ಮಂಗಳೂರು ಹೊರವಲಯದ ಅಡ್ಯಾರ ಬಳಿ ಬಸ್ ಪಲ್ಟಿ: 20 ಜನರಿಗೆ ಗಾಯ

ಮಂಗಳೂರು, ಆಗಸ್ಟ್ 01: ಟೈರ್ ಬ್ಲಾಸ್ಟ್ ಆದ ಪರಿಣಾಮ ಖಾಸಗಿ ಬಸ್ ರಸ್ತೆಯಲ್ಲಿ ಮಗುಚಿ ಬಿದ್ದು, ಹಲವಾರು ಪ್ರಯಾಣಿಕರು ಗಾಯಗೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ವಿಟ್ಲ - ಮಂಗಳೂರು ನಡುವೆ ಸಂಚರಿಸುವ ಆಸ್ಮಿತ ಹೆಸರಿನ ಬಸ್ ಮಂಗಳೂರು ಸಮೀಪ ಅಡ್ಯಾರ ಎಂಬಲ್ಲಿ ಪಲ್ಟಿಯಾಗಿದೆ.

ಬಸ್ ಪಲ್ಟಿಯಾಗುವ ಮೊದಲು ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿದೆ. ವಿಟ್ಲ ದಿಂದ ಮಂಗಳೂರು ಕಡೆಗೆ ಹೊರಟ ಬಸ್ ನ ಟೈರ್ ಅಡ್ಯಾರ್ ಬಳಿ ಬ್ಲಾಸ್ಟ್ ಆಗಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಡಿವೈಡರ್ ಮೇಲಿಂದ ಹಾದು, ಮಂಗಳೂರು - ಬಿ ಸಿ ರೋಡ್ ಕಡೆ ಚಲಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ನಂತರ ರಸ್ತೆಯ ಮೇಲೆ ಮಗುಚಿ ಬಿದ್ದಿದೆ.

Bus accident in Mangaluru , 20 injured

ಈ ಘಟನೆಯಲ್ಲಿ ಬಸ್ ನಲ್ಲಿದ್ದ 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕಾರ್ ನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಖಾಸಗಿ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ ನಲ್ಲಿ ಗಾಯಗೊಂಡವರನ್ನು ಮಂಗಳೂರಿನ ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ.

Bus accident in Mangaluru , 20 injured

ವಿಟ್ಲ- ಮಂಗಳೂರು ನಡುವೆ ಸಂಚರಿಸುವ ಈ ಆಸ್ಮಿತ ಬಸ್ ನ ಎಲ್ಲಾ ಟೈರ್ ಗಳು ಸವೆದಿದ್ದು ಸಂಚಾರಕ್ಕೆ ಅಯೋಗ್ಯವಾಗಿದ್ದು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಬಸ್ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+