ಪುತ್ತೂರು: ಕೋರೆ ಮಾಲಿಕನ ಮೇಲೆ ಬ್ಲೇಡ್ ಸಾದಿಕ್ ತಂಡದಿಂದ ದಾಳಿ
ಪುತ್ತೂರು, ಜೂನ್ 28: ಪುತ್ತೂರು ಠಾಣಾ ವ್ಯಾಪ್ತಿಯ ಕಬಕದಲ್ಲಿ ಕೋರೆ ಮಾಲಿಕನ ಮೇಲೆ ರೌಡಿಗಳು ದಾಳಿ ನಡೆಸಿದ್ದಾರೆ. ಕಾರಿನಲ್ಲಿ ಬಂದ ರೌಡಿಗಳ ತಂಡ ಕಲ್ಲಂದಡ್ಕ ಕೋರೆ ಮಾಲಿಕ ಖಾದರ್ ಎಂಬವರ ಮೇಲೆ ದಾಳಿ ನಡೆಸಿದೆ.
ಕಲ್ಲಂದಡ್ಕ ಕೋರೆ ಮಾಲಿಕ ಖಾದರ್ ಮೇಲೆ ವಿಟ್ಲದ ರೌಡಿ ಬ್ಲೇಡ್ ಸಾದಿಕ್ ತಂಡ ದಾಳಿ ನಡೆಸಿದೆ. ದಾಳಿ ನಡೆಸಿದ್ದನ್ನು ಸಾರ್ವಜನಿಕರು ನೋಡಿದ್ದು, ಬ್ಲೇಡ್ ಸಾದಿಕ್ ಮತ್ತು ಆತನ ಐದು ಜನ ಸಹಚರರು ಐ20 ಕಾರಿನಲ್ಲಿ ಮಾಣಿ ಕಡೆ ಪರಾರಿಯಾಗಿದ್ದಾರೆ.

ಕೊಲೆ ಯತ್ನ, ಹಲ್ಲೆ, ಅಪಹರಣ, ಸೇರಿದಂತೆ ಕರ್ನಾಟಕ ಮತ್ತು ಕೇರಳದಲ್ಲಿ ಬ್ಲೇಡ್ ಸಾದಿಕ್ ಮೇಲೆ ಸಾಕಷ್ಟು ಪ್ರಕರಣಗಳಿವೆ. ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಗೂಂಡಾ ಕಾಯ್ದೆಯಡಿ ಈ ಹಿಂದೆ ರೌಡಿ ಸಾದಿಕ್ ಒಮ್ಮೆ ಬಂಧಿತನಾಗಿದ್ದ ಕೂಡ.
ಗಾಯಾಳು ಖಾದರ್ ರನ್ನು ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.












Click it and Unblock the Notifications