• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ: ಆಂಬ್ಯುಲೆನ್ಸ್‌ಗೆ ದಾರಿ ಕೊಡದ ಕಾರು ಪೊಲೀಸ್ ವಶಕ್ಕೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜುಲೈ 20: ಆಂಬ್ಯುಲೆನ್ಸ್‌ಗೆ ದಾರಿ ಬಿಡದೆ ತೊಂದರೆ ನೀಡಿದ್ದ ಕಾರು ಹಾಗೂ ಚಾಲಕನನ್ನು ವಶಕ್ಕೆ ಪಡೆದಿರುವ ಮಂಗಳೂರು ಪೊಲೀಸರು, ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮಂಗಳೂರು ಹೊರವಲಯದ ಕುಂಪಲ ನಿವಾಸಿ ಚರಣ್‌ನನ್ನು(31) ಮಂಗಳೂರಿನ ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ಜುಲೈ 19ರ ಸಂಜೆ ಆಂಬ್ಯುಲೆನ್ಸ್‌ಗೆ ದಾರಿ ಬಿಡದೆ ಅಡ್ಡಾದಿಡ್ಡಿ ಓಡಿಸಿ ಇರ್ಟಿಗಾ ಕಾರಿನ ಚಾಲಕ ಸತಾಯಿಸಿದ್ದ. ಮಂಗಳೂರು ಹೊರವಲಯದ ಜಪ್ಪಿನಮೊಗರು ರಸ್ತೆಯಲ್ಲಿ ನಡೆದಿದ್ದ ಘಟನೆ‌ ನಡೆದಿದ್ದು, ದೇರಳಕಟ್ಟೆ ಕಣಚೂರು ಆಸ್ಪತ್ರೆಯಿಂದ ಮಂಗಳೂರು ಆಸ್ಪತ್ರೆಗೆ ಎಮರ್ಜೆನ್ಸಿ ರೋಗಿಯನ್ನು ಕೊಂಡೊಯ್ಯುತ್ತಿದ್ದ ಆಂಬ್ಯುಲೆನ್ಸ್ ಇದಾಗಿತ್ತು.

ಚಾಲಕನ ವಿರುದ್ಧ ಐಪಿಸಿ 279 ಮತ್ತು ಮೋಟಾರು ವಾಹನ ಕಾಯ್ದೆ 194(E) ಅಡಿಯಲ್ಲಿ ಕೇಸು ದಾಖಲಾಗಿದ್ದು, ಕಾರು ಚಾಲಕನ ಪುಂಡಾಟದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

English summary
Car Driver arrested and Vehicle Seized for not Giving Way to Ambulance In Mangaluru outside.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X