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇನೆ. ಒಬ್ಬ ಶರತ್ ಕೊಲೆ ಆಗಿದ್ದರೂ ನೂರು ಶರತ್ ಗಳು ಹುಟ್ಟಿ ಬಂದು ದುಷ್ಕರ್ಮಿಗಳಿಗೆ ಪಾಠ ಕಲಿಸಲಿದ್ದಾರೆ" ಎಂದರು.

D.V. Sadananda Gowda visits sharat madivala house in mangaluru

ಈ ಪ್ರಕರಣವನ್ನು ಇಷ್ಟಕ್ಕೇ ಬಿಡಲು ಸಾಧ್ಯವಿಲ್ಲ. ಯಾರು ಯಾರಿಗೆ ತುಪ್ಪ ಸುರಿಯುತ್ತಿದ್ದಾರೆ ಎಂಬುದು ಕೂಡ ನನಗೆ ಚನ್ನಾಗಿ ಗೋತಿದೆ.

ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಐಜಿಪಿ, ಎಸ್ಪಿಯವರೊಂದಿಗೆ ಸಭೆ ನಡೆಸಿ ಜಿಲ್ಲೆಯ ಪರಿಸ್ಥಿತಿ ಬಗ್ಗೆ ಮಾಹಿತು ಪಡೆಯಲಿದ್ದೇನೆ ಎಂದು ಹೇಳಿದರು.

D.V. Sadananda Gowda visits sharat madivala house in mangaluru

ಇದೇ ವೇಳೆ ಮಾತನಾಡಿದ ಶರತ್ ತಂದೆ ತಿನಿಯಪ್ಪ, 'ಪೊಲೀಸರಿಗೆ ಆರೋಪಿಗಳ ಬಂಧನ ಮಾಡದಂತೆ ರಾಜಕೀಯ ಒತ್ತಡ ಇರಬಹುದು.

ತನಿಖೆಯ ವಿಚಾರಣೆ ಏನಾಗುತ್ತಿದೆ ಎಂಬುವುದೇ ನಮಗೆ ಗೊತ್ತಿಲ್ಲ, ಮತ್ತು ನನ್ನನ್ನು ಇಲ್ಲಿ ತನಕ ಯಾರು ಕೂಡ ಸಂಪರ್ಕಿಸಿಲ್ಲ' ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+