ಕೇಸರಿ ಶಾಲು ಹಾಕಿದಾಕ್ಷಣ ಜನ ಕಾಂಗ್ರೆಸ್ ಅನ್ನು ನಂಬಲ್ಲ: ಆರ್.ಅಶೋಕ್

ಮಂಗಳೂರು, ಏಪ್ರಿಲ್ 06: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕೇಸರಿ ಶಾಲು ಹಾಕಿ ಪ್ರಚಾರ ಮಾಡುತ್ತಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ಒಂದು ಡ್ರಾಮಾ ಕಂಪನಿ ಇದ್ದಹಾಗೆ . ಕೇಸರಿ ಶಾಲು ಹಾಕಿದ ತಕ್ಷಣ ಜನ ಅವರನ್ನು ನಂಬಲ್ಲ ಎಂದು ಹೇಳಿದರು. ಕೇಸರಿ ಶಾಲಿಗೆ ಅಷ್ಟೆ ಮಹತ್ವವಿದೆ,ಪಾವಿತ್ರ್ಯತೆ ಇದೆ. ತೋರಿಕೆಗೆ ಕೇಸರಿ ಶಾಲು ಹಾಕುವವರನ್ನು ಜನ ನಂಬಲ್ಲ ಎಂದು ಹೇಳಿದರು.

Congress is a drama company said BJP leader R Ashok
ಉಳಾಯಿಬೆಟ್ಟು ಕೋಮು ಗಲಭೆಯ‌ ಕೇಸ್ ವಾಪಾಸ್ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಧರ್ಮ ರಾಜಕಾರಣ ಮಾಡುತ್ತಿದೆ. ಚುನಾವಣೆ ಸಂದರ್ಭದಲ್ಲಿ ಈ ರೀತಿಯ ರಾಜಕಾರಣ ಸರಿಯಲ್ಲ. ಕಾಂಗ್ರೆಸ್ ಪಕ್ಷವೂ ಪ್ರಣಾಳಿಕೆಯಲ್ಲಿ ದೇಶದ್ರೋಹದ ಕೇಸ್ ವಾಪಾಸ್ ಪಡೆಯುವುದಾಗಿ ಹೇಳಿದೆ. ಇದರಿಂದ ದೇಶದ್ರೋಹ ಕೃತ್ಯ ಜಾಸ್ತಿಯಾಗುತ್ತೆ ಎಂದು ಕಳವಳ ವ್ಯಕ್ತಪಡಿಸಿದರು.

ಇನ್ನು ತೇಜಸ್ವಿ ಸೂರ್ಯ ಪರ ಪ್ರಚಾರದಲ್ಲಿ ಬಿಜೆಪಿ ಮುಖಂಡರು ಭಾಗವಹಿಸುತ್ತಿಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ತೇಜಸ್ವಿ ಸೂರ್ಯ ಅವರ ಪ್ರಚಾರದ ಉದ್ಘಾಟನೆ ಮಾಡಿದ್ದೇ ನಾನು. ಬಿಜೆಪಿ ಅಭ್ಯರ್ಥಿ ಪರ ನಾವು ಕಾಯ-ವಾಚ-ಮನಸ್ಸು ಕೆಲಸ ಮಾಡುತ್ತೇವೆ. ಈ ಬಾರಿ ಬೆಂಗಳೂರು ದಕ್ಷಿಣದಲ್ಲಿ ದೊಡ್ಡ ಅಂತರದಲ್ಲಿ ತೇಜಸ್ವಿ ಸೂರ್ಯ ಗೆಲ್ಲುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+