ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರಗಜ್ಜ ದೇವಸ್ಥಾನದ ಕಾಣಿಕೆ ಡಬ್ಬಿಯಲ್ಲಿ ಕಾಂಡೋಮ್, ಅವಹೇಳನಕಾರಿ ಬರಹ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ 20: ಮಂಗಳೂರಿನ ಉಳ್ಳಾಲದ ಕೇಂದ್ರ ಬಸ್ ನಿಲ್ದಾಣದಲ್ಲಿರುವ ಸ್ವಾಮಿ ಕೊರಗಜ್ಜ ಮತ್ತು ಗುಳಿಗಜ್ಜನ ಕ್ಷೇತ್ರದ ಕಾಣಿಕೆ ಹುಂಡಿಗೆ ಕಿಡಿಗೇಡಿಗಳು ಕಾಂಡೋಮ್ ಮತ್ತು ರಾಜಕೀಯ ನಾಯಕರ ಕುರಿತು ನಿಂದನಾರ್ಹ ಬರಹಗಳುಳ್ಳ ಭಿತ್ತಿಪತ್ರವನ್ನು ಹಾಕಿ ವಿಕೃತಿ ಮೆರೆದಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ಹಾಗೂ ಇನ್ನಿತರ ಬಿಜೆಪಿ ನಾಯಕರ ಚಿತ್ರಗಳನ್ನು ವಿರೂಪಗೊಳಿಸಿ ಅವಹೇಳನಕಾರಿ ಬರಹಗಳನ್ನು ಬರೆಯಲಾಗಿದೆ. ಉಳ್ಳಾಲದ ಕೊರಗಜ್ಜ ಸೇವಾ ಸಮಿತಿಯವರು ಪ್ರತಿ ವರ್ಷ ಸಂಕ್ರಾಂತಿಯಂದು ಕಾಣಿಕೆ ಡಬ್ಬಿ ಹಣ ತೆಗೆಯುವ ವಾಡಿಕೆ ಹೊಂದಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ 1.09 ಕೋಟಿ ರೂ. ಮೌಲ್ಯದ ಚಿನ್ನ ವಶಮಂಗಳೂರು ವಿಮಾನ ನಿಲ್ದಾಣದಲ್ಲಿ 1.09 ಕೋಟಿ ರೂ. ಮೌಲ್ಯದ ಚಿನ್ನ ವಶ

ಈ ಬಾರಿ ಸ್ವಲ್ಪ ತಡವಾಗಿ ಅಂದರೆ ಮಂಗಳವಾರ ಸಂಜೆ ಕಾಣಿಕೆ ಡಬ್ಬಿ ತೆರೆದಿದ್ದು, ಡಬ್ಬಿಯ ಒಳಗೆ ಕಾಂಡೋಮ್ ಗಳು ಹಾಗೂ ಪ್ರಚೋದನಕಾರಿ ಬರಹಗಳು ಇದ್ದಂತಹ ಪ್ಲೆಕ್ಸ್ ಒಂದು ಕಂಡುಬಂದಿದೆ.

Mangalore: Condom, Derogatory Writing In The Hundi Of Koragajja Temple

ಬೆಂಗಳೂರಿನ ಕೆ.ಆರ್ ಐಡಿಯಲ್ ನಿಗಮದ ಅಧ್ಯಕ್ಷ ಎಂ.ರುದ್ರೇಶ್ ಅವರಿಗೆ ಶುಭಕೋರಿದ ಪ್ಲೆಕ್ಸ್ ಇದಾಗಿದ್ದು, ಇದರಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ, ಪುತ್ರ ಬಿ.ವೈ ವಿಜಯೇಂದ್ರ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಸೇರಿದಂತೆ ಅನೇಕ ಬಿಜೆಪಿ ನಾಯಕರ ಭಾವಚಿತ್ರಗಳಿದ್ದು, ಎಲ್ಲವನ್ನೂ ಕೂಡಾ ಗೀಚಿ ವಿರೂಪಗೊಳಿಸಲಾಗಿದೆ.

"ರಾಜಕಾರಣಿಗಳನ್ನು ಹೊಡೆದು ಕೊಲ್ಲಬೇಕು, ದೇವ ಲೋಕದಿಂದ ಹೊರಹಾಕಲ್ಪಟ್ಟ ದ್ರೋಹಿದೂತರುಗಳು ಸೇಡಿನ ಸ್ವಭಾವ ಹೊಂದಿದ್ದು, ವಿಗ್ರಹಗಳ ಮೂಲಕ ಭೂಲೋಕದ ಜನರನ್ನು ಭ್ರಷ್ಟರನ್ನಾಗಿಸಿ, ನಕಲಿ ದೇವರಾಗಿ ಅನಾದಿ ಕಾಲದಿಂದ ಮೆರೆಯಲ್ಪಡುತ್ತಿದೆ. ಎಚ್ಚರ, ರಕ್ತ ಹೀರುವ ಸೊಳ್ಳೆಗಳಂತೆ ಜನರನ್ನು ದೋಚಿ-ಬಾಚಿ ತಿಂದು, ತೇಗುವ ಈ ಅಡಬೆ ರಾಜಕಾರಣಿಗಳನ್ನು ಅಟ್ಟಾಡಿಸಿ ಹಿಡಿದು ಕೊಲ್ಲಬೇಕಾಗಿದೆ. ಜನರು ಸಿದ್ದರಾಗಬೇಕು' ಎಂದು ಪ್ಲೆಕ್ಸ್‌ನಲ್ಲಿ ಬರೆಯಲಾಗಿದೆ.

ಈ ಬಗ್ಗೆ ಕೊರಗಜ್ಜ ಸೇವಾ ಸಮಿತಿಯವರು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸಲು ಆಗ್ರಹಿಸಿದ್ದಾರೆ. ಕೆಲದಿನಗಳ ಹಿಂದೆಯೂ ನಗರದ ಮೂರು ದೇವಸ್ಥಾನಗಳಲ್ಲೂ ಕಾಣಿಕೆ ಹುಂಡಿಗೆ ಇದೇ ರೀತಿ ಅವಹೇಳನಕಾರಿ ಬರಹ, ಕಾಂಡೋಮ್ ಹಾಕಲಾಗಿತ್ತು.

English summary
Derogatory Writing posters and condoms were found in the Koragajja temple Hundi in Ullala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X