ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಮಾರ್ಟ್ ಸಿಟಿಯತ್ತ ಸಾಗುತ್ತಿರುವ ಮಂಗಳೂರು ಅಭಿವೃದ್ಧಿಗೆ ಶ್ರಮವಹಿಸುವೆ: ನೂತನ ಮೇಯರ್ ಜಯಾನಂದ್

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 9: ಮಂಗಳೂರು ಮಹಾನಗರ ಪಾಲಿಕೆಯ 23ನೇ ಅವಧಿಯ ಮೇಯರ್, ಉಪಮೇಯರ್ ಚುನಾವಣಾ ಪ್ರಕ್ರಿಯೆ ಶುಕ್ರವಾರ ಮಂಗಳಾ ಸಭಾಂಗಣದಲ್ಲಿ ನಡೆದಿಯಿತು. ಮೇಯರ್ ಹಾಗೂ ಉಪಮೇಯರ್ ಆಗಿ ಬಿಜೆಪಿಯ ಸದಸ್ಯ ಜಯಾನಂದ್ ಅಂಚನ್ ಹಾಗೂ ಪೂರ್ಣಿಮಾ ಆಯ್ಕೆಯಾಗಿದ್ದಾರೆ‌.

ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಜಿ.ಸಿ ಪ್ರಕಾಶ್ ನೇತ್ರತ್ವದಲ್ಲಿ ಚುನಾವಣೆ ನಡೆದಿದ್ದು, 65 ಮತಗಳಲ್ಲಿ 62 ಮತಗಳು ಚಲಾವಣೆಯಾಗಿ 46 ಮತ ಪಡೆದು ಜಯಾನಂದ್ ಮೇಯರ್ ಆಗಿ ಆಯ್ಕೆಯಾದರು. ಪೂರ್ಣಿಮಾ ಕೂಡ 46 ಮತ ಪಡೆದು ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.

Breaking: ಮಂಗಳೂರು ಪಾಲಿಕೆ: ಬಿಜೆಪಿಯ ಜಯಾನಂದ ಅಂಚನ್‌ ಮೇಯರ್, ಪೂರ್ಣಿಮಾ ಉಪಮೇಯರ್Breaking: ಮಂಗಳೂರು ಪಾಲಿಕೆ: ಬಿಜೆಪಿಯ ಜಯಾನಂದ ಅಂಚನ್‌ ಮೇಯರ್, ಪೂರ್ಣಿಮಾ ಉಪಮೇಯರ್

ಇನ್ನು ಕಾಂಗ್ರೆಸ್‌ನ ಮೇಯರ್ ಅಭ್ಯರ್ಥಿ ಶಶಿಧರ್ ಹೆಗ್ಡೆ ಪರ 14 ಮತ ಸಿಕ್ಕಿದ್ದು, ಉಪಮೇಯರ್ ಸ್ಥಾನದ ಕಾಂಗ್ರೆಸ್ ಅಭ್ಯರ್ಥಿ ಝೀನತ್ ಶಂಶುದ್ದೀನ್ ಕೂಡ 14 ಮತಗಳನ್ನು ಪಡೆದರು.

BJPs Jayanand Anchan elected as new Mayor, Poornima deputy mayor To mangaluru corporation

ಸದಸ್ಯರು ಕೈ ಎತ್ತುವ ಮೂಲಕ ನಡೆದ ಮೇಯರ್ ಚುನಾವಣಾ ಪ್ರಕ್ರಿಯೆ ನಡೆದಿದ್ದು, ಬಿಜೆಪಿ ಸದಸ್ಯರ ಸಂಖ್ಯಾಬಲವೇ ಅತೀ ಹೆಚ್ಚು ಇರುವ ಮಂಗಳೂರು ಮಹಾನಗರ ಪಾಲಿಕೆ ಮತ್ತೆ ಬಿಜೆಪಿ ಕೈ ಸೇರಿದೆ.

ಒಂದು ಕಾಲದ ಪಾಲಿಕೆ ಜಮೇದಾರ್ ಮಗ ಈಗ ಮೈಸೂರು ಮೇಯರ್!ಒಂದು ಕಾಲದ ಪಾಲಿಕೆ ಜಮೇದಾರ್ ಮಗ ಈಗ ಮೈಸೂರು ಮೇಯರ್!

