'ಕಾಂಗ್ರೆಸ್ ಶಾಂತಿಯ ಶತ್ರು, ಅಭಿವೃದ್ಧಿಯ ಶತ್ರು'- ಮಂಗಳೂರಿನಲ್ಲಿ ಮೋದಿ ವಾಗ್ದಾಳಿ

ರಾಜ್ಯ ಚುನಾವಣೆ ಬೆನ್ನಲ್ಲೆ ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತಬೇಟೆ ನಡೆಸಿದರು. ಮೂಡಬಿದಿರೆಯ ಮುಲ್ಕಿಯಲ್ಲಿ ಬಿಜೆಪಿಯ ಬೃಹತ್ ಸಮಾವೇಶದಲ್ಲಿ ಭಾಗಿಯಾದ ಮೋದಿ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಜನರತ್ತ ಕೈಬೀಸಿದ ಮೋದಿ ವೇದಿಕೆಗೆ ಆಗಮಿಸುತ್ತಿದ್ದಂತೆ ಜನರ ಘೋಷಣೆಗಳು ಮೊಳಗಿದವು. ಈ ವೇಳೆ ಕೇಸರಿ ಶಾಲು ಹೊದಿಸಿ, ಸ್ಮರಣಿಕೆ, ಗಣಪತಿ ವಿಗ್ರಹ, ಕೃಷ್ಣನ ವಿಗ್ರಹ, ನರಸಿಂಹನ ಪ್ರಸಾದ ನೀಡಿ ಮೋದಿ ಅವರನ್ನು ಗೌರವಿಸಲಾಯಿತು.

ಸಭೆಯನ್ನುದ್ದೇಶಿಸಿ ತುಳುವಿನಲ್ಲಿ ಮಾತು ಆರಂಭಿಸಿದ ಮೋದಿ, 'ಮಾತೆರೆಗ್ಲಾ ಪ್ರೀತಿದ ಸೊಲ್ಮೆಲು' (ಎಲ್ಲರಿಗೂ ಪ್ರೀತಿಯ ನಮಸ್ಕಾರಗಳು) ಎಂದು ಹೇಳುವ ಮೂಲಕ ನೆರೆದ ಜನರ ಗಮನವನ್ನು ಸೆಳೆದರು.

Congress is enemy of peace, enemy of development - Modi sparks in Mangaluru

ಬಳಿಕ ಮಂಗಳೂರು ಬಿಜೆಪಿ ಸಮಾವೇಶದಲ್ಲಿ ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. 'ಕಾಂಗ್ರೆಸ್ ಶಾಂತಿಯ ಶತ್ರು, ಅಭಿವೃದ್ಧಿಯ ಶತ್ರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯ ಸರ್ವನಾಶವಾಘುತ್ತದೆ. ಕಾಂಗ್ರೆಸ್ ರಿವರ್ಸ್ ಗೇರ್ ನಲ್ಲಿ ಚಲಿಸುತ್ತದೆ. ಹೀಗಾಗಿ ಕಾಂಗ್ರೆಸ್ ಜೆಡಿಎಸ್ ಬಗ್ಗೆ ಎಚ್ಚರಿಕೆಯಿಂದ ಮುನ್ನಡೆಯುವಂತೆ' ಮೋದಿ ಸೂಚಿಸಿದರು.

ಮಾತ್ರವಲ್ಲದೆ 'ರಾಜ್ಯ ಉಗ್ರ ಚಟುವಟಿಕೆಗಳಿಗೆ ಕಾಂಗ್ರೆಸ್ ಪ್ರೋತ್ಸಾಹ ನೀಡುತ್ತಿದೆ. ದೇಶದ್ರೋಹಿ ಚಟುವಟಿಕೆ ಮಾಡೋರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ಮಾತ್ರವಲ್ಲದೆ ನಮ್ಮ ಸೈನಿಕರನ್ನು ಕಾಂಗ್ರೆಸ್ ಅವಮಾನಿಸುವ ಕೆಲ ಮಾಡುತ್ತದೆ. ಇದು ನಿಜಕ್ಕೂ ಖಂಡನೀಯ' ಎಂದು ಮೋದಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.

ಕಾಂಗ್ರೆಸ್ ಪ್ರತಿ ಯೋಜನೆಯಲ್ಲಿ ಶೇ.85 ಕಮಿಷನ್ ಪಡೆಯುತ್ತಿದೆ. ಕಾಂಗ್ರೆಸ್ ಕರಾಳ ಮುಖ ಜನ ನೋಡಿದ್ದಾರೆ. ಶಿಕ್ಷಣದ ಅಭಾವ ಇತ್ತು. ನೀರಿನ ಸಮಸ್ಯೆ ಇತ್ತು. ಮಹಿಳೆಯರು ಕೆಲಸ ಮಾಡಲು ಕಷ್ಟವಾಗಿತ್ತು. ಇದೆಲ್ಲಾ ಸಮಸ್ಯೆಗಳನ್ನು ಬಿಜೆಪಿ ತೊಡೆದು ಹಾಕುವಂತ ಕೆಲಸ ಮಾಡುತ್ತಿದೆ.

