ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ವಿಮಾನ ನಿಲ್ದಾಣ ಖಾಸಗೀಕರಣಕ್ಕೆ ವಿರೋಧ

|
Google Oneindia Kannada News

ಮಂಗಳೂರು, ಆ. 23: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಖಾಸಗೀಕರಣವನ್ನು ತಡೆಯಲು ಒತ್ತಾಯಿಸಿ ಸಿಪಿಐಎಂ ಮನವಿ ಮಾಡಿದೆ.

ದೇಶದ ಲಾಭದಾಯಕ ಸಾರ್ವಜನಿಕ ಸಂಸ್ಥೆಗಳು ಮತ್ತು ಆಸ್ತಿಗಳ ಅಕ್ರಮ ಮಾರಾಟವನ್ನು ಕೇಂದ್ರ ಸರಕಾರ ಮುಂದುವರೆಸಿದೆ. ಇದೀಗ ಅದಾನಿಯವರ ಕಂಪನಿಗೆ ಅಕ್ರಮ ದರಕ್ಕೆ ವಿಶ್ವದ ಅತ್ಯಂತ ಶ್ರೇಷ್ಠ ದರ್ಜೆಯ ಕರ್ನಾಟಕದ, ಮಂಗಳೂರು ಅಂತರಾಷ್ವ್ರೀಯ ವಿಮಾನ ನಿಲ್ದಾಣವನ್ನು ಮಾರಾಟ ಮಾಡಲು ಮುಂದಾಗಿದೆ.

ಮಂಗಳೂರು ವಿಮಾನ ನಿಲ್ದಾಣದ ಹೊಣೆ ಅದಾನಿ ಕೈಗಿತ್ತ ಕೇಂದ್ರ ಸಂಪುಟಮಂಗಳೂರು ವಿಮಾನ ನಿಲ್ದಾಣದ ಹೊಣೆ ಅದಾನಿ ಕೈಗಿತ್ತ ಕೇಂದ್ರ ಸಂಪುಟ

ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಇದನ್ನು ಬಲವಾಗಿ ಖಂಡಿಸುತ್ತದೆ. ಅದೇ ರೀತಿ, ಸದರಿ ನಿಲ್ದಾಣದ ಖಾಸಗೀಕರಣವನ್ನು ತಕ್ಷಣವೇ ಕೈ ಬಿಡುವಂತೆ ಕೇಂದ್ರ ಸರಕಾರವನ್ನು ಬಲವಾಗಿ ಒತ್ತಾಯಿಸುತ್ತದೆ. ರಾಜ್ಯ ಸರಕಾರ ಲಾಭದಾಯಕವಾಗಿ ನಡೆಯುವ ಈ ಸಂಸ್ಥೆಯ ಖಾಸಗೀಕರಣವನ್ನು ತಡೆಯಲು ಮುಂದಾಗದೇ ಮೌನ ವಹಿಸಿ ನೆರವಾಗುತ್ತಿರುವುದು ಅಕ್ಷಮ್ಯವಾಗಿದೆ.

CPIM opposes privatisation of Mangalore Airport

ಕೇರಳದ ಎಡ ಮತ್ತು ಪ್ರಜಾಸತ್ತಾತ್ಮಕ ರಂಗದ ರಾಜ್ಯ ಸರಕಾರ ತಿರುವನಂತಪುರಂ ನ ವಿಮಾನ ನಿಲ್ದಾಣವನ್ನು ಉಳಿಸಿಕೊಳ್ಳಲು ಶತಾಯ- ಗತಾಯ ಪ್ರಯತ್ನ, ತೀವ್ರ ಪ್ರತಿರೋಧ ಒಡ್ಡುತ್ತಿರುವಾಗ, ಕರ್ನಾಟಕ ಸರಕಾರದ ಈ ಅಸಹನೀಯ ಮೌನ ಖಂಡನೀಯವಾಗಿದೆ.

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಖಾಸಗೀಕರಣವನ್ನು ತಡೆಯಲು ರಾಜ್ಯ ಸರಕಾರ ಗಂಭೀರವಾಗಿ ಗಮನ ಹರಿಸಬೇಕು. ಕೇಂದ್ರ ಸರಕಾರ ಅದನ್ನು ಖಾಸಗೀಕರಿಸದಂತೆ ತಡೆಯಲು ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

ಅಗತ್ಯ ಬಿದ್ದರೇ, ಕೇರಳ ಸರಕಾರದ ಮಾದರಿಯಲ್ಲಿ ಮಂಗಳೂರು ವಿಮಾನ ನಿಲ್ದಾಣವನ್ನು ಖರೀದಿಸಲು ರಾಜ್ಯ ಸರಕಾರ ಮುಂದಾಗಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ದ ರಾಜ್ಯ ಸಮಿತಿ ಒತ್ತಾಯಿಸುತ್ತದೆ.

English summary
CPIM demanded Union aviation ministry and Karnataka government not to privatise Mangaluru Airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X