ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂಟ್ವಾಳ ಮಿನಿ ವಿಧಾನಸೌಧದ ಬಾಗಿಲು ಮುರಿದ ಕಾಂಗ್ರೆಸ್ ಕಾರ್ಯಕರ್ತರು!

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 3: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮಿನಿ ವಿಧಾನಸೌಧ ಕಂಡರೆ, ಬಂಟ್ವಾಳ ಕಾಂಗ್ರೆಸ್ ಕಾರ್ಯಕರ್ತರಿಗೆ ಅದೇನು ದ್ವೇಷನೋ ಏನೋ, ಮಿನಿ ವಿಧಾನಸೌಧದ ಬಾಗಿಲನ್ನು ಎರಡನೇ ಬಾರಿ ಮುರಿದಿದ್ದಾರೆ.

ಬಂಟ್ವಾಳದಲ್ಲಿ ಸರ್ಕಾರದ ಕಿಟ್ ಮತ್ತು ವ್ಯಾಕ್ಸಿನ್ ಹಂಚಿಕೆ ವಿಚಾರದಲ್ಲಿ ರಾಜಕೀಯವಾಗುತ್ತಿದೆ ಎಂದು ಆರೋಪಿಸಿ ಮಾಜಿ ಸಚಿವ ಬಿ. ರಮಾನಾಥ್ ರೈ ನೇತೃತ್ವದ ತಂಡ ಬಂಟ್ವಾಳ ಮಿನಿ ವಿಧಾನಸೌಧಕ್ಕೆ ನುಗ್ಗಿದ್ದು, ಕಾರ್ಯಕರ್ತರ ರಂಪಾಟಕ್ಕೆ ಮಿನಿ ವಿಧಾನಸೌಧದ ಬಾಗಿಲು ತುಂಡಾಗಿದೆ.

ಈ ಹಿಂದೆ ಮಿನಿ ವಿಧಾನಸೌಧ ಉದ್ಘಾಟನೆಯ ಸಂದರ್ಭದಲ್ಲಿ ಆಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿ ನೀಡಿದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ತಳ್ಳಾಟ ನಡೆಸಿ ಹೊಸ ಬಾಗಿಲನ್ನೇ ಮುರಿದು ಹಾಕಿದ್ದರು. ಇದೀಗ ರಮಾನಾಥ್ ರೈ ನೇತೃತ್ವದಲ್ಲಿ ಮಿನಿ ವಿಧಾನಸೌಧಕ್ಕೆ ನುಗ್ಗಿದ ಕಾರ್ಯಕರ್ತರು, ಮತ್ತೆ ಬಾಗಿಲು ಮುರಿದಿದ್ದಾರೆ.

ಈ ಬಗ್ಗೆ 60ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸ್ ದೂರು ನೀಡಿರುವ ಬಂಟ್ವಾಳ ತಹಶೀಲ್ದಾರ ರಶ್ಮಿ ಎಸ್.ಆರ್. ಸಾರ್ವಜನಿಕ ಆಸ್ತಿ- ಪಾಸ್ತಿ ನಷ್ಟ ಮಾಡಿದ ಹಿನ್ನಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 ಪೂರ್ವಾನುಮತಿ ಇಲ್ಲದೆ ನುಗ್ಗಿದ 50 ರಿಂದ 60 ಜನರ ಗುಂಪು