Congress is enemy of peace, enemy of development - Modi sparks in Mangaluru

ಹಿಂದೂಸ್ತಾನ್‌ ನಲ್ಲಿ ಕರ್ನಾಟಕದ ಹೆಸರು ಹೇಳಬೇಕು ಅಂದ್ರೆ, ಎಲ್ಲಾ ರಾಜ್ಯಲ್ಲಿ ಜೈ ಕರ್ನಾಟಕ ಎನ್ನಬೇಕು ಅಂದರೆ, ಪೂರ್ಣ ಬಹುಮತ ಸರ್ಕಾರ ಬೇಕು. ನೀವು ಅದನ್ನು ಮಾಡಬೇಕಿದೆ. ಶಾಂತಿಯಿಂದ ರಾಜ್ಯ ನಡೆಯುತ್ತಿದೆ. ಇದು ಮತ್ತೆ ರಿವರ್ಸ್ ಗೇರ್ ಹೋಗಬಾರದು.

ವಿಶ್ವದೆಲ್ಲೆಡೆ ಗಂಡುರದ ಸದ್ದು ಕೇಳುತ್ತಿದೆ. ಇಡೀ ವಿಶ್ವವೇ ಭಾರತದ ಅಭಿವೃದ್ಧಿ ಮೆಚ್ಚುತ್ತಿದೆ. ಜಗತ್ತಿನ ಪ್ರತಿ ದೇಶದಲ್ಲೂ ಭಾರತಕ್ಕೆ ಜೈಕಾರ ಇದೆ. ನಿಮ್ಮ ಒಂದೊಂದು ಮತದ ಶಕ್ತಿಯಿಂದ ಇದು ಮುಂದುವರೆಯಲು ಸಾಧ್ಯ. ದೆಹಲಿಯಲ್ಲಿ ಬಲಿಷ್ಠ ಸರ್ಕಾರ ಬಂದರೆ ಇದು ಸಾಧ್ಯವಾಗುತ್ತದೆ ಎಂದು ಮೋದಿ ಹೇಳಿದರು.

ರಾಣಿ ಅಬ್ಬಕ್ಕ ಬಗ್ಗೆ ಪ್ರಸ್ತಾಪ ಮಾಡಿದರು. ದೇಶದ ಪ್ರತಿಯೊಬ್ಬ ಮಹಿಳೆಯರಲ್ಲೂ ಅಬ್ಬಕ್ಕನಂತೆ ಆಗಬೇಕು. ನಾವು ಬಡವರಿಗೆ ಮನೆ ನಿರ್ಮಿಸಿ ಕೊಡುತ್ತಿದ್ದೇವೆ. ಮಹಿಳಾ ಶಸಕ್ತೀಕರಣಕ್ಕೆ ಯೋಜನೆ ಜಾರಿಗೊಳಿಸಿದ್ದೇವೆ. ನಿಮ್ಮ ಒಂದು ಓಟು ಭಾರತದ ಶಕ್ತಿಯನ್ನು ತೋರಿಸುತ್ತದೆ. ಭಾರತದ ಬಗ್ಗೆ ಜೈಕಾರ ಮೊಳಗಲು ನಿಮ್ಮ ಮತ ಕಾರಣ ಎಂದು ಮೋದಿ ಹೇಳಿದರು.

ಮೀನುಗಾರರ ಅಭಿವೃದ್ಧಿ ನಮಗೆ ಮುಖ್ಯ ಆಗಿದೆ. ಮೀನುಗಾರರ ಕಲ್ಯಾಣಕ್ಕಾಗಿ ಹೊಸ ಯೋಜನೆ ಆರಂಭಿಸಿದ್ದೇವೆ. ಉಡುಪಿಯಲ್ಲಿರುವ ಮೀನುಗಾರರಿಗೆ ಬಿಜೆಪಿ ಸಹಕಾರ ಮಾಡಲಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಯಾವುದೇ ಅಭಿವೃದ್ಧಿ ಮಾಡಿಲ್ಲ, ಕರ್ನಾಟಟಕವನ್ನು ಬರ್ಬಾದ್ ಮಾಡಿದೆ. ಅತಂತ್ರ ಮತ ಬಂದರೆ ಜನರ ಬದುಕು ಅಂತತ್ರವಾಗಲಿದೆ. ಹೀಗಾಗಿ ದೇಶದಲ್ಲಿ ಡಬಲ್ ಇಂಜಿನ್ ಸರ್ಕಾರ ಬರಬೇಕಿದೆ. ಶಾಂತಿ ಕದಡುವ ಸರ್ಕಾರ ಅಧಿಕಾರಕ್ಕೆ ಬರಬಾರದು. ರಾಜ್ಯದ ಜನರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು. ಎಲ್ಲರೂ ಬಿಜೆಪಿಗೆ ಮತ ನೀಡಿ ಶಕ್ತಿ ಶಾಲಿ ಸರ್ಕಾರವನ್ನು ತನ್ನಿ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+