ಇನ್ಮುಂದೆ ಬಗ್ಗೀಸ್ ನಲ್ಲಿ ತೆರಳಿ ಪಿಲಿಕುಳ ನಿಸರ್ಗಧಾಮದ ಸೌಂದರ್ಯ ಸವಿಯಿರಿ
ಮಂಗಳೂರು, ಜನವರಿ 23: ಮಂಗಳೂರು ಹೊರವಲಯದ ಪ್ರಸಿದ್ಧ ಪಿಲಿಕುಳ ನಿಸರ್ಗಧಾಮದ ಪ್ರಕೃತಿಯ ಸೊಬಗನ್ನು ಬಗ್ಗೀಸ್ ಗಳ ಮೇಲೆ ತೆರಳುತ್ತಾ ಸವಿಯಬಹುದಾಗಿದೆ.
ಮಲೆನಾಡು ಪ್ರದೇಶದ ಅಭಿವೃದ್ಧಿ ಮಂಡಳಿ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಿಂದ ಪಿಲಿಕುಳ ನಿಸರ್ಗಧಾಮದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಬ್ಯಾಟರಿ ಚಾಲಿತ ವಾಹನ ಬಗ್ಗೀಸ್ ಗಳನ್ನು ಖರೀದಿಸಲಾಗಿದೆ.
ಸುಮಾರು 1 ಕೋಟಿ ರೂಪಾಯಿ ಅನುದಾನದಲ್ಲಿ ಖರೀದಿಸಲಾದ ತಲಾ 5 ಲಕ್ಷ ರೂ.ವೆಚ್ಚದ ಒಟ್ಟು 16 ಬಗ್ಗೀಸ್ ಗಳಲ್ಲಿ ಪ್ರಸ್ತುತ ಹದಿನಾಲ್ಕು ಬಗ್ಗೀಸ್ ಗಳು ನಿನ್ನೆಯಿಂದ ಪಿಲಿಕುಳ ನಿಸರ್ಗಧಾಮದಲ್ಲಿ ಕಾರ್ಯನಿರ್ವಹಿಸಲು ಅರಂಭಿಸಿವೆ.

ಪ್ರವಾಸಿಗರು ತಮ್ಮ ವಾಹನಗಳನ್ನು ಪಾರ್ಕಿಂಗ್ ಪ್ರದೇಶದಲ್ಲಿ ನಿಲುಗಡೆ ಮಾಡಿ, ಟಿಕೆಟ್ ಪಡೆದು ಪಕ್ಕದಲ್ಲೇ ಇರುವ ಬಗ್ಗೀಸ್ ಗಳ ಮೂಲಕ ಪಿಲಿಕುಳದ ಸೊಬಗನ್ನು ಕಣ್ತುಂಬಿಕೊಳ್ಳ ಬಹುದಾಗಿದೆ. ಈ ಬಗ್ಗೀಸ್ ಗಳಲ್ಲಿ ತೆರಳಲು ವಯಸ್ಕರಿಗೆ 25 ರೂಪಾಯಿ ಹಾಗೂ ಮಕ್ಕಳಿಗೆ 10 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ.
ಈ ಬಗ್ಗೀಸ್ ವಾಹನಗಳ ಸೇವೆ ಬೆಳಗ್ಗೆ 10 ರಿಂದ ಆರಂಭವಾಗಿ ಸಂಜೆ 5.30ರವರೆಗೆ ಪ್ರವಾಸಿಗರಿಗೆ ದೊರೆಯಲಿದ್ದು, ಒಂದು ಸಲ ಟೀಕೆಟು ಪಡೆದುಕೊಂಡರೆ ಒಂದು ವಾಹನದಲ್ಲಿ ಇಳಿದು ಮತ್ತೊಂದು ವಾಹನದಲ್ಲಿ ಹತ್ತಿ ವಾಪಾಸ್ ಬರಬಹುದು ಅಥವಾ ಮತ್ತೊಂದು ಕಡೆಗೆ ಹೋಗಬಹುದುದಾಗಿದೆ.

ಪಿಲಿಕುಳ ನಿಸರ್ಗಧಾಮ ಸುಮಾರು 300 ಎಕರೆ ಪ್ರದೇಶವನ್ನು ಆವರಿಸಿಕೊಂಡಿದ್ದು, ಜೈವಿಕ ಉದ್ಯಾನವನ, ಪ್ರಾದೇಶಿಕ ವಿಜ್ಞಾನ ಕೇಂದ್ರ, ಕರಕುಶಲ ಕೇಂದ್ರ, ಗುತ್ತಿನ ಮನೆ, ಪಾರ್ಕ್ ಸೇರಿದಂತೆ ನಾನಾ ವೀಕ್ಷಣೀಯ ಸ್ಥಳಗಳಿವೆ . ಇವೆಲ್ಲವನ್ನು ಕಡೆಗೂ ಕ್ಲಪ್ತ ಸಮಯದಲ್ಲಿ ವೀಕ್ಷಿಸಲು ಪ್ರವಾಸಿಗರಿಗೆ ಈ ಬಗ್ಗೀಸ್ ಗಳು ಅನುಕೂಲಕಾರಿಯಾಗಲಿದೆ.
ಮುಲ್ಕಿ ಮೂಡಬಿದರೆ ಶಾಸಕ ಉಮಾನಾಥ ಕೋಟ್ಯಾನ್ ನಿನ್ನೆ ಈ ಬಗ್ಗೀಸ್ ಗಳಿಗೆ ಚಾಲನೆ ನೀಡಿದ್ದಾರೆ. ಪರಿಸರವನ್ನು ಕಾಪಾಡಿ, ನಿಸರ್ಗದ ಸೌಂದರ್ಯವನ್ನು ಪ್ರವಾಸಿಗರು ಸವಿಯಲು ಈ ವಾಹನಗಳು ಬಹಳ ಉಪಯುಕ್ತವಾಗಿದೆ. ಪಿಲಿಕುಳ ನಿಸರ್ಗಧಾಮ ರಾಷ್ಟ್ರದಲ್ಲಿಯೇ ಪ್ರತಿಷ್ಠಿತ ನಿಸರ್ಗಧಾಮವಾಗಿದೆ.
ಈ ಪ್ರದೇಶದಲ್ಲಿ ಹೊಗೆ ಮುಕ್ತ ಪರಿಸರ ನಿರ್ಮಾಣಕ್ಕೆ ಈ ವಾಹನಗಳು ನಾಂದಿಯಾಗಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.
-
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ












Click it and Unblock the Notifications