ಮೇಯರ್ ಆಗಿ ಆಯ್ಕೆಯಾದ ಬಳಿಕ ಮಾತನಾಡಿದ ಜಯಾನಂದ ಅಂಚನ್, " ಪಾಲಿಕೆ ಕೆಲಸಗಳನ್ನು ಮಾಡಲು ಅವಕಾಶ ನೀಡಿದ್ದಕ್ಕೆ ಸರ್ವ ಸದಸ್ಯರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಸ್ಮಾರ್ಟ್ ಸಿಟಿಯಾಗುವಲ್ಲಿ ದಾಪುಗಾಲು ಇಡುತ್ತಿರುವ ಮಂಗಳೂರಿ‌ನ ಸಕಲ ಅಭಿವೃದ್ಧಿಗಾಗಿ ಶ್ರಮ ವಹಿಸುತ್ತೇನೆ" ಅಂತಾ ಹೇಳಿದ್ದಾರೆ.

ಮೇಯರ್ ಅವಧಿ ಹೆಚ್ಚಿಸಬೇಕೆಂದ ನಿರ್ಗಮಿತ ಮೇಯರ್
ಬಳಿಕ ಪಾಲಿಕೆಯ ನಿರ್ಗಮಿತ ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, " ಪಾಲಿಕೆಯ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಮೇಯರ್ ಗಳ ಒಂದು ವರ್ಷದ ಅಧಿಕಾರಾವಧಿ‌ ಕಡಿಮೆಯಾಗಿದೆ. ಆದ್ದರಿಂದ ಈ ಅಧಿಕಾರದ ಅವಧಿಯ ವಿಸ್ತರಣೆಯ ಅಗತ್ಯವಿದೆ. ಆಲ್ ಇಂಡಿಯಾ ಕೌನ್ಸಿಲ್ ‌ಆಫ್ ಮೇಯರ್ಸ್ ನಲ್ಲೂ ಈ ರೀತಿಯ ಚರ್ಚೆ ನಡೆದಿದೆ. ಬಿಬಿಎಂಪಿಯಲ್ಲಿ ಮೇಯರ್ ಅಧಿಕಾರವಧಿಯನ್ನು ಎರಡುವರೆ ವರ್ಷಕ್ಕೆ ವಿಸ್ತರಿಸಿ ಮುಂದಿನ ಚುನಾವಣೆ ಸಮಯಕ್ಕೆ ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ಹೇಳಿದ್ದಾರೆ.

BJPs Jayanand Anchan elected as new Mayor, Poornima deputy mayor To mangaluru corporation

ಭಕ್ತವತ್ಸಲ ಸಮಿತಿಯು ಮೇಯರ್ ಅಧಿಕಾರಾವಧಿ ಎರಡು ವರ್ಷಕ್ಕೆ ವಿಸ್ತರಣೆ ಮಾಡಬೇಕೆಂಬ ಪ್ರಸ್ತಾವನೆ ನೀಡಿದೆ. ಆದರೆ ಅದು ಸರಕಾರದ ನಿರ್ಧಾರವಾಗಿದೆ. ಬಿಬಿಎಂಪಿ ಮೇಯರ್ ಅಧಿಕಾರಾವಧಿ ವಿಸ್ತರಣೆ ಮಾಡಿರುವ ಹಿನ್ನೆಲೆಯಲ್ಲಿ ಇನ್ನುಳಿದ ಮಹಾನಗರ ಪಾಲಿಕೆಗಳಲ್ಲೂ ಅನುಷ್ಠಾನಕ್ಕೆ ಬರಬಹುದು ಎಂಬ ವಿಶ್ವಾಸವಿದೆ. ಇಡೀ ದೇಶದಲ್ಲಿ ಯಾವ ರಾಜ್ಯದಲ್ಲೂ ಮೇಯರ್ ಅಧಿಕಾರವಧಿ ಕೇವಲ ಒಂದು ವರ್ಷವಿರುವುದು ಕರ್ನಾಟಕದಲ್ಲಿ ಮಾತ್ರ. ಹೆಚ್ಚಿನ ರಾಜ್ಯದಲ್ಲಿ ಮೇಯರ್ ಅಧಿಕಾರಾವಧಿ ಐದು ವರ್ಷಗಳು. ಈಗಾಗಲೇ ಸಿಎಂ ಅಧ್ಯಕ್ಷತೆಯಲ್ಲಿ ರಾಜ್ಯ ವಿಕೇಂದ್ರೀಕರಣ ಹಾಗೂ ಯೋಜನಾಭಿವೃದ್ಧಿ ಸಮಿತಿಯನ್ನು ರಚಿಸಲಾಗಿದೆ. ಈ ಮೂಲಕ ಸ್ಥಳೀಯ ಸಂಸ್ಥೆಗಳ ಬಲವರ್ಧನೆ ಮಾಡುವ ಕಾರ್ಯ ಆಗುತ್ತಿದೆ ಎಂದು ಪ್ರೇಮಾನಂದ ಶೆಟ್ಟಿ ಹೇಳಿದ್ದಾರೆ.

English summary
BJP's Jayanand Anchan elected as new Mayor and another member of BJP Poornima selected as deputy mayor to mangaluru corporation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X