ಪೂರ್ವಾನುಮತಿ ಇಲ್ಲದೆ ನುಗ್ಗಿದ 50 ರಿಂದ 60 ಜನರ ಗುಂಪು

ಸಾರ್ವಜನಿಕ ಕಚೇರಿಗಳುಳ್ಳ ಮಿನಿ ವಿಧಾನಸೌಧದ ಒಳ ಅವರಣಕ್ಕೆ ಯಾವುದೇ ಪೂರ್ವಾನುಮತಿ ಇಲ್ಲದೆ 50 ರಿಂದ 60 ಜನರ ಗುಂಪು ನುಗ್ಗಿ, ಸಾರ್ವಜನಿಕ ಆಸ್ತಿ- ಪಾಸ್ತಿಗಳಿಗೆ ಹಾನಿಯುಂಟು ಮಾಡಿದ್ದು, ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಬಂಟ್ವಾಳ ತಹಶೀಲ್ದಾರ ರಶ್ಮಿ ಎಸ್.ಆರ್. ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆಗಸ್ಟ್ 31 ಮಂಗಳವಾರ ಬೆಳಿಗ್ಗೆ 11.30ರ ವೇಳೆಗೆ ಘಟನೆ ನಡೆದಿದ್ದು, ಬಂಟ್ವಾಳ ಮಿನಿ ವಿಧಾನಸೌಧದ ಕಚೇರಿಗೆ ಸುಮಾರು 50 ರಿಂದ 60 ಜನರ ತಂಡ ಕೋವಿಡ್-19ಕ್ಕೆ ಸಂಬಂಧಿಸಿದಂತೆ ವ್ಯಾಕ್ಸಿನ್ ಹಾಗೂ ಕಾರ್ಮಿಕ ವರ್ಗದವರಿಗೆ ಉಚಿತ ಕಿಟ್ ವಿತರಿಸುವ ಸಂದರ್ಭದಲ್ಲಿ ಏಕಪಕ್ಷೀಯ ವಾದ ತೀರ್ಮಾನಗಳನ್ನು ತೆಗೆದುಕೊಂಡು ದುರುಪಯೋಗ ಪಡಿಸಲಾಗುತ್ತಿದೆ ಎಂಬ ಆರೋಪ ಮಾಡಿ ಯಾವುದೇ ಪೂರ್ವಾನುಮತಿ ಇಲ್ಲದೆ ಭದ್ರತೆಗೆ ಅವಕಾಶವನ್ನು ನೀಡದೆ ಏಕಾಏಕಿಯಾಗಿ ಕಚೇರಿಗೆ ಪ್ರವೇಶ ಮಾಡಿದ್ದಾರೆ.

 ದಿನನಿತ್ಯದ ಕೆಲಸ ಕಾರ್ಯಗಳಿಗೆ ತೊಂದರೆ

ದಿನನಿತ್ಯದ ಕೆಲಸ ಕಾರ್ಯಗಳಿಗೆ ತೊಂದರೆ

ಈ ಸಂದರ್ಭದಲ್ಲಿ ಘೋಷಣೆಗಳನ್ನು ಕೂಗುತ್ತ ತಾಲೂಕು ಕಚೇರಿಗಳ ದಿನನಿತ್ಯದ ಕೆಲಸ ಕಾರ್ಯಗಳಿಗೆ ತೊಂದರೆಯನ್ನುಂಟು ಮಾಡಿರುವುದಲ್ಲದೆ ಅಶಾಂತಿ ಸೃಷ್ಟಿಸಿದ್ದಾರೆ. ಕಚೇರಿಯ ಆವರಣದಲ್ಲಿದ್ದ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿಯುಂಟು ಮಾಡಿದ ಗುಂಪು ಸರಕಾರದ ಕೋವಿಡ್-19 ಮಾರ್ಗಸೂಚಿಗಳನ್ನು ಹಾಗೂ ಪರಿಷ್ಕೃತ ಆದೇಶಗಳನ್ನು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಲ್ಲದೇ, ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದ್ದಾರೆ.

