ಮಂಗಳೂರು: ಬಡಮಕ್ಕಳಿಗೆ ಪುಸ್ತಕ ವಿತರಣೆ

ಮಂಗಳೂರು, ಮೇ. 22: ನಗರದ ಸ್ವಯಂ ಸೇವಾ ಸಂಸ್ಥೆ ಸಂತ ಕ್ರಿಸ್ಟೋಫರ್‌ ಅಸೋಸಿಯೇಶನ್‌ ಸಮಾಜದ ಬಡ ವಿದ್ಯಾರ್ಥಿಗಳಿಗೆ ನೀಡಿದ ಪುಸ್ತಕಗಳನ್ನು ರೊಸಾರಿಯೋ ಚರ್ಚ್‌ನಲ್ಲಿ ವಿತರಿಸಲಾಯಿತು.

ಮಂಗಳೂರು ಎಂಸಿಸಿ ಬ್ಯಾಂಕ್‌ ಅಧ್ಯಕ್ಷ ಫ್ರಾನ್ಸಿಸ್‌ ಕುಟಿನ್ಹೊ ಪುಸ್ತಕಗಳನ್ನು ವಿತರಿಸಿ ಮಾತನಾಡಿ " ಲಕ್ಷಾಂತರ ಬಡ ಮಕ್ಕಳು ಇಂದು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸಮಾಜ ಅಂಥವರನ್ನು ಗುರುತಿಸಿ ಅವರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಅಗತ್ಯವಿದೆ. ಬಡ ವಿದ್ಯಾರ್ಥಿಗಳ ಅವಶ್ಯಕತೆಯನ್ನು ಮನಗಂಡು ಈ ಪರಿಸರದ ನೂರಾರು ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕಗಳನ್ನು ವಿತರಿಸಲು ಮುಂದಾಗಿರುವ ಕ್ರಿಸ್ಟೋಫರ್‌ ಅಸೋಸಿಯೇಶನ್‌ ಕಾರ್ಯ ಶ್ಲಾಘನೀಯವೆನಿಸಿದೆ" ಎಂದರು.[ಮಂಗಳೂರು ವಿವಿ ಆವರಣದಲ್ಲಿ 'ಜೋಡಿ' ಶವ]

Mangalore book donate
ರೊಜಾರಿಯೋ ಕೆಥೆಡ್ರಲ್‌ ಚರ್ಚ್‌ನ ಪ್ರಧಾನ ಧರ್ಮ ಗುರು ಫಾ| ಜೆ.ಬಿ. ಕ್ರಾಸ್ತಾ ಮಾತನಾಡಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನಮ್ಮ ಸಂಸ್ಥೆ ಯಾವಗಲೂ ಸಹಕರಿಸುತ್ತದೆ. ದೇವರ ದಯೆಯಿಂದ ಲಭಿಸಿದ ಸಂಪತ್ತನ್ನು ಈ ರೀತಿ ವಿನಿಯೋಗಿಸುವುದರ ಮೂಲಕ ದೇವರ ಸೇವೆ ಮಾಡಿದ ಪುಣ್ಯ ನಮಗೆ ಸಿಗುತ್ತದೆ ಎಂದರು.

ಸಂತ ಕ್ರಿಸ್ಟೋಫರ್‌ ಅಸೋಸಿಯೇಶನ್‌ 1967ರಲ್ಲಿ ಆರಂಭಗೊಂಡಿದ್ದು ಪ್ರತಿವರ್ಷ ಶಾಲೆ ಆರಂಭಗೊಳ್ಳುವ ಮುನ್ನಾ ಬಡ ವಿದ್ಯಾರ್ಥಿ‌ಗಳಿಗೆ ಪುಸ್ತಕವನ್ನು ನಿರಂತರವಾಗಿ ವಿತರಿಸುತ್ತಿದೆ.

ಸಂಘದ ಅಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+