 ಮಹಿಳಾ ಅಧಿಕಾರಿ ಮುಂದೆ ಗಟ್ಟಿ ಧ್ವನಿಯಲ್ಲಿ ರೇಗಾಡಿದ್ದಾರೆ

ಮಹಿಳಾ ಅಧಿಕಾರಿ ಮುಂದೆ ಗಟ್ಟಿ ಧ್ವನಿಯಲ್ಲಿ ರೇಗಾಡಿದ್ದಾರೆ

ಬಂಟ್ವಾಳ ಮಾಜಿ ಶಾಸಕ ಬಿ. ರಮಾನಾಥ್ ರೈ ನೇತೃತ್ವದ ಕಾಂಗ್ರೆಸ್ ಕಾರ್ಯಕರ್ತರ ತಂಡ ಮಿನಿ ವಿಧಾನಸೌಧಕ್ಕೆ ನುಗ್ಗಿದೆ. ತಹಶೀಲ್ದಾರ ರಶ್ಮಿ ಕಚೇರಿಗೆ ತೆರಳಿದ ರಮಾನಾಥ್, ಮಹಿಳಾ ಅಧಿಕಾರಿ ಮುಂದೆ ಗಟ್ಟಿ ಧ್ವನಿಯಲ್ಲಿ ರೇಗಾಡಿದ್ದಾರೆ. ಬಿಜೆಪಿ ವಾಕ್ಸಿನೇಷನ್ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ವಾಕ್ಸಿನೇಷನ್ ಏನು ಅವರ ಅಪ್ಪನ ಮನೆಯ ಆಸ್ತಿಯಾ ಅಂತಾ ಕಿರುಚಾಡಿದ್ದಾರೆ. ಇದಕ್ಕೆ ಜೊತೆಗಿದ್ದವರೆಲ್ಲಾ ಸಾಥ್ ನೀಡಿದ್ದು, ಗೊಂದಲದ ವಾತಾವರಣ ನಿರ್ಮಾಣ ಮಾಡಿದ್ದಾರೆ.
ಮಾಜಿ ಸಚಿವ ಬಿ. ರಮಾನಾಥ್ ರೈ ಮಾತನಾಡಿ, "ವಾಕ್ಸಿನೇಷನ್ ನೀಡುವ ವಿಚಾರದಲ್ಲಿ ಬಂಟ್ವಾಳ ಬಿಜೆಪಿ ರಾಜಕೀಯ ಮಾಡುತ್ತಿದೆ.‌ ಕಾರ್ಮಿಕರಿಗೆ ನೀಡುವ ಕಿಟ್‌ನ್ನು ಬಿಜೆಪಿಯವರು ಅವರಿಗೆ ಬೇಕಾದವರಿಗೆ ಮಾತ್ರ ನೀಡುತ್ತಿದ್ದಾರೆ. ಪಕ್ಷದ ಮುಖಂಡರ ಮನೆಯಲ್ಲಿ ಕಿಟ್‌ಗಳನ್ನು ಶೇಖರಣೆ ಮಾಡಲಾಗುತ್ತಿದೆ. ಐಸಿಯು ಸಂಚಾರಿ ವಾಹನದಲ್ಲೂ ಬಿಜೆಪಿ ಕಾರ್ಯಕರ್ತರು ತಾರತಮ್ಯ ಮಾಡುತ್ತಿದ್ದಾರೆ," ಎಂದರು.

 ಬಿಜೆಪಿ ಕಾರ್ಯಕರ್ತರೇ ಕಿಟ್ ವಾಹನದ ಉಸ್ತುವಾರಿ ನೋಡಿಕೊಳ್ಳುತ್ತಾರೆ

ಬಿಜೆಪಿ ಕಾರ್ಯಕರ್ತರೇ ಕಿಟ್ ವಾಹನದ ಉಸ್ತುವಾರಿ ನೋಡಿಕೊಳ್ಳುತ್ತಾರೆ

"ನಿಯಮದ ಪ್ರಕಾರ ಸಂಚಾರಿ ವಾಹನ ಆಯಾ ಗ್ರಾಮಗಳಿಗೆ ಹೋದ ಸಂದರ್ಭದಲ್ಲಿ ಆಯಾ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಪಿಡಿಒ ಆ ವಾಹನದ ನೇತೃತ್ವ ಪಡೆಯಬೇಕು. ಆದರೆ ಕಾಂಗ್ರೆಸ್ ಆಡಳಿತವಿರುವ ಪಂಚಾಯತ್‌ನಲ್ಲಿ ಬಿಜೆಪಿ ಕಾರ್ಯಕರ್ತರೇ ಆ ವಾಹನದ ನೇತೃತ್ವ ವಹಿಸಿಕೊಳ್ಳುತ್ತಾರೆ. ಕಾರ್ಯಕರ್ತರ ಮನೆಯವರಿಗೆ ಮಾತ್ರ ಮಾಹಿತಿ ನೀಡಿ ಚಿಕಿತ್ಸೆ ನೀಡಲಾಗುತ್ತಿದೆ," ಎಂದು ಮಾಜಿ ಸಚಿವ ಬಿ. ರಮಾನಾಥ್ ರೈ ಆರೋಪಿಸಿದ್ದಾರೆ.
ಒಟ್ಟಾರೆ ಬಂಟ್ವಾಳದಲ್ಲಿ ಬಿಜೆಪಿ- ಕಾಂಗ್ರೆಸ್ ನಡುವಿನ ಶೀತಲ ಸಮರ ಜೋರಾಗಿ ನಡೆಯುತ್ತಿದ್ದು, ಇಬ್ಬರ ತಿಕ್ಕಾಟಕ್ಕೆ ಮಿನಿ ವಿಧಾನಸೌಧ ಹಾನಿಯಾಗಿದ್ದು ಮಾತ್ರ ಖಂಡನೀಯವಾಗಿದೆ.

English summary
Congress activists breakdown the Bantwal Mini Vidhana soudha door while protesting for vaccines and kit politics